ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಶಾಸಕರು ಸಿಎಂಗೆ ಬರೆದಿರುವ ಪತ್ರವೇ ಸಾಕ್ಷಿ-ಸಿ.ಟಿ.ರವಿ | BJP National General Secretary CT Ravi Lashes Out At Congress

Chikkamagaluru

lekhaka-Veeresha H G

By ಚಿಕ್ಕಮಗಳೂರು ಪ್ರತಿನಿಧಿ

|

Google Oneindia Kannada News

ಚಿಕ್ಕಮಗಳೂರು, ಜುಲೈ 26: ಸದ್ಯ ರಾಜ್ಯದಲ್ಲಿ ಚುನಾವಣೆ ನಡೆದರೇ ಕಾಂಗ್ರೆಸ್ ಸರಕಾರ ತೋಪ್ಪೆದ್ದು ಹೋಗುತ್ತದೆ. ಈ ಸರ್ಕಾರ ಒಳ್ಳೆಯ ಆಡಳಿತ ನೀಡುವ ಯಾವ ಗ್ಯಾರೆಂಟಿಯೂ ಇಲ್ಲ. ಆ ಮನಸ್ಥಿತಿ ಅವರಿಗಿಲ್ಲ. ಸರ್ಕಾರ ರಚನೆಯಾದ ದಿನದಿಂದ ವ್ಯಾಪಾರಕ್ಕೆ ನಿಂತಿದ್ದು, ಎಲ್ಲ ಹುದ್ದೆಗಳನ್ನು ಹರಾಜು ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ದುರಾಡಳಿತಕ್ಕೆ ಶಾಸಕರು ಮುಖ್ಯಮಂತ್ರಿಗೆ ಬರೆದಿರುವ ಪತ್ರವೇ ಸಾಕ್ಷಿ. ರಾಜ್ಯ ಸರ್ಕಾರ ವ್ಯಾಪಾರಕ್ಕೆ ಇಳಿದಿದ್ದು, ಸರಕಾರಿ ಹುದ್ದೆಗಳನ್ನು ಹಾರಾಜು ಹಾಕುತ್ತಿದ್ದಾರೆ. ಒಳ್ಳೆಯ ಸರ್ಕಾರ ನೀಡುವ ಮನಸ್ಥಿತಿ ಇಲ್ಲವೆನ್ನುವುದು ಅವರ ಪಕ್ಷದ ಹಿರಿಯ ಶಾಸಕರು ಬರೆದಿರುವ ಪತ್ರವೇ ನಿದರ್ಶನವಾಗಿದೆ ಎಂದರು.

bjp-national-general-secretary-ct-ravi

ಸರ್ಕಾರ ರಚನೆಯಾಗಿ ಎರಡೇ ತಿಂಗಳಿಗೆ ಯಾವುದೇ ಸರ್ಕಾರದ ಶಾಸಕರು ತಮ್ಮ ಸರಕಾರದ ವಿರುದ್ಧ ತಿರುಗಿ ಬೀಳುವುದಿಲ್ಲ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬಹುಮತ ಇದ್ದರೂ ರಾಜ್ಯದ ಹಿತಾದೃಷ್ಟಿಯಿಂದ ಕೆಲಸ ಮಾಡುವ ಮನಸ್ಸಿಲ್ಲ, ಪಕ್ಷದ ವರಿಷ್ಠರು, ಮುಖಂಡರಲ್ಲೇ ಒಗ್ಗಟ್ಟು ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಹಿರಿಯ ಶಾಸಕರು ಬರೆದಿರುವ ಪತ್ರದಲ್ಲಿ ಕಾಮಗಾರಿಯ ಪಟ್ಟಿ ಕೊಟ್ಟರೇ ಮಧ್ಯವರ್ತಿಗಳು ಹಣದ ಬೇಡಿಕೆ ಇಡುತ್ತಾರೆಂದು ಹೇಳಿರುವುದು ರಾಜ್ಯ ಸರ್ಕಾರ ದಲ್ಲಾಳಿಗಳ ಕೈಗೆ ವ್ಯವಹಾರ ಒಪ್ಪಿಸಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಎಟಿಎಂ ಆಗಿ ಕೆಲಸ ಮಾಡುತ್ತಿದೆ. ವ್ಯವಹಾರದಲ್ಲಿ ನಿಖರತೆ ಇರಲಿ ಎನ್ನುವ ದೃಷ್ಟಿಯಿಂದ ದಲ್ಲಾಳಿಗಳ ಕೈಗೆ ವಸೂಲಿ ಅಧಿಕಾರ ಕೊಟ್ಟಂತೆ ಕಾಣುತ್ತಿದೆ ಎಂದು ಟೀಕಿಸಿದರು.

ಪತ್ರ ನಕಲಿಯಾಗಿದ್ದರೇ ಅದನ್ನು ಪ್ರಯೋಗ ಶಾಲೆಗೆ ಕಳಿಸಿಕೊಡಲಿ, ಆಗ ಪತ್ರದಲ್ಲಿರುವ ಸಹಿ ಅಸಲಿಯೋ, ಅಥವಾ ನಕಲಿಯೋ ಎನ್ನುವುದು ತಿಳಿಯುತ್ತದೆ. ಈ ಬಗ್ಗೆ ತನಿಖೆ ನಡೆಸಲಿ ಎಂದ ಅವರು, ಹಿರಿಯ ಶಾಸಕರು ಆಕ್ರೋಶಗೊಂಡಿರುವುದು ಸತ್ಯ, ಮಧ್ಯವರ್ತಿಗಳ ಮೂಲಕ ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡುತ್ತಿರುವುದು ಸತ್ಯ. ಇದನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ ಎಂದರು.

 Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯತ್ನಾಳ್? ಕೆರಳಿದ ಕುತೂಹಲ Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯತ್ನಾಳ್? ಕೆರಳಿದ ಕುತೂಹಲ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯೇ ಅಲ್ಲ. ಪಕ್ಷ ಹೇಳಿದ ಕೆಲಸವನ್ನು ನಿಷ್ಠೆಯಿಂದ ಹಿಂದೆಯೂ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಪಕ್ಷ ನೀಡಿದ ಕೆಲಸ ಮಾಡುತ್ತಿದ್ದೇನೆ ಎಂದರು.

ಕೆಜೆ ಹಳ್ಳಿ ಡಿ.ಜೆ.ಹಳ್ಳಿ ಪ್ರಕರಣ, ಶಿವಮೊಗ್ಗದಲ್ಲಿ ಹರ್ಷ ಕೊಲೆ ಹಾಗೂ ನಂತರದ ಗಲಭೆ, ಹುಬ್ಬಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಬೆಂಕಿ ಹಾಕಲು ಹೋದ ಪ್ರಕರಣದಲ್ಲಿ ಗಂಭೀರವಾದ ಅಪರಾಧಿಗಳನ್ನು ಕಾಂಗ್ರೆಸ್ ಅಮಾಯಕರು ಎಂದು ಪರಿಗಣಿಸಿರುವುದು ಅಪಾಯಕಾರಿ. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಮಾತ್ರವಲ್ಲ ದೇಶದ ಸಮಗ್ರತೆಗೂ ಧಕ್ಕೆ ತರುತ್ತದೆ. ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದ 32ಕ್ಕೂ ಹೆಚ್ಚು ಜನ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಾವಿಗೆ ಕಾರಣವಾಯಿತು. ಅಂದಿನ ತಪ್ಪನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಉಗ್ರ ಚಟುವಟಿಕೆ, ಸಮಾಜ ಘಾತಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರನ್ನು ಅಮಾಯಕರು ಎಂದು ಪರಿಗಣಿಸಿ ಪ್ರಕರಣ ಹಿಂಪಡೆಯಲು ಮುಂದಾಗಿರುವುದನ್ನು ಖಂಡಿಸುತ್ತೇವೆ. ಕಾಂಗ್ರೆಸ್ ನೀತಿಯ ವಿರುದ್ಧ ಹೋರಾಟ ರೂಪಿಸುವುದಾಗಿ ತಿಳಿಸಿದರು.

English summary

There is no guarantee that this government will give good governance BJP National General Secretary CT Ravi Lashes out at Congress. Know more

Story first published: Wednesday, July 26, 2023, 20:38 [IST]

Source link