ಡಿಸ್ಕವರಿ ಚಾನೆಲ್‌ನ ‘ಇಂಡಿಯಾಸ್ ಅಲ್ಟಿಮೇಟ್ ವಾರಿಯರ್’ ಎಂಬ ರಿಯಾಲಿಟಿ ಶೋನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಕುಸ್ತಿ ಚಾಂಪಿಯನ್ ಆಗಿರುವ ಮಹಿಳೆ ರೌನಕ್ ಗುಲಿಯಾ ಅವರನ್ನು ಭೇಟಿಯಾದ ಶರ್ಮಾ, ಆ ಬಳಿಕ ವಂಚನೆಗೆ ಒಳಗಾಗಿರುವುದಾಗಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಪತಿ ಅಂಕಿತ್ ಒಬ್ಬ ಪ್ರಸಿದ್ಧ ಆರೋಗ್ಯ ಉತ್ಪನ್ನ ಉದ್ಯಮಿಯಾಗಿದ್ದು, ತಮ್ಮ ಉತ್ಪನ್ನಗಳಿಗೆ ಹೂಡಿಕೆದಾರರಿಗಾಗಿ ಹುಡುಕುತ್ತಿದ್ದಾರೆ ಎಂದು ಶರ್ಮಾ ಅವರಿಗೆ ಗುಲಿಯಾ ತಿಳಿಸಿದ್ದಾರಂತೆ. ಹೀಗಾಗಿ ಗುಲಿಯಾ ಅವರ ವ್ಯವಹಾರದಲ್ಲಿ 50 ಲಕ್ಷ ರೂಪಾಯಿ ಹೂಡಿಕೆ ಮಾಡಿರುವುದಾಗಿ ದೀಪಕ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡ ಮೊತ್ತದ ಲಾಭದ ಆಮಿಷವೊಡ್ಡಿ, ನಂತರ ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎಂದು ಅವರು ದೂರಿದ್ದಾರೆ.