Gossips
oi-Muralidhar S
‘ಕೆಜಿಎಫ್’
ಬಳಿಕ
ಯಶ್
ಹೊಸ
ಸಿನಿಮಾ
ಅನೌನ್ಸ್
ಮಾಡೋಕೆ
ಸಾಕಷ್ಟು
ಸಮಯ
ತೆಗೆದುಕೊಳ್ಳುತ್ತಿದ್ದಾರೆ.
ಇತ್ತ
ಅವರ
ಅಭಿಮಾನಿಗಳು
19ನೇ
ಸಿನಿಮಾ
ಅನೌನ್ಸ್
ಆಗುವುದನ್ನೇ
ಎದುರು
ನೋಡುತ್ತಿದ್ದಾರೆ.
ಆದರೆ,
ರಾಕಿ
ಭಾಯ್
ಮಾತ್ರ
ಚಿಕ್ಕದೊಂದು
ಸುಳಿವು
ಬಿಟ್ಟು
ಕೊಟ್ಟು
ಸುಮ್ಮನಾಗಿದ್ದಾರೆ.
ಇತ್ತೀಚೆಗೆ
ಯಶ್
ಪತ್ನಿ
ರಾಧಿಕಾ
ಪಂಡಿತ್
ಹಾಗೂ
ಮಕ್ಕಳೊಂದಿಗೆ
ದೇವಸ್ಥಾನಕ್ಕೆ
ಹೋಗಿದ್ದರು.
ಆ
ವೇಳೆ
ತಮ್ಮ
ಮುಂದಿನ
ಸಿನಿಮಾ
ಬಗ್ಗೆ
ಸುಳಿವು
ನೀಡಿದ್ದಾರೆ.
ಅದೇ
ನಿರೀಕ್ಷೆಯಲ್ಲೀಗ
ಅವರ
ಅಭಿಮಾನಿಗಳಿಗೆ
ಕೂಡ
ಇದ್ದಾರೆ.
ಈ
ಮಧ್ಯೆ
ಅಕ್ಕಪಕ್ಕದ
ಚಿತ್ರರಂಗದಲ್ಲಿ
ಯಶ್
ಮುಂದಿನ
ಸಿನಿಮಾ
ಬಗ್ಗೆ
ಗಂಭೀರವಾಗಿ
ಚರ್ಚೆಯಾಗುತ್ತಿದೆ.
ಶೀಘ್ರದಲ್ಲಿಯೇ
ಯಶ್
ಹೊಸ
ಸಿನಿಮಾ
ಅನೌನ್ಸ್
ಮಾಡುವುದಾಗಿ
ಹೇಳಿದ್ದಾರೆ.
ಒಂದ್ಕಡೆ
ಆ
ಸಿನಿಮಾ
ಮೇಲೆ
ಕಣ್ಣಿದ್ದರೆ,
ಇನ್ನೊಂದ್ಕಡೆ
ಮುಂದಿನ
ಸಿನಿಮಾದಲ್ಲಿ
ಯಶ್
ದೊಡ್ಡ
ರಿಸ್ಕ್
ತೆಗೆದುಕೊಳ್ಳುತ್ತಿದ್ದಾರೆ
ಅಂತ
ಟಾಲಿವುಡ್‌ನಲ್ಲಿ
ಚರ್ಚೆಯಾಗುತ್ತಿದೆ.
ಅಷ್ಟಕ್ಕೂ
ಯಶ್
ತೆಗೆದುಕೊಳ್ಳುತ್ತಿರೋ
ರಿಸ್ಕ್
ಏನು?
ಇಷ್ಟೊಂದು
ಚರ್ಚೆಗೆ
ಕಾರಣವೇನು?
ಅನ್ನೋದನ್ನು
ತಿಳಿಯಲು
ಮುಂದೆ
ಓದಿ.
ರಾಕಿಂಗ್
ಜೋಡಿಯಂತೆ
ಅಭಿಮಾನಿ
ನಿಶ್ಚಿತಾರ್ಥ..
ಕಾಸ್ಟೂಮ್,
ಸೆಟ್
ಸೇಮ್
ಟು
ಸೇಮ್:
ರಾಧಿಕಾ
ಹೇಳಿದ್ದೇನು?
ರಿಸ್ಕ್
ತೆಗೆದುಕೊಳ್ತಿದ್ದಾರಾ
ಯಶ್?
ಪ್ಯಾನ್
ಇಂಡಿಯಾ
ಸ್ಟಾರ್
ಆಗಿ
ಹೊರ
ಹೊಮ್ಮಿದ
ಬಳಿಕ
ಯಶ್
ಹೊಸ
ಸಿನಿಮಾ
ಆಯ್ಕೆಯಲ್ಲಿ
ವಿಳಂಬ
ಆಗುತ್ತಿದೆ.
ಈ
ಮೊದಲು
‘ಮಫ್ತಿ’
ನಿರ್ದೇಶಕ
ನರ್ತನ್
ರಾಕಿಂಗ್
ಸ್ಟಾರ್
ಯಶ್‌ಗೆ
ಸ್ಕ್ರೀಪ್ಟ್
ಮಾಡುತ್ತಿದ್ದರು.
ಆದರೆ,
ಅದ್ಯಾಕೋ
ಯಶ್‌ಗೆ
ಹಿಡಿಸಿಲ್ಲ.
ಹೀಗಾಗಿ
ಮತ್ತೊಂದು
ಸ್ಕ್ರಿಪ್ಟ್
ಆಯ್ಕೆ
ಮಾಡಿಕೊಂಡಿದ್ದಾರೆ.
ಇದೇ
ಯಶ್
ತೆಗೆದುಕೊಳ್ಳುತ್ತಿರೋ
ದೊಡ್ಡ
ರಿಸ್ಕ್
ಎಂದು
ಹೇಳಲಾಗುತ್ತಿದೆ.
ಈಗಾಗಲೇ
ಚಿತ್ರರಂಗದಲ್ಲಿ
ಯಶ್
19ನೇ
ಸಿನಿಮಾ
ಆಕ್ಷನ್
ಕಟ್
ಹೇಳುವ
ನಿರ್ದೇಶಕರ
ಬಗ್ಗೆ
ಸುದ್ದಿ
ಓಡಾಡುತ್ತಿದೆ.
ಯಶ್
ಸಿನಿಮಾ
ನಿರ್ದೇಶಿಸುವ
ಪಟ್ಟಿಯಲ್ಲಿ
ಮಲಯಾಳಂ
ನಿರ್ದೇಶಕಿ
ಗೀತು
ಮೋಹನ್‌ದಾಸ್
ಹೆಸರು
ಓಡಾಡುತ್ತಿದೆ.
ಬಹುತೇಕ
ಇವರೇ
ಫಿಕ್ಸ್
ಅಂತಾನೂ
ಗುಲ್ಲೆದ್ದಿದೆ.
ಈ
ಮಧ್ಯೆ
ಯಶ್
ದೊಡ್ಡ
ರಿಸ್ಕ್‌ಗೆ
ಕೈ
ಹಾಕಿದ್ದಾರೆ
ಅಂತ
ತೆಲುಗು
ಚಿತ್ರರಂಗದಲ್ಲಿ
ಸುದ್ದಿಯಾಗುತ್ತಿದೆ.
ರಿಸ್ಕ್
ಯಾಕೆ?
ಏನಿದು?
ಕೇರಳ
ಮೂಲದ
ಗೀತು
ಮೋಹನ್‌ದಾಸ್
ನಟಿ
ಹಾಗೂ
ನಿರ್ದೇಶಕಿಯಾಗಿ
ಗುರುತಿಸಿಕೊಂಡಿದ್ದಾರೆ.
42ನೇ
ವಯಸ್ಸಿನ
ಗೀತು
ಮೋಹನ್‌ದಾಸ್
ಇತ್ತೀಚೆಗೆ
ನಿರ್ದೇಶಿಸಿದ
ಸಿನಿಮಾ
ಸಖತ್
ಸದ್ದು
ಮಾಡಿತ್ತು.
ಮಲಯಾಳಂ
ನಟ
ನಿವಿನ್
ಪೌಲಿ
ನಟಿಸಿರೋ
‘ಮೂತೊನ್’
ಸಿನಿಮಾದ
ನಿರ್ದೇಶಕಿ
ಇವರೇ..
2019ರಲ್ಲಿ
ತೆರೆಕಂಡಿದ್ದ
ಈ
ಸಿನಿಮಾಗೆ
ಸಿಕ್ಕಾಪಟ್ಟೆ
ಮೆಚ್ಚುಗೆ
ಸಿಕ್ಕಿತ್ತು.
ಗೀತು
ಮೋಹನ್‌ದಾಸ್
ಮಲಯಾಳಂ
ಹಾಗೂ
ತಮಿಳು
ಸಿನಿಪ್ರಿಯರಿಗೆ
ಹೆಚ್ಚಾಗಿ
ಗೊತ್ತಿದೆ.
ಆದರೆ,
ಕನ್ನಡಿಗರೂ
ಸೇರಿದಂತೆ
ಹಲವು
ಭಾಷೆಯ
ಸಿನಿಮಾ
ಪ್ರೇಮಿಗಳು
ಇವರ
ಪರಿಚಯ
ತೀರಾ
ಕಡಿಮೆ.
ಅಲ್ಲದೆ
ನಿರ್ದೇಶಿದ್ದೇ
ಮೂರು
ಸಿನಿಮಾ
ಅದರಲ್ಲೂ
ಒಂದು
ಶಾರ್ಟ್
ಫಿಲ್ಮ್.
ಹೀಗಾಗಿರುವಾಗ
ಯಶ್
19ನೇ
ಸಿನಿಮಾಗಿರುವ
ಒತ್ತಡವನ್ನು
ಹೇಗೆ
ಹ್ಯಾಂಡಲ್
ಮಾಡುತ್ತಾರೆ?
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
ಸದ್ದು
ಮಾಡುವಂತಹ
ಸಿನಿಮಾ
ಮಾಡುತ್ತಾರಾ?
ಅನ್ನೋ
ಪ್ರಶ್ನೆ
ಎದ್ದಿದೆ.
ಪ್ರಶಾಂತ್
ನೀಲ್
ಕೂಡ
ಹೊಸಬರೇ
‘ಕೆಜಿಎಫ್’
ಸಿನಿಮಾಗೆ
ಪ್ರಶಾಂತ್
ನೀಲ್
ಆಕ್ಷನ್
ಕಟ್
ಹೇಳುವಾಗಲೂ
ಒಂದೇ
ಸಿನಿಮಾ
ನಿರ್ದೇಶಿಸಿದ್ದರು.
ಆದ್ರೀಗ
ಪ್ಯಾನ್
ಇಂಡಿಯಾ
ಸ್ಟಾರ್
ನಿರ್ದೇಶಕ.
ಪ್ರಭಾಸ್
ಅಂತಹ
ಸೂಪರ್‌ಸ್ಟಾರ್‌ಗೆ
ಆಕ್ಷನ್
ಕಟ್
ಹೇಳುತ್ತಿದ್ದಾರೆ.
ಹಾಗೇ
ಗೀತು
ಮೋಹನ್‌ದಾಸ್
ಕೂಡ
ಪ್ಯಾನ್
ಇಂಡಿಯಾವನ್ನು
ಯಶಸ್ವಿಯಾಗಿ
ನಿರ್ದೇಶನ
ಮಾಡಬಹುದು.
ಆದರೆ,
ಯಶ್
ಹಾಗೂ
ಟೀಮ್
ಅಧಿಕೃತವಾಗಿ
ಸಿನಿಮಾ
ಅನೌನ್ಸ್
ಮಾಡಿಲ್ಲ.
ಹೀಗಾಗಿ
ನಿರ್ದೇಶಕರ
ಬಗ್ಗೆ
ಇನ್ನೂ
ಕ್ಲಾರಿಟಿ
ಬೇಕಿದೆ.
ಗೀತು
ಮೋಹನ್‌ದಾಸ್
ಸ್ಕ್ರಿಪ್ಟ್
ಬಗ್ಗೆ
ಯಶ್
ಕಾನ್ಫಿಡೆಂಟ್
ಆಗಿದ್ದಾರೆ
ಎನ್ನಲಾಗಿದೆ.
ಅವರಿಗೆ
ಕಥೆ
ಇಷ್ಟ
ಆಗಿದ್ದು,
ಶೀಘ್ರದಲ್ಲಿಯೇ
19ನೇ
ಪ್ರಾಜೆಕ್ಟ್
ಅನೌನ್ಸ್
ಮಾಡುತ್ತಾರೆ
ಅನ್ನೋ
ಮಾತು
ಹೇಳಿ
ಬರುತ್ತಿದೆ.
English summary
Yash’s Biggest Risk in Indian Cinema Industry
Friday, June 23, 2023, 19:00
Story first published: Friday, June 23, 2023, 19:00 [IST]