ಕೆಲವು ರೈಲುಗಳ ಮಾರ್ಗ ಬದಲಾವಣೆ, ಪಟ್ಟಿ ನೋಡಿ | Non Interlocking Work Central Railway Changed Some Train Routes

Karnataka

oi-Gururaj S

|

Google Oneindia Kannada News

ಬೆಂಗಳೂರು, ಜುಲೈ 09; ಜೋಡಿ ಮಾರ್ಗದ ಕಾಮಗಾರಿಯ ಕಾರಣಕ್ಕಾಗಿ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲು ಕೇಂದ್ರ ರೈಲ್ವೆ ವಲಯವು ಸೂಚನೆ ನೀಡಿದೆ. ಜುಲೈ 7 ರಿಂದ 10ರ ತನಕ ರೈಲುಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಈ ಬಗ್ಗೆ ಮಾಹಿತಿ ತಿಳಿದಿರುವುದು ಒಳಿತು.

ನಾಂದ್ರೆ ಮತ್ತು ಸಾಂಗ್ಲಿ ನಿಲ್ದಾಣಗಳ ನಡುವಿನ ಜೋಡಿ ಮಾರ್ಗದ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

train route changed

ಎಸ್‌ಎಸ್‌ಎಸ್ ಹುಬ್ಬಳ್ಳಿ, ಕೆಎಸ್ಆರ್ ಬೆಂಗಳೂರು ಹೀಗೆ ರಾಜ್ಯದ ವಿವಿಧ ನಿಲ್ದಾಣಗಳಿಂದ ಸಂಚಾರ ನಡೆಸುವ ರೈಲುಗಳಿಗೆ ಇದು ಅನ್ವಯವಾಗುತ್ತದೆ. ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಣದ ಮಾಹಿತಿ ಇಲ್ಲಿದೆ.

ರೈಲುಗಳ ಮಾರ್ಗ ಬದಲಾವಣೆ

* ಜುಲೈ 10 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17317 ಎಸ್. ಎಸ್. ಎಸ್. ಹುಬ್ಬಳ್ಳಿ – ದಾದರ್‌ ಎಕ್ಸ್‌ಪ್ರೆಸ್‌ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಮತ್ತು ಕರಾಡ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

* ಜುಲೈ 9 ರಂದು ದಾದರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17318 ದಾದರ್ – ಎಸ್. ಎಸ್. ಎಸ್. ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ಜುಲೈ 9 ರಂದು ಅಜ್ಮೀರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್‌ಪ್ರೆಸ್‌ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸತಾರಾ, ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

* ಜುಲೈ 9 ರಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು – ಜೋಧಪುರ ಎಕ್ಸ್‌ಪ್ರೆಸ್ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ಜುಲೈ 9 ರಂದು ಪುದಚೇರಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11006 ಪುದಚೇರಿ-ದಾದರ್‌ ಎಕ್ಸ್‌ಪ್ರೆಸ್‌ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಕರಾಡ್ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ಜುಲೈ 9 ರಂದು ದೆಹಲಿಯ ಹಜರತ್‌ ನಿಜಾಮುದ್ದಿನ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದಿನ್ – ವಾಸ್ಕೋ-ಡ-ಗಾಮಾ ಗೋವಾ ಎಕ್ಸ್‌ಪ್ರೆಸ್ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸತಾರಾ, ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಮಾರ್ಗ ಮಧ್ಯ ನಿಯಂತ್ರಣ

* ಜುಲೈ 7 ರಂದು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16532 ಕೆ.ಎಸ್.ಆರ್ ಬೆಂಗಳೂರು – ಅಜ್ಮೀರ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತಿದೆ.

* ಜುಲೈ 8 ರಂದು ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ. 16506 ಕೆ. ಎಸ್. ಆರ್. ಬೆಂಗಳೂರು – ಗಾಂಧಿಧಾಮ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತಿದೆ.

* ಜುಲೈ 10 ರಂದು ವಾಸೋ-ಡ-ಗಾಮಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12779 ವಾಸ್ಕೊ-ಡ- ಗಾಮಾ – ಹಜರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

English summary

Central railway changed some train routes due to pre non interlocking and other works in connection with doubling of Nandre –Sangli section. Here are the list.

Story first published: Sunday, July 9, 2023, 13:08 [IST]

Source link