ಕಲಘಟಗಿ: ಬಿಜೆಪಿ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್‌ ನಿಧನ | Kalaghatagi: Former BJP MLA C.M.Nimbannavar passed away

Dharwad

oi-Sandesh R Pawar

By ಧಾರವಾಡ ಪ್ರತಿನಿಧಿ

|

Google Oneindia Kannada News

ಕಲಘಟಗಿ, ಜುಲೈ, 09: ಕ್ಷೇತ್ರದ ಮಾಜಿ ಬಿಜೆಪಿ ಶಾಸಕರಾಗಿದ್ದ ಸಿ.ಎಂ. ನಿಂಬಣ್ಣವರ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿತ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

MLA C.M.Nimbannavar passed away

ಸಿ.ಎಂ.ನಿಂಬಣ್ಣವರ ನಡೆದುಬಂದ ಹಾದಿ

ಸಿ.ಎಂ.ನಿಂಬಣ್ಣವರ ಅವರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ 1947ರಲ್ಲಿ ಜನಿಸಿದವರಾಗಿದ್ದರು. ಇವರ ಶಿಕ್ಷಣವನ್ನು ನೋಡುವುದಾದರೆ, ಧಾರವಾಡದ ಜೆಎಸ್‌ಎಸ್‌ ಬನಶಂಕರಿ ಆರ್ಟ್ಸ್ ಕಾಲೇಜ್‌ನಿಂದ ಇಂಗ್ಲಿಷ್‌ ವಿಷಯದಲ್ಲಿ ಬಿಎ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಹಾಗೂ ಎಲ್‌ಎಲ್‌ಬಿ ಪದವಿ, ಮೈಸೂರು ವಿವಿಯಿಂದ B.Ed. ಪದವಿಯನ್ನು ಪಡೆದಿದ್ದಾರೆ.

ನಂತರ ಕಲಘಟಗಿ ತಾಲೂಕಿನ ಮಿಶ್ರೀಕೋಟಿಯಲ್ಲಿರುವ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ 1970ರಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿ ಸೇವೆ ಆರಂಭಿಸಿ ಮುಂದೆ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದರು. ಬಳಿಕ ಅದೇ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು.

ಅಷ್ಟೇ ಅಲ್ಲದೆ ದೇಣಿಗೆ ಸಂಗ್ರಹಿಸಿ ಆಡಳಿತ ವರ್ಗದ ಸಹಕಾರದಿಂದ ಸಂಸ್ಥೆಗೆ ಅವಶ್ಯವಿದ್ದ 13 ಕೊಠಡಿಗಳ ಬೃಹತ್‌ ಕಟ್ಟಡ ನಿರ್ಮಿಸುವ ಮೂಲಕ ಜನರಿಂದ ಭಾರೀ ಮೆಚ್ಚುಗೆ ಪಡೆದಿದ್ದರು. ಹಾಗೆಯೇ ಶಿಕ್ಷಣ ಇಲಾಖೆಯಿಂದ ಅತ್ಯತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿದ್ದರು. 25 ವರ್ಷಗಳ ಸತತ ಸೇವೆ ನಂತರ ಇನ್ನೂ 10 ವರ್ಷಗಳ ಸೇವಾವಧಿ
ಇರುವಾಗಲೇ (1994 ಸೆಪ್ಟೆಂಬರ್‌ 30ರಂದು) ಸ್ವಯಂ ಸೇವಾ ನಿವೃತ್ತಿ ಹೊಂದಿ ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಸ್ವಯಂ ಸೇವಾ ನಿವೃತ್ತಿ ನಂತರ ವಕೀಲ ವೃತ್ತಿ ಆರಂಭಿಸಿದ್ದ ಅವರು ಕಲಘಟಗಿ ತಾಲೂಕಿನ ಗ್ರಾಮಾಂತರ ಜನರ ನಡುವಿನ ಅನೇಕ ಮೊಕದ್ದಮೆಗಳನ್ನು ರಾಜಿ ಸಂಧಾನದಿಂದ ಬಗೆಹರಿಸಿದ್ದರು. ಈ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು. ಜೊತೆಗೆ ವಕೀಲರ ಸಂಘದ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಕಾರ್ಯ ನಿರ್ವಹಿಸಿದ್ದವರಾಗಿದ್ದರು.

1980 ರಿಂದ ಕಲಘಟಗಿ ರೋಟರಿ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿ ಸೇವೆ. 1986-87ರಲ್ಲಿ ಅದೇ ಸಂಸ್ಥೆಯ ಅಧ್ಯಕ್ಷರಾಗಿ ಸಲ್ಲಿಸಿದ ಸಾಮಾಜಿಕ ಸೇವೆಗಾಗಿ ಸಂಸ್ಥೆಗೆ 5 ವಿಶೇಷ ಪ್ರಶಸ್ತಿಗಳನ್ನು ಪಡೆದುಕೊಂಡು. ಅಲ್ಲದೆ ವೈಯಕ್ತಿಕವಾಗಿ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇನ್ನು 2005-06ರಲ್ಲಿ ಎರಡನೇ ಬಾರಿಗೆ ರೋಟರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಇವರದ್ದಾಗಿದೆ.

English summary

Kalaghatagi’s Former BJP MLA C.M.Nimbannavar passed away Today

Source link