ಮುಲ್ಲನ್ಪುರ ಪಿಚ್ ವರದಿ
ಅತ್ತ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮುಲ್ಲನ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 205 ರನ್ ಗಳಿಸಿತು. ಚೇಸಿಂಗ್ ಮಾಡಿದ ಆತಿಥೇಯ ಪಂಜಾಬ್ ತಂಡ 155 ರನ್ ಮಾತ್ರ ಗಳಿಸಲು ಸಾಧ್ಯವಾಯ್ತು. ಈ ಪಿಚ್ನಲ್ಲಿ 180ರಿಂದ 185 ರನ್ ಸ್ಪರ್ಧಾತ್ಮಕ ಮೊತ್ತ ಎಂಬುದನ್ನು, ಪಂದ್ಯದ ನಂತರ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೊಂಡಿದ್ದರು. ಮುಲ್ಲನ್ಪುರದಲ್ಲಿ ಈವರೆಗೆ ಆಡಿದ ಆರು ಐಪಿಎಲ್ ಪಂದ್ಯಗಳಲ್ಲಿ, ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 174 ರನ್. ಇಲ್ಲಿ ಮೊದಲು ಬ್ಯಾಟ್ ಮತ್ತು ಬೌಲಿಂಗ್ ಮಾಡಿದ ತಂಡಗಳು ತಲಾ ಮೂರು ಬಾರಿ ಗೆದ್ದಿವೆ.