Davanagere
lekhaka-Yogaraja G H
ದಾವಣಗೆರೆ, ಜೂನ್, 30: ಬೆಂಗಳೂರು ಬಿಟ್ಟರೆ ಹೆಚ್ಚಾಗಿ ಕಾಫಿ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿ ಇರುವುದೇ ದಾವಣಗೆರೆ ಜಿಲ್ಲೆಯಲ್ಲಿ. ಆದರೆ ಇದೇ ಜಿಲ್ಲೆ ಇದೀಗ ಈ ಉದ್ಯಮದಲ್ಲಿ ನಷ್ಟ ಅನುಭವಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಪ್ರಮುಖ ಕಾರಣ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಕಾಫಿ, ಟೀ ಬಹುತೇಕ ಮಂದಿ ಸೇವಿಸುತ್ತಾರೆ. ಕೆಲವರಿಗಂತೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಾಫಿ, ಟೀ ಇರಲೇಬೇಕು. ರಿಲೀಫ್‌ಗಾಗಿ ಕಾಫಿ, ಟೀ ಆಗಾಗ್ಗೆ ಕುಡಿಯುತ್ತಿರುತ್ತಾರೆ. ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಟೀ, ಕಾಫಿ ಸೇವನೆ ಮಾಡುವುದು ದಾವಣಗೆರೆ ಜಿಲ್ಲೆಯಲ್ಲಿ.
ಅಂದಾಜಿನ ಪ್ರಕಾರ ಕಳೆದ 20 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯೊಂದರಲ್ಲೇ ವರ್ಷಕ್ಕೆ 8 ಕೋಟಿ ರೂಪಾಯಿ ವಹಿವಾಟು ನಡೆಯುತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಕೇವಲ 2 ಕೋಟಿ ರೂಪಾಯಿ ವಹಿವಾಟು ಕೂಡ ದಾಟುತ್ತಿಲ್ಲ. ಆಗ ಕೆ.ಜಿ. ಕಾಫಿ, ಟೀ ಪುಡಿಗೆ 70 ರೂ. ಇತ್ತು. ಆದರೆ ಈಗ 60-700 ರೂಪಾಯಿಯವರೆಗೆ ಇದೆ.
ಕೈಕೊಟ್ಟ ಮುಂಗಾರು: ಕುಡಿಯುವ ನೀರಿನ ಕೊರತೆ ನೀಗಿಸಲು ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳಿವು
ಮೊದಲೆಲ್ಲಾ ವ್ಯಾಪಾರವೂ ಚೆನ್ನಾಗಿತ್ತು. ಜನರು ಹೆಚ್ಚಾಗಿ ಟೀ, ಕಾಫಿ ಸೇವಿಸುತ್ತಿದ್ದರು. ಬಹುರಾಷ್ಟ್ರೀಯ ಕಂಪನಿಗಳ ಕಾಫಿ, ಟೀ ಪುಡಿ ಈ ಕ್ಷೇತ್ರಕ್ಕೆ ಕಾಲಿಟ್ಟರೂ ಸಮಸ್ಯೆ ಆಗುತ್ತಿದ್ದುದ್ದು ಕೇವಲ ಶೇಕಡಾ 3ರಿಂದ 5 ರಷ್ಟು ಮಾತ್ರ. ಆದರೆ ಈಗಂತೂ ವ್ಯಾಪಾರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಟೀ, ಕಾಫಿ ಸೇವನೆ ಮಾಡುತ್ತಾರೆ. ಅಲ್ಲಿನ ಜನಸಂಖ್ಯೆಯೂ ಹೆಚ್ಚಿದೆ. ಆದರೆ ಬೆಂಗಳೂರು ಹೊರತುಪಡಿಸಿದರೆ ದಾವಣಗೆರೆಯಲ್ಲಿಯೇ ಅತಿ ಹೆಚ್ಚು ಟೀ, ಕಾಫಿ ಸೇವನೆ ಮಾಡುತ್ತಾರೆ. ವ್ಯಾಪಾರವೂ ಸಹ ಇಲ್ಲಿ ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಂತಹ ವ್ಯಾಪಾರ ಈಗ ಆಗುತ್ತಿಲ್ಲ.
ಕಾಫಿ ಪುಡಿ ಬೆಲೆ ಗಗನಕ್ಕೇರಿದೆ. ಈ ಕುರಿತು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕರ್ನಾಟಕ ರಾಜ್ಯ ಕಾಫಿ ಮಂಡಳಿಯ ಗಮನಕ್ಕೆ ತರಲಾಗಿದೆ. ಆದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳದ ಕಾರಣ ಸಂಕಷ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ಕೂಡಲೇ ಮಧ್ಯ ಪ್ರವೇಶಿಸಿ ಕಾಫಿ ವರ್ತಕರ ಹಿತ ಕಾಯಬೇಕು ಎಂಬುದು ದಾವಣಗೆರೆ ಜಿಲ್ಲಾ ಕಾಫಿ ಮತ್ತು ಟೀ ವರ್ತಕರ ಸಂಘದ ಅಧ್ಯಕ್ಷ ಸಿ.ಎ.ಶಿವರಾಂ ಆಗ್ರಹವಾಗಿದೆ.
ಗ್ರಾಹಕರಿಗೆ ಇಂದಿನ ದರದಲ್ಲಿ ಕಾಫಿ ಖರೀದಿಸಿ ಕಾಫಿ ಸವಿಯಲು ಸಾಧ್ಯವಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕಲಬೆರಕೆ ಕಾಫಿಯು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇದರ ದುಷ್ಪರಿಣಾಮದಿಂದಾಗಿ ಕಾಫಿ ಕುಡಿಯುವವರ ಸಂಖ್ಯೆ ತುಂಬಾ ಕ್ಷೀಣಿಸುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಈ ಕೂಡಲೇ ಕಾಫಿ ಮಂಡಳಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ.
ಇಂದಿನ ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಧಾರಣೆಗಳು ವಿಪರೀತವಾಗಿ ಏರಿಕೆಯಾಗಿದೆ. ಇದರಿಂದ ಕೇವಲ ಕಾಫಿ ಬೆಳೆಗಾರರಿಗೆ ಮತ್ತು ಕಾಫಿ ರಫ್ತುದಾರರಿಗೆ ಮಾತ್ರ ಅನುಕೂಲವಾಗಿದೆ. ಈ ಸಂಬಂಧ ಆಂತರಿಕ ಮಾರುಕಟ್ಟೆಯಲ್ಲಿ ಬೇಡಿಕೆಯು ಗಣನೀಯವಾಗಿ ಕುಸಿದ ಕಾರಣ ಸಣ್ಣ ಕಾಫಿ ವರ್ತಕರು ಮತ್ತು ರೆಸಾರ್ಟ್‌ಗಳು ಗಣನೀಯವಾಗಿ ನಷ್ಟ ಅನುಭವಿಸುತ್ತಿದ್ದು, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ರಾಜ್ಯದಲ್ಲಿ ಬೆಳೆಯುವ ಕಾಫಿ ಪ್ರಮಾಣದಲ್ಲಿ ಶೇಕಡಾ 10ರಷ್ಟು ಮಾತ್ರ ಆಂತರಿಕ ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿದೆ. ಈ ಕಾರಣದಿಂದಾಗಿ ದಿನದಿಂದ ದಿನಕ್ಕೆ ಕಾಫಿ ಮಾರಾಟಗಾರರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಈ ಹಿಂದೆ ದಾವಣಗೆರೆಯಲ್ಲಿ ಸುಮಾರು 34 ಕಾಫಿ ವರ್ತಕರಿದ್ದರು. ಆದರೆ ಇಂದು ಕೇವಲ ಬೆರಳಣಿಕೆಯನ್ನು ಉಳಿದಿದ್ದಾರೆ. ಇದೇ ರೀತಿ ಮುಂದುವರೆದರೆ ಕಲಬೆರಕೆ ಕಾಫಿ, ಟೀ ಪುಡಿ ಹೆಚ್ಚಾಗುತ್ತದೆ. ಗುಣಮಟ್ಟದ್ದು ಸಿಗುವುದು ತುಂಬಾನೇ ಕಡಿಮೆ ಆಗುತ್ತದೆ ಎಂಬ ಆತಂಕ ಕಾಫಿ, ಟೀ ವರ್ತಕರದ್ದಾಗಿದೆ.
ಬೆಲೆ ಏರಿಕೆಯಿಂದಾಗಿ ಆಗುತ್ತಿರುವ ನಷ್ಟಕ್ಕೆ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ನಮ್ಮ ವ್ಯಾಪಾರಗಳನ್ನು ಉಳಿಸಿಕೊಳ್ಳಲು ನಷ್ಟದಲ್ಲೇ ವ್ಯವಹಾರ ಮಾಡುತ್ತಿದ್ದೇವೆ. ಪರವಾನಗಿ, ವಿದ್ಯುಚ್ಛಕ್ತಿ ಬೆಲೆ ಏರಿಕೆ, ಕಾರ್ಮಿಕರ ನಿರ್ವಹಣಾ ವಚ್ಚದ ಜೊತೆಗೆ ತಯಾರಿಕ ವೆಚ್ಚವು ಹೆಚ್ಚಾಗುತ್ತಾ ಬಂದಿದೆ. ಇದರಿಂದಾಗಿ ವ್ಯವಹಾರ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಶಿವರಾಂ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇದ್ದ ಕಾಫಿ ಮಂಡಳಿಯು ನಿಯಮಿತವಾಗಿ ನಿಗದಿತ ಬೆಲೆಗೆ ಕಾಫಿಯನ್ನು ಆಂತರಿಕ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿತ್ತು. ಅಲ್ಲದೇ ನಿಯಂತ್ರಣವನ್ನೂ ಮಾಡುತ್ತಿತ್ತು. ಈಗ ಈ ವಿಧಾನವು ಇರುವುದಿಲ್ಲ. ಈ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇತ್ತ ಗಮನಹರಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂಬ ಒತ್ತಾಯಿಸಿದ್ದಾರೆ.
English summary
Coffee, tea industry in trouble at Davanagere, What is the reason?, here see details
Story first published: Friday, June 30, 2023, 19:27 [IST]