ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ; ಆಗಸ್ಟ್‌ 2 ರಂದು ಸಭೆ ಕರೆದ ಖರ್ಗೆ: ಕೈ ನಾಯಕರಿಗೆ ಕೊಡಲಿದ್ಯಾ ಹೈಕಮಾಂಡ್‌ ವಾರ್ನಿಂಗ್!?‌ | High Command Calls Meeting Of Karnataka Congress leaders

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 27: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎರಡು ತಿಂಗಳು ಕಳೆದಿದೆಯಷ್ಟೇ, ಹಲವು ಆಂತರಿಕ ಅಸಮಾಧಾನಗಳು ಬುಗಿಲೆದ್ದಿವೆ. ಈ ಹಿನ್ನೆಲೆ ಕಾಂಗ್ರೆಸ್‌ ಪಾಳಯದಲ್ಲಿನ ಅಸಮಾಧಾನವನ್ನ ಶಮನಗೊಳಿಸುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಮುಂದಾಗಿದ್ದಾರೆ.

ಹೌದು, ಕರ್ನಾಟಕ ಕಾಂಗ್ರೆಸ್​ನಲ್ಲಿ ಒಳ ಬೇಗುದಿ ಹೆಚ್ಚಾದ ಹಿನ್ನೆಲೆ ಎಚ್ಚೆತ್ತಿರುವ ಹೈಕಮಾಂಡ್, ಆಗಸ್ಟ್ 2 ರಂದು ದೆಹಲಿಯಲ್ಲಿ ರಾಜ್ಯ ನಾಯಕರ ಸಭೆ ಕರೆದಿದೆ. ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರೊಂದಿಗೆ ಸಭೆ ನಡೆಯಲಿದೆ. ಅಲ್ಲದೇ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೂ ಮಲ್ಲಿಕಾರ್ಜುನ್‌ ಖರ್ಗೆ ಬುಲಾವ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

high-command-calls-meeting

ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್‌,ಇದೀಗ 2024 ರ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚಿನ ಸ್ಥಾನವನ್ನ ಗೆಲ್ಲುವ ನಿಟ್ಟಿನಲ್ಲಿ ಹೈಕಮಾಂಡ್‌ ಸೂಚನೆ ನೀಡಿದೆ. ಆದರೆ, ಪಕ್ಷದಲ್ಲಿನ ನಾಯಕರು ಸ್ವಪಕ್ಷದ ನಾಯಕರ ವಿರುದ್ದವೇ ಅಸಮಾಧಾನ ಹೊರ ಹಾಕುತ್ತಿರುವುದು ಪಕ್ಷ ಡ್ಯಾಮೇಜ್‌ ಉಂಟು ಮಾಡಲಿದೆ ಎಂದು ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇನ್ನೂ ಮಲ್ಲಿಕಾರ್ಜುನ್‌ ಖರ್ಗೆಯವರು ಕರೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳ ವಿರುದ್ದ ಹಾಗೂ ಸಚಿವರ ವಿರುದ್ದ ಸ್ವಪಕ್ಷೀಯ ಶಾಸಕರೇ ಅಸಮಾಧಾನ ಹೊರಹಾಕುತ್ತಿದ್ದು, ಇದನ್ನು ತಣಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸಿದ್ದರಾಮಯ್ಯ ಸಚಿವ ಸಂಪುಟ ರಚನೆಯ ವೇಳೆ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್‌ ಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು. ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಬೇಸರಗೊಂಡಿದ್ದ ಬಿ ಕೆ ಹರಿ ಪ್ರಸಾದ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊರ ಹಾಕಿದ್ರು, ಮುಖ್ಯಮಂತ್ರಿ ಮಾಡುವುದು ಗೊತ್ತು ಹಾಗೂ ಇಳಿಸುವುದು ಗೊತ್ತು ಎಂದು ಮಾರ್ಮಿಕವಾಗಿ ನುಡಿದಿದ್ದರು.

ಇನ್ನೂ ಬಿ ಕೆ ಹರಿ ಪ್ರಸಾದ್‌ ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಕಾಂಗ್ರೆಸ್​ಗೆ ಮುಜುಗರ ಉಂಟು ಮಾಡಿತ್ತು. ಇನ್ನೂ ಬಿ ಕೆ ಹರಿಪ್ರಸಾದ್‌ ನಾನು ಯಾವ ಸ್ಥಾನಕ್ಕೂ ಆಸೆ ಪಟ್ಟಿಲ್ಲ ಎಂದು ಈಡಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡದ ಬಗ್ಗೆ ಅಸಮಾಧನ ಹೊರಹಾಕಿದ್ದರು.

ಇತ್ತ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಬಿಕೆ ಹರಿಪ್ರಸಾದ್ ಅವರ ಜೊತೆ ಗೌಪ್ಯ ಸಭೆ ನಡೆಸಿ ಮುನಿಸು ಶಮನಗೊಳಿಸುವ ಯತ್ನ ನಡೆಸಿದ್ದರು. ಆದರೆ, ಆ ಅಸಮಾಧಾನ ಶಮನವಾದಂತೆ ಕಾಣುತ್ತಿಲ್ಲ. ಹೀಗಾಗಿ ಬಿ ಕೆ ಹರಿಪ್ರಸಾದ್‌ ಗೂ ಸಹ ಹೈಕಮಾಂಡ್‌ ಸಭೆಗೆ ಬರುವಂತೆ ಬುಲಾವ್‌ ನೀಡಿದೆ ಎನ್ನಲಾಗಿದೆ.

ಇನ್ನೂ ಸಚಿವರ ವಿರುದ್ದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ಚರ್ಚೆ ಸರ್ಕಾರಕ್ಕೆ ಮುಜುಗರವನ್ನ ಉಂಟು ಮಾಡಿತ್ತು. ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರು ಅನುದಾನ ಬಿಡುಗಡೆ ಮಾಡಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಬಹಿರಂಗವಾಗಿತ್ತು. ಈ ಪತ್ರ ತೀವ್ರ ಚರ್ಚೆಗೂ ಕಾರಣವಾಗಿತ್ತು. ಇನ್ನೂ ಇದೇ ವಿಚಾರವನ್ನ ಅಸ್ತ್ರವನ್ನಾಗಿ ಮಾಡಿಕೊಂಡ ವಿಪಕ್ಷಗಳು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿತ್ತು. ಇತ್ತ ವಿಪಕ್ಷಗಳ ಟೀಕೆಯಿಂದ ಸರ್ಕಾರಕ್ಕೆ ಡ್ಯಾಮೇಜ್‌ ಆಗಲಿದೆ ಎಂದು ಎಚ್ಚೆತ್ತು. ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರು ನೀಡಿದ್ದರು.

ಒಟ್ನಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಗೆ ಆರಂಭದಲ್ಲೇ ಸ್ವಪಕ್ಷದ ನಾಯಕರಿಂದಲೇ ಮುಜುಗರ ಎದುರಾಗುತ್ತಿದ್ದು, ಈ ಎಲ್ಲಾ ಅಸಮಾಧಾನ ಹಾಗೂ ಶಾಸಕರು , ಸಚಿವರ ನಡುವಿನ ಸಮನ್ವಯ ಕೊರತೆ ಕುರಿತು ಹೈಕಮಾಂಡ್‌ ನಾಯಕರು ಚರ್ಚೆ ನಡೆಸಲಿದ್ದಾರೆ. ಎಲ್ಲಾದೇ ಸರ್ಕಾರದ ವಿರುದ್ದ ಹೇಳಿಕೆ ನೀಡದಂತೆ ಹೈಕಮಾಂಡ್‌ ಖಡಕ್‌ ಸೂಚನೆ ನೀಡಲಿದೆ ಎಂದು ಹೇಳಲಾಗಿದ್ದು, 2024 ರ ಲೋಕಸಭಾ ಚುನಾವಣೆಗೆ ಪ್ರತಿ ಸಚಿವರಿಗೂ ಹೈಕಮಾಂಡ್‌ ಟಾಸ್ಟ್‌ ನೀಡಲಿದೆ ಎಂದು ಹೇಳಲಾಗಿದೆ.

English summary

Mallikarjun Kharge calls meeting of Karnataka Congress leaders on August 2 in Delhi

Story first published: Friday, July 28, 2023, 7:00 [IST]

Source link