ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು: ಎಂಕೆ ಸ್ಟಾಲಿನ್ | Secular democratic forces must unite against BJP: MK Stalin

India

oi-Mamatha M

|

Google Oneindia Kannada News

ಚೆನ್ನೈ, ಜೂನ್. 21: ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ತಮಿಳುನಾಡಿನ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಒಗ್ಗಟ್ಟು ಮತ್ತು ಯಶಸ್ಸನ್ನು ರಾಷ್ಟ್ರಮಟ್ಟದಲ್ಲಿ ಪುನರಾವರ್ತಿಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿರುವಾರೂರಿನಲ್ಲಿ ಹೇಳಿದ್ದಾರೆ. ತಿರುವಾರೂರಿನಲ್ಲಿ ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಸ್ಮಾರಕವಾದ ಕಲೈಂಜರ್ ಕೊಟ್ಟಂ (Kalaignar Kottam) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ.

“ನಾವು ಈಗ ನಿರ್ಣಾಯಕ ಘಟ್ಟದಲ್ಲಿ ನಿಂತಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿದ್ದೇವೆ. ನಾವು ಅದನ್ನು ಮಾಡಲು ವಿಫಲವಾದರೆ, 3,000 ರಿಂದ 4,000 ವರ್ಷಗಳ ಇತಿಹಾಸವಿರುವ ತಮಿಳುನಾಡು ನಾಶವಾಗುತ್ತದೆ. ಹೀಗಾಗಿ ಬಿಜೆಪಿಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವುದು ತಮಿಳುನಾಡು, ತಮಿಳರು ಮತ್ತು ಭಾರತದ ಭವಿಷ್ಯಕ್ಕೆ ಹಾನಿಕರ” ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.

Secular democratic forces must unite against BJP: MK Stalin

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ತಮಿಳುನಾಡಿನಲ್ಲಿ ಒಂದಾದ ಹಾಗೆ, ಅದೇ ರೀತಿಯ ಏಕೀಕೃತ ಕ್ರಮ ಮತ್ತು ಸಮನ್ವಯವನ್ನು ರಾಷ್ಟ್ರಮಟ್ಟದಲ್ಲಿ ಪುನರಾವರ್ತಿಸಬೇಕು. ನಾವು ಗೆಲ್ಲಬೇಕು ಮತ್ತು ಅದಕ್ಕೂ ಮೊದಲು ನಮಗೆ ಏಕತೆ ಬೇಕು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಬಿಹಾರ ಮುಂದಾಳತ್ವ ವಹಿಸಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

Tamil Nadu: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಪೋಸ್ಟ್- ಬಿಜೆಪಿ ಕಾರ್ಯಕರ್ತೆಯ ಬಂಧನTamil Nadu: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಪೋಸ್ಟ್- ಬಿಜೆಪಿ ಕಾರ್ಯಕರ್ತೆಯ ಬಂಧನ

ಜೂನ್ 23 ರಂದು ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕರೆದಿರುವ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಮುಂಬರುವ ಸಭೆಯನ್ನು ಉಲ್ಲೇಖಿಸಿದೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಂದಾಗಿಸಲು ಪ್ರಯತ್ನಿಸುತ್ತಿರುವ ನಿತೀಶ್ ಕುಮಾರ್ ಬಿಜೆಪಿಯೇತರ ಪಕ್ಷಗಳ ಸಭೆ ಕರೆದಿದ್ದಾರೆ.

“ದೇಶದಲ್ಲಿ 10 ವರ್ಷಗಳ ಬಿಜೆಪಿ ಆಡಳಿತದಲ್ಲಿ ಹಬ್ಬಿರುವ ಬೆಂಕಿಯನ್ನು ನಂದಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಿಮ್ಮ ಆಶಯಗಳನ್ನು ಹೊತ್ತು ಸಭೆಗೆ ಹಾಜರಾಗುತ್ತೇನೆ. ಪಾಟ್ನಾದಲ್ಲಿ ಪ್ರಜಾಪ್ರಭುತ್ವದ ದೀಪ ಬೆಳಗಲಿದೆ. ಭಾರತದ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆಗೆ ನಾವು ಸಜ್ಜಾಗೋಣ” ಎಂದು ಸ್ಟಾಲಿನ್ ಕರೆ ನೀಡಿದ್ದಾರೆ.

ಎಂಕೆ ಸ್ಟಾಲಿನ್ ಅವರು ತಮ್ಮ ತಂದೆಯನ್ನು ಉತ್ತಮ ರಾಷ್ಟ್ರೀಯ ರಾಜಕೀಯ ನಾಯಕ ಎಂದು ಹೊಗಳಿದ್ದಾರೆ. ಅವರು ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ದೇಶದಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳು ಮತ್ತು ಸರ್ಕಾರಗಳ ಬದಲಾವಣೆಗೆ ಅವರು ಕಾರಣರಾಗಿದ್ದರು ಎಂದು ಹೇಳಿದ್ದಾರೆ.

ಸ್ಮಾರಕವನ್ನು ಉದ್ಘಾಟಿಸಬೇಕಿದ್ದ ನಿತೀಶ್ ನಿತೀಶ್ ಕುಮಾರ್ ಅವರು ಆರೋಗ್ಯದ ಕಾರಣದಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಸಭೆಯನ್ನು ಉಲ್ಲೇಖಿಸಿದ ನಿತೀಶ್ ಕುಮಾರ್, ವಿರೋಧ ಪಕ್ಷಗಳು ಒಗ್ಗೂಡಿದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಆಡಳಿತವನ್ನು ಕೊನೆಗೊಳಿಸಬಹುದು ಎಂದು ತಿಳಿಸಿದ್ದಾರೆ.

ಕಲೈಂಜರ್ ಕೊಟ್ಟಂನಲ್ಲಿ ‘ಮುತ್ತುವೇಲರ್ ನೂಲಗಂ’ (ಗ್ರಂಥಾಲಯ)ವನ್ನು ಉದ್ಘಾಟಿಸಿದ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಕರುಣಾನಿಧಿಯವರ ಸಾಮಾಜಿಕ ನ್ಯಾಯದ ಪರಂಪರೆಯನ್ನು ಮುನ್ನಡೆಸುವಂತೆ ಪ್ರಜಾಪ್ರಭುತ್ವ ಶಕ್ತಿಗಳಿಗೆ ಕರೆ ನೀಡಿ, ದಿವಂಗತ ದ್ರಾವಿಡ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜೊತೆಗೆ ಎಂಕೆ ಸ್ಟಾಲಿನ್ ಅವರು ತಮ್ಮ ತಂದೆಯ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

English summary

Secular democratic forces must unite against BJP to dislodge BJP from power at the Centre says Tamil Nadu Chief Minister M.K.Stalin in Tiruvarur. know more.

Story first published: Wednesday, June 21, 2023, 20:00 [IST]

Source link