ಕಾಶಿಯಲ್ಲಿ 12,000 ಕೋಟಿ ರೂ.ಗಳ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ: ಬಿಜೆಪಿ ಕಾರ್ಯಕರ್ತರೊಂದಿಗೆ ‘ಟಿಫಿನ್ ಪೇ ಚರ್ಚಾ’ | PM Modi to launch projects worth Rs 12,000 crore in Kashi, hold ‘tiffin pe charcha’ with BJP workers

India

oi-Ravindra Gangal

|

Google Oneindia Kannada News

ಲಖನೌ, ಜುಲೈ 05: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಗೆ ಒಂದು ದಿನದ ಭೇಟಿಯನ್ನು ಶುಕ್ರವಾರ ನೀಡಲಿದ್ದಾರೆ. 12,148 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಆ ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ‘ಟಿಫಿನ್ ಪೆ ಚರ್ಚಾ’ ನಡೆಸಲಿದ್ದಾರೆ.

ವಾರಣಾಸಿ ತಲುಪುವ ಮುನ್ನ ಪ್ರಧಾನಿಯವರು ಗೋರಖ್‌ಪುರ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ಇದು ಗೋರಖ್‌ಪುರದಿಂದ ಲಖನೌ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಇದು ಈಶಾನ್ಯ ರೈಲ್ವೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮೊದಲ ಆವೃತ್ತಿಯಾಗಿದೆ.

ಸ್ಥಳೀಯ ಬಿಜೆಪಿ ಮೂಲಗಳ ಪ್ರಕಾರ, ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದವನ್ನು ನಡೆಸಲಿದ್ದಾರೆ. ಆ ಬಳಿಕ ಕಾರ್ಯಕರ್ತರೊಂದಿಗೆ ಟಿಫಿನ್‌ ಮಾಡಲಿದ್ದಾರೆ.

Prime Minister Narendra Modi

‘ಪ್ರಧಾನಿ ಅವರು ಜುಲೈ 7 ರ ಸಂಜೆ ವಾಜಿದ್‌ಪುರ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಜುಲೈ 8 ರಂದು ಬೆಳಿಗ್ಗೆ ವಾರಣಾಸಿಯಿಂದ ಹೊರಡುವ ಸಾಧ್ಯತೆಯಿದೆ. ಈ ವರೆಗೆ, ಜುಲೈ 8 ರಂದು ಯಾವುದೇ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿಲ್ಲ’ ಎಂದು ವಾರಣಾಸಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಸ್ಥಳೀಯ ಆಡಳಿತದ ಪ್ರಕಾರ, 10,720 ಕೋಟಿ ಮೌಲ್ಯದ 19 ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. 1,427 ಕೋಟಿ ರೂಪಾಯಿಗಳ 13 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಗ್ರಾಮೀಣ ವಸತಿ ಯೋಜನೆ ಮತ್ತು ಆಯುಷ್ಮಾನ್ ಕಾರ್ಡ್ ಯೋಜನೆ ಸೇರಿದಂತೆ ಪ್ರತಿ ಮೂರು ಯೋಜನೆಗಳ ಮೂರು ಫಲಾನುಭವಿಗಳಿಗೆ ಅವರು ಪ್ರಮಾಣಪತ್ರಗಳು ಮತ್ತು ಕೀಗಳನ್ನು ಹಸ್ತಾಂತರಿಸಲಿದ್ದಾರೆ.

SCO Summit India: ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್! SCO Summit India: ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್!

ಈ ಮೂರು ಯೋಜನೆಗಳ ತಲಾ 10 ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಲಿದ್ದಾರೆ. 5 ಲಕ್ಷ ಪಿಎಂ ಆವಾಸ್ ಯೋಜನೆ ಫಲಾನುಭವಿಗಳ ಗೃಹ ಪ್ರವೇಶ, ಅರ್ಹ ಫಲಾನುಭವಿಗಳಿಗೆ 1.25 ಲಕ್ಷ ಪಿಎಂ ಆವಾಸ್‌ ನಿಧಿ ಸಾಲಗಳ ವಿತರಣೆ ಮತ್ತು 2.88 ಕೋಟಿ ಆಯುಷ್ಮಾನ್ ಕಾರ್ಡ್‌ಗಳ ವಿತರಣೆಯನ್ನು ಪ್ರಧಾನಿ ಮಾಡಲಿದ್ದಾರೆ.

ವಾರಣಾಸಿ, ಜಾನ್‌ಪುರ್, ಘಾಜಿಪುರ, ಚಂದೌಲಿ, ಮಿರ್ಜಾಪುರ ಮತ್ತು ಭದೋಹಿ ಸೇರಿದಂತೆ ಆರು ಜಿಲ್ಲೆಗಳಿಂದ ವಿವಿಧ ಕಲ್ಯಾಣ ಯೋಜನೆಗಳ 14,000 ಫಲಾನುಭವಿಗಳನ್ನು ರ್ಯಾಲಿಗೆ ಆಹ್ವಾನಿಸಲಾಗುತ್ತದೆ.

ಗಾಜಿಪುರ ನಗರ-ಔನ್ರಿಹಾರ್ ರೈಲು ಮಾರ್ಗ, ಔನ್ರಿಹಾರ್-ಜೌನ್‌ಪುರ್ ಮಾರ್ಗ ಮತ್ತು ಭಟ್ನಿ-ಔನ್ರಿಹಾರ್ ಮಾರ್ಗ ಸೇರಿದಂತೆ ಮೂರು ರೈಲು ಮಾರ್ಗಗಳನ್ನು ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ.

ಮೋದಿಯವರು ವಾರಣಾಸಿಯಲ್ಲಿ ಉದ್ಘಾಟನೆ ಮಾಡಲಿರುವ ಯೋಜನೆಗಳಲ್ಲಿ ದಶಾಶ್ವಮೇಧ ಘಾಟ್‌ನಲ್ಲಿ ವಿಶಿಷ್ಟ ತೇಲುವ ಚೇಂಜ್ ರೂಮ್‌ಗಳ ಜೆಟ್ಟಿ ಸೇರಿದ್ದು, ಇದು ಭಕ್ತರ ಗಂಗಾ ಸ್ನಾನಕ್ಕೆ ಅನುಕೂಲವಾಗಲಿದೆ.

English summary

Prime Minister Narendra Modi will pay a one-day visit to Varanasi on Friday. He will inaugurate and lay the foundation stones of several development projects worth over Rs 12,148 crore

Story first published: Wednesday, July 5, 2023, 22:51 [IST]

Source link