Karnataka
oi-Reshma P

ಬೆಂಗಳೂರು, ಜುಲೈ 13: ನೀವು ಕಾಂಗ್ರೆಸ್ ಗೆ ಬಂದು ಮಲ್ಲೇಶ್ವರಂ ನಲ್ಲಿ ಗೆದ್ದು ತೋರಿಸಿ ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಿಜೆಪಿ ಸದಸ್ಯ ಡಾ.ಅಶ್ವಥ್ ನಾರಾಯಣ ಅವರಿಗೆ ಸವಾಲು ಹಾಕಿದ್ದಾರೆ.
ಚುನಾವಣಾ ಫಲಿತಾಂಶ ಬಂದು ಎರಡು ತಿಂಗಳಾದ್ರೂ ವಿಪಕ್ಷ ನಾಯಕ ಆಯ್ಕೆಯಾಗದ ಹಿನ್ನಲೆ ಇಂದು(ಗುರುವಾರ) ಸದನದಲ್ಲಿ ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ ವಿಪಕ್ಷ ಸ್ಥಾನದ ಕುರಿತು ಪ್ರಸ್ತಾಪಿಸಿದ್ದು, ಹೆಚ್ಚು ಮಾತನಾಡಿದರೆ ಹೆಚ್ಚು ಮಾರ್ಕ್ಸ್ ಸಿಗುತ್ತೆ, ಅಂಕಕ್ಕಾಗಿ ಪೈಪೋಟಿ ಮಾಡ್ತಿದ್ದಾರೆ ಎಂದು ಬಿಜೆಪಿ ಶಾಸಕರಿಗೆ ಮಾತಿನ ಚಾಟಿಯನ್ನ ಲಕ್ಷ್ಮಣ ಸವದಿ ಸವದಿ ಬೀಸಿದ್ದಾರೆ.
ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆ ವಿಳಂಬ ಹಿನ್ನೆಲೆಯಲ್ಲಿ ಹೆಚ್ಚಿನ ಮಾರ್ಕ್ಸ್ ಪಡೆಯಲು ಬಿಜೆಪಿ ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ ಬಿಜೆಪಿ ಶಾಸಕರಿಗೆ ಕುಟುಕಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಶಿವಲಿಂಗೇಗೌಡರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಪದೇ ಪದೇ ಅಡ್ಡಿ ಪಡಿಸುತ್ತಿದ್ದ ಬಿಜೆಪಿ ಸದಸ್ಯರನ್ನು ಉಲ್ಲೇಖಿಸಿ ಸವದಿ ಈ ರೀತಿ ಚಾಟಿ ಏಟು ನೀಡಿದರು. ಶಿವಲಿಂಗೇಗೌಡ ನೀನು ಅವರ ಮೇಲೆ ಬೀಳಬೇಡಿ. ಅವರಿಗೆ ಮಾತನಾಡಿದಂತೆ ಮಾರ್ಕ್ಸ್ ಸಿಗುತ್ತಿದೆ . ಯಾರು ಯಾರು ಎಷ್ಟು ಮಾತನಾಡುತ್ತಿದ್ದಾರೆ ಅನ್ನೋದರ ಮೇಲೆ ಮಾರ್ಕ್ಸ್ ಸಿಗುತ್ತದೆ ಎಂದರು. ಹೀಗಾಗಿ ಕೇಂದ್ರದ ವಿರುದ್ಧ ಮಾತನಾಡಿದ ತಕ್ಷಣ ಎದ್ದು ನಿಲ್ತಾರೆ ಎಂದು ಲಕ್ಷ್ಮಣ ಸವದಿ ಕಿಚಾಯಿಸಿದರು.
ಸವದಿ ಮಾತಿಗೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ನೀವು ನಮ್ಮಲ್ಲಿ ಇದ್ದವರು. ಈಗ ಅಲ್ಲಿ ಹೋಗಿದ್ದೀರಿ ಎಂದರು. ಇದಕ್ಕೆ, ನನ್ನ ಆತ್ಮ ಗೌರವಕ್ಕೆ ದಕ್ಕೆ ಬಂದಾಗ ಹೋರ ಬಂದಿದ್ದೇನೆ ಎಂದು ಸವದಿ ತಿರುಗೇಟು ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಅವರಿಗೆ ಶಿವಲಿಂಗೇಗೌಡ ಸವಾಲು ಹಾಕಿ, ನೀವು ಕಾಂಗ್ರೆಸ್ ಗೆ ಬಂದು ಮಲ್ಲೇಶ್ವರಂ ನಲ್ಲಿ ಗೆದ್ದು ತೋರಿಸಿ ಎಂದರು. ಇದಕ್ಕೆ ನಾನೇಕೆ ಬಿಜೆಪಿ ಬಿಟ್ಟು ಬರಲಿ ಎಂದು ಡಾ.ಅಶ್ವಥ್ ನಾರಾಯಣ ತಿರುಗೇಟು ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಲಿಂಗೇಗೌಡ, ನಿಮ್ಮನ್ನು ಏನು ಸುಮ್ಮನೆ ಬಿಡೋಕೆ ಆಗುತ್ತಾ..? ಎಂಪಿ ಎಲೆಕ್ಸನ್ ನಲ್ಲಿ ನಿಮ್ಮನ್ನು ಹಾಕೊಂಡು ಅರೀತ್ತೀವಿ. ಅಕ್ಕಿ ಯಾಕ್ರೀ ನೀವು ಕೊಟ್ಟಿಲ್ಲ? ನಿಮ್ಮನ್ನು ಸುಮ್ಮನೆ ಬಿಟ್ಟು ಬಿಡ್ತೀವಾ ಎಂದು ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.
ತೂತ್ ಕಾಂಗ್ರೆಸ್ ಅಂತಿರೇನ್ರಿ: ಸ್ವಪಕ್ಷದವರಿಂದಲೇ ಶಿವಲಿಂಗೇಗೌಡ ವಿರುದ್ಧ ಅಸಮಾಧಾನ
ಶಿವಲಿಂಗೇಗೌಡ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಷ್ಟು ದಿನ ಜೆಡಿಎಸ್ ನಲ್ಲಿ ಏನು ಅರಿದ್ರಿ..? ಇವಾಗ ಕಾಂಗ್ರೆಸ್ ನಲ್ಲಿ ಹೋಗಿ ಏನು ಅರಿದ್ರಿ.? ಅನ್ನೋದನ್ನು ಹೇಳ್ರಿ ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದರು.
ಇನ್ನೂ ರಾಜ್ಯಪಾಲರ ಭಾಷಣದ ವಂಧಾನ ನಿರ್ಣಯದ ಮೇಲೆ ಸಿಎಂ ಉತ್ತರ ನೀಡುವ ವೇಳೆ ಕೊಬ್ಬರಿ ಬೆಲೆ ವಿಚಾರವಾಗಿ ಚರ್ಚೆಗೆ ರೇವಣ್ಣ ಮನವಿ ಮಾಡಿದರು. ಅಲ್ಲದೆ ಕೈಯಲ್ಲಿ ಕೊಬ್ಬರಿ ಹಿಡಿದುಕೊಂಡು ಸದನದಲ್ಲಿ ಪ್ರದರ್ಶನ ಮಾಡಿದರು,ಈ ವೇಳೆ ಏ..ರೇವಣ್ಣ ಯಾವಗಲೂ ನಿಂಬೆಹಣ್ಣು ತರ್ತಾ ಇದ್ದೆ ಕೊಬ್ಬರಿ ತಂದಿದೇಯಲ್ಲ ಅಂದ ಸಿಎಂ ಸಿದ್ದರಾಮಯ್ಯ ಹೇಳಿದರು.
English summary
assembly session: Shivalingegowda challenged Ashwath Narayan to come to Congress and show victory in Malleswaram.
Story first published: Thursday, July 13, 2023, 23:21 [IST]