ಕಾಶ್ಮೀರದಲ್ಲಿ ಯೋಧ ನಾಪತ್ತೆ: ಅಪಹರಣ ಎಂದ ಕುಟುಂಬ, ಶೋಧ ಆರಂಭಿಸಿದ ಭದ್ರತಾ ಪಡೆ | Indian Army soldier goes missing in Kashmir’s Kulgam, search launched

India

oi-Mamatha M

|

Google Oneindia Kannada News

ಶ್ರೀನಗರ, ಜುಲೈ. 30: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಭಾರತೀಯ ಸೇನೆಯ ಯೋಧ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ ನಿವಾಸಿ ಜಾವೇದ್ ಅಹ್ಮದ್ ವಾನಿ (25) ಶನಿವಾರ ಸಂಜೆ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಡಾಖ್ ಪ್ರದೇಶದಲ್ಲಿ ನೇಮಕಗೊಂಡಿದ್ದ ಜಾವೇದ್ ಅಹ್ಮದ್ ವಾನಿ ರಜೆಯಲ್ಲಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರನ್‌ಹಾಲ್‌ನಲ್ಲಿ ಅವರ ಕಾರು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಯೋಧನ ಪತ್ತೆಗೆ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿವೆ. ಕೆಲವು ವರದಿಗಳು, ಅವರ ಕುಟುಂಬವನ್ನು ಉಲ್ಲೇಖಿಸಿ, ಕುಲ್ಗಾಮ್ ಜಿಲ್ಲೆಯಲ್ಲಿ ಜಾವೇದ್ ಅಹ್ಮದ್ ವಾನಿಯನ್ನು ಅವರ ವಾಹನದಿಂದ ಅಪಹರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಅಪಹರಣದ ಬಗ್ಗೆ ಪೊಲೀಸರು ಇನ್ನೂ ಏನು ಹೇಳಿಲ್ಲ.

Indian Army soldier goes missing in Kashmir’s Kulgam, search launched

ಜಾವೇದ್ ಅಹ್ಮದ್ ವಾನಿ ಅವರು ದಿನಸಿ ವಸ್ತುಗಳನ್ನು ಖರೀದಿಸಲು ಚೋವಲ್ಗಾಮ್‌ಗೆ ಹೋಗಿದ್ದರು ಎಂದು ವರದಿಗಳು ಹೇಳಿವೆ. ಎಷ್ಟು ಹೊತ್ತಾದರೂ ಅವರು ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬವು ಅವನನ್ನು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡುಕಲು ಪ್ರಾರಂಭಿಸಿದೆ. ಹುಡುಕಾಟದ ವೇಳೆ ಪರಾನ್ಹಾಲ್ ಗ್ರಾಮದಲ್ಲಿ ಅವರ ಕಾರಿನಲ್ಲಿ ಅವರ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ.

3 ದಶಕಗಳ ನಂತರ ಶ್ರೀನಗರದಲ್ಲಿ ಶಿಯಾ ಸಮುದಾಯದಿಂದ ಮೊಹರಂ ಮೆರವಣಿಗೆ!3 ದಶಕಗಳ ನಂತರ ಶ್ರೀನಗರದಲ್ಲಿ ಶಿಯಾ ಸಮುದಾಯದಿಂದ ಮೊಹರಂ ಮೆರವಣಿಗೆ!

ಯೋಧ ಸಮೀರ್ ಅಹ್ಮದ್ ಮಲ್ಲಾ ಅಪಹರಣ, ಕೊಲೆ

ಕಳೆದ ವರ್ಷ, ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಸೇನಾ ಯೋಧ ಸಮೀರ್ ಅಹ್ಮದ್ ಮಲ್ಲಾನನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಅವರ ಮೃತದೇಹ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಹಣ್ಣಿನ ತೋಟದಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಸೇನಾ ಯೋಧ ಸಮೀರ್ ಅಹ್ಮದ್ ಮಲ್ಲಾ ತನ್ನ ತಾಯಿಗೆ ಮಾಡಿದ ಕೊನೆಯ ಕರೆ ಯೂಸುಫ್ ಕಾಂಟೂ ನೇತೃತ್ವದ ಲಷ್ಕರ್-ಎ-ತೈಬಾದ ವಶದಲ್ಲಿದ್ದಾಗ ಮಾಡಲಾಗಿತ್ತು.

ಅತ್ಯಂತ ಹಳೆಯ ಭಯೋತ್ಪಾದಕರಲ್ಲಿ ಒಬ್ಬರಾದ ಯೂಸುಫ್ ಕಾಂಟೂ ಅವರನ್ನು ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಕಾಶ್ಮೀರ ಶ್ರೇಣಿ) ವಿಜಯ್ ಕುಮಾರ್ ಅವರು “ಸೇನಾ ಯೋಧನ ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್” ಎಂದು ಕರೆದಿದ್ದಾರೆ. ಪೋಲೀಸರ ಪ್ರಕಾರ, ಯೂಸುಫ್ ಮಲ್ಲರನ್ನು ಸಭೆಗೆ ಕರೆದಿದ್ದ ಸ್ಥಳೀಯ ಗ್ರಾಮಸ್ಥ ಅಥೆರ್ ಇಲ್ಲಾಹಿ ಶೇಖ್ ಮೇಲೆ ತನಿಖೆ ನಡೆಯುತ್ತಿತ್ತು. ಆರೋಪಿ ನಿಷೇಧಿತ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಥೆರ್ ಇಲ್ಲಾಹಿ ಶೇಖ್‌ನೊಂದಿಗಿನ ಸಭೆಯ ಸ್ಥಳವನ್ನು ತಲುಪಿದ ಯೋಧರಿಗೆ, ಭಯೋತ್ಪಾದಕ ಯೂಸಫ್ ಕಾಂಟೂ ಸೇರಿದಂತೆ ಇತರ ಮೂವರು ಕಾಣಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿ ಶೇಖ್ ಮಾರ್ಚ್ 6 ರಂದು, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಮೂವರು ಭಯೋತ್ಪಾದಕರು ತನ್ನ ಮನೆಗೆ ಬಂದು ರಾತ್ರಿ ಅಲ್ಲಿಯೇ ಇದ್ದರು ಎಂದು ಒಪ್ಪಿಕೊಂಡಿದ್ದಾರೆ. ಮರುದಿನ, ಪಿತೂರಿಯ ಪ್ರಕಾರ ಸೇನಾ ಜವಾನ ಸಮೀರ್ ಅಹ್ಮದ್ ಮಲ್ಲಾ ಅವರನ್ನು ಭಯೋತ್ಪಾದಕ ಸಹಚರ ಅಥರ್ ಇಲ್ಲಾಹಿ ಶೇಖ್ ಅವರ ನಿವಾಸಕ್ಕೆ ಕರೆದು, ಅಲ್ಲಿ ಅವರನ್ನು ನಾಲ್ವರೂ ಅಪಹರಿಸಿ, ಹತ್ಯೆ ಮಾಡಿ ಮೃತದೇಹ ಎಸೆದಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

English summary

A 25-year-old Indian Army soldier missing from Jammu and Kashmir’s Kulgam district, Security forces launch a search operation. know more.

Story first published: Sunday, July 30, 2023, 11:28 [IST]

Source link