ಕರ್ನಾಟಕ ರಾಜಕೀಯ ಬದಲಾವಣೆ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ | Basavaraj Bommai Reaction About Congress Govt and 40 Percentage Commission Case

Davanagere

oi-Shankrappa Parangi

|

Google Oneindia Kannada News

ದಾವಣಗೆರೆ, ಜಲೈ 05: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನು ಆಗುತ್ತೋ ಗೊತ್ತಾಗುವುದಿಲ್ಲ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಸ್ವಪಕ್ಷ ಬಿಟ್ಟು ಬಿಜೆಪಿ ಸೇರಿ ಏಕನಾಥ್ ಶಿಂಧೆ ಸರ್ಕಾರದಲ್ಲಿ ಡಿಸಿಎಂ ಆದರು. ಈ ಪ್ರಕರಣ ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಮಾರ್ಮಿಕವಾಗಿ ಮಾತನಾಡಿದರು.

ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಹೇಳಿದ್ದು ಒಂದಾದರೆ, ನಂತರ ಮಾಡಿದ್ದು ಮತ್ತೊಂದು. ಗ್ಯಾರೆಂಟಿ 5 ದೋಖಾಗಳನ್ನು ನೀಡಿ ಜನರಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಸದನದ ಒಳಗೆ ಹೊರಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.

40 percentage commission case

ಬಿಜೆಪಿ ವಿರೋಧ ಪಕ್ಷದ ಸ್ಥಾನಕ್ಕೆ ದಿನಗಳಲ್ಲಿ ನಾಯಕನ ಆಯ್ಕೆ ಆಗುತ್ತದೆ. ಕೇಂದ್ರದ ನಾಯಕರು ಬೇರೆ ಬೇರೆ ರಾಜ್ಯಗಳ ವಿವಿಧ ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ತಡವಾಗಿದ್ದು, ಇದೀಗ ಕರ್ನಾಟಕ ರಾಜ್ಯ ಬಿಜೆಪಿ ಕುರಿತು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದರು.

ಭ್ರಷ್ಟಾಚಾರ ಹಗರಣಗಳ ತನಿಖೆ; ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿಭ್ರಷ್ಟಾಚಾರ ಹಗರಣಗಳ ತನಿಖೆ; ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ

ದುರುದ್ದೇಶ ತನಿಖೆ ಬೇಡ

ಸುದ್ದಿಗಾರರು ಕೇಳಿದ ಬಿಟ್ ಕಾಯನ್ ಹಗರಣದ ಪ್ರಶ್ನೆಗೆ ಉತ್ತರಿಸಿದ ಅವರು, 40ಪರ್ಸೆಂಟೇಜ್ ಹಗರಣ ಬಗ್ಗೆಃ ತನಿಖೆ ನಡೆಸಿಲಿ. ಅದರ ಜೊತೆ ಈಗಾಗಲೇ ಲೋಕಾಯುಕ್ತದಲ್ಲಿ ಕೆಲವು ಪ್ರಕರಣಗಳ ತನಿಖೆ ನಡೆಯುತ್ತಿದೆ. 2013 ರಿಂದ ಇಲ್ಲಿವೆರೆಗೂ ಎಲ್ಲಾ ಪ್ರಕರಣಗಳ ತನಿಖೆ ಕಮಿಷನ್ ಮುಂದೆ ಒಪ್ಪಿಸಲಿ. ಯಾವುದೋ ಒಂದು ಕೇಸ್ ಹಿಡಿದು ತನಿಖೆ‌ ನಡೆಸಬಾರದು ಎಂದು ಬಸವರಾಜ್ ಬೊಮ್ಮಾಯಿ ಆಗ್ರಹಿಸಿದರು.

40 percentage commission case

ಈ ಕಾಂಗ್ರೆಸ್ ಸರ್ಕಾರ ಸತ್ಯವಾಗಿಯು ಭ್ರಷ್ಟಾಚಾರದ ವಿರುದ್ಧವೇ ಆಡಳಿತ ನೀಡುವುದಾದರೆ 2013 ರಿಂದ 2023 ಮಾರ್ಚ್ ವರೆಗಿನ ಎಲ್ಲಾ ಹಗರಣ/ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕು. ಕೇವಲ ರಾಜಕೀಯ ದುರದ್ದೇಶದಿಂದ ಒಂದು ವಿಷಯದ ಮೇಲೆ ತನಿಖೆ ನಡೆಸುವುದು ಸರಿಯಲ್ಲ. ಎಲ್ಲ ಪ್ರಕರಣಗಳ ತನಿಖೆ ನಡೆಸಿ ಯಾರೆಲ್ಲ ತಪ್ಪಿತಸ್ಥರು ಇದ್ದಾರೆಯೋ ಅವರಿಗೆಲ್ಲ ಶಿಕ್ಷೆ ಕೊಡಲಿ ಎಂದು ಒತ್ತಾಯಿಸಿದರು.

ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರದ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರ ವಿರುದ್ಧ ಬಿಜೆಪಿ ಮಾಜಿ ಸಚಿವ ಮುನಿರತ್ನ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಆ ಬಗ್ಗೆ ಅಧ್ಯಕ್ಷರು ಇನ್ನೂವರೆಗೆ ದಾಖಲೆಯಾಗಲಿ, ಉತ್ತರವನ್ನಾಗಲಿ ನೀಡಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

English summary

Basavaraj Bommai reaction about congress govt and 40 percentage commission case.

Story first published: Wednesday, July 5, 2023, 19:52 [IST]

Source link