ಕಲಬುರಗಿ; ನೂರಾರು ಪ್ರಯಾಣಿಕರನ್ನು ಬಿಟ್ಟು ಹೋದ ರೈಲು! | Train Skips Hundreds Of Passengers At Kalaburagi Station

Kalaburagi

oi-Gururaj S

|

Google Oneindia Kannada News

ಕಲಬುರಗಿ, ಜೂನ್ 25; ಅಲ್ಲಿ ನೂರಾರು ಪ್ರಯಾಣಿಕರು ಇದ್ದರು. ರೈಲು ಸಹ ಬಂದಿತ್ತು. ಆದರೆ ಯಾರನ್ನೂ ಸಹ ಹತ್ತಿಸಿಕೊಳ್ಳದೇ ರೈಲು ಮುಂದೆ ಸಾಗಿದೆ. ಈ ಘಟನೆ ನಡೆದಿರುವುದು ಕಲಬುರಗಿ ರೈಲು ನಿಲ್ದಾಣದಲ್ಲಿ. ತಮ್ಮ ತಪ್ಪಿಗೆ ಸಿಬ್ಬಂದಿಗಳು ಪ್ರಯಾಣಿಕರ ಕ್ಷಮೆ ಕೇಳಿದ್ದಾರೆ.

ಭಾನುವಾರ ರೈಲು ನಂಬರ್ 17319 ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಕಲಬುರಗಿ ರೈಲು ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರನ್ನು ಬಿಟ್ಟು ಮುಂದೆ ಸಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡಿದರು.

Train Skips Hundreds Of Passengers At Kalaburagi Station

ಶನಿವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟಿದ್ದ ರೈಲು ಭಾನುವಾರ ಬೆಳಗ್ಗೆ 6.15ಕ್ಕೆ ಕಲಬುರಗಿ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ರೈಲಿಗಾಗಿ ನೂರಾರು ಪ್ರಯಾಣಿಕರು ಸಹ ಕಾಯುತ್ತಿದ್ದರು. ಆದರೆ ರೈಲು ಬೇರೆ ಪ್ಲಾಟ್‌ಫಾರಂ ಮೂಲಕ ತೆಲಂಗಾಣದ ಸಿಕಂದರಾಬಾದ್‌ಗೆ ಸಂಚಾರ ನಡೆಸಿದೆ.

ಪ್ರಯಾಣಿಕರ ಜೊತೆ ವಾಗ್ವಾದ; ಕಲಬುರಗಿ ರೈಲು ನಿಲ್ದಾಣದ ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ಪ್ರಯಾಣಿಕರು ಕಾಯುತ್ತಿದ್ದರು. ಆದರೆ ರೈಲು ನಿಲ್ದಾಣದ ಸಿಬ್ಬಂದಿ ರೈಲು ಬರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ರೈಲು ಬೇರೆ ಪ್ಲಾಟ್‌ ಫಾರಂ ಮೂಲಕ ಮುಂದೆ ಸಾಗಿದೆ.

ರೈಲು ಹೋದ ಬಳಿಕ ಪ್ರಯಾಣಿಕರು ರೈಲ್ವೆ ಸ್ಟೇಷನ್ ಮ್ಯಾನೇಜರ್‌ ಕಛೇರಿಗೆ ನುಗ್ಗಿ ವಾಗ್ವಾದ ನಡೆಸಿದರು. ತಮ್ಮಂದ ತಪ್ಪಾಗಿದೆ, ನಾವು ಘೋಷಣೆ ಮಾಡದ ಕಾರಣ ರೈಲು ಬೇರೆ ಪ್ಲಾಟ್ ಫಾರಂ ಮೂಲಕ ಮುಂದೆ ಸಾಗಿದೆ ಎಂದು ಸ್ಟೇಷನ್ ಮ್ಯಾನೇಜರ್ ಪ್ರಯಾಣಿಕರ ಕ್ಷಮೆ ಕೇಳಿದರು.

English summary

Train number 17319 Hubballi-Secunderabad train skips hundreds of passengers at Kalaburagi station on Sunday morning.

Story first published: Sunday, June 25, 2023, 13:53 [IST]

Source link