ಕರ್ನಾಟಕದಲ್ಲಿ ಮಳಿಗೆ ತೆರೆಯಲು ಕೇರಳ ಹಾಲು ಒಕ್ಕೂಟ ಚಿಂತನೆ | Kerala Milk Union is paning of opening a store in Karnataka

Karnataka

oi-Punith BU

|

Google Oneindia Kannada News

ಬೆಂಗಳೂರು, ಜೂನ್ 24: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆಯುವ ವಿವಾದದ ನಡುವೆ, ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಕೆಸಿಎಂಎಂಎಫ್) ತನ್ನ ಮಿಲ್ಮಾ ಬ್ರಾಂಡ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕರ್ನಾಟಕದಲ್ಲಿ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ.

ಮಿಲ್ಮಾ ಬ್ರ್ಯಾಂಡ್ ಹಾಲಿನ ಉತ್ಪನ್ನಗಳನ್ನು ಮಾತ್ರ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು ಮತ್ತು ಹಾಲು ಮಾರಾಟ ಮಾಡುವುದಿಲ್ಲ ಎಂದು ಕೆಸಿಎಂಎಂಎಫ್ ಅಧ್ಯಕ್ಷ ಕೆ ಎಸ್ ಮಣಿ ಹೇಳಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

Kerala Milk Union is paning of opening a store in Karnataka

ನಾವು ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಳಿಗೆಗಳನ್ನು ತೆರೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಚರ್ಚೆ ಶುರುವಾಗಿದೆ. ಕೇರಳದಲ್ಲಿ ನಂದಿನಿ ಔಟ್‌ಲೆಟ್‌ಗಳನ್ನು ತೆರೆಯುವ ಕೆಎಂಎಫ್‌ ನಿರ್ಧಾರದ ಮೇಲೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳೊಂದಿಗೆ ಇದು ಹೊಂದಿಕೆಯಾಯಿತು. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಮತ್ತು ಕೊಡಗಿನಲ್ಲಿ ಮಳಿಗೆಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇರಳದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕಾಗಿ ನಂದಿನಿ ಮಳಿಗೆಗಳನ್ನು ತೆರೆಯಲು ಕೆಎಂಎಫ್ ಇತ್ತೀಚಿನ ನಿರ್ಧಾರವನ್ನು ಕೆಸಿಎಂಎಂಎಫ್ ವಿರೋಧಿಸುತ್ತಿದೆ. ಒಂದು ರಾಜ್ಯದ ಹಾಲು ಮಾರಾಟ ಒಕ್ಕೂಟವು ಮತ್ತೊಂದು ರಾಜ್ಯದಲ್ಲಿ ಹಾಲು ಮಾರಾಟ ಮಾಡುವುದು ಸಹಕಾರಿ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೆಸಿಎಂಎಂಎಫ್ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಯು ಇದಕ್ಕೆ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿತ್ತು.

Kerala Milk Union is paning of opening a store in Karnataka

ಎನ್‌ಡಿಡಿಬಿಯ ಮಧ್ಯಸ್ಥಿಕೆಗೆ ಯಾವುದೇ ಪರಿಹಾರವಿಲ್ಲದಿದ್ದರೆ, ರಾಜ್ಯ ಸರ್ಕಾರವು ಕರ್ನಾಟಕ ಸರ್ಕಾರದೊಂದಿಗೆ ಸಮಸ್ಯೆ ಬಗ್ಗೆ ನೇರ ಚರ್ಚೆ ನಡೆಸಲಾಗುವುದು ಎಂದು ಕೇರಳದ ಪಶುಸಂಗೋಪನೆ ಸಚಿವ ಜೆ ಚಿಂಚು ರಾಣಿ ಈ ಹಿಂದೆ ಹೇಳಿದ್ದರು. ಇದಲ್ಲದೆ ಕರ್ನಾಟಕದ ನಂದಿನ ಹಾಲು ಕಳಪೆ ಗುಣಮಟ್ಟದ್ದಾಗಿದೆ. ಹೀಗಾಗಿ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಕೆಸಿಎಂಎಂಎಫ್) ಮಿಲ್ಮಾ ಹಾಲನ್ನು ಸೇವಿಸುವಂತೆ ಚಿಂಚು ರಾಣಿ ಅವರು ಅವರು ಇದೇ ಜೂನ್‌ ತಿಂಗಳಲ್ಲಿ ಕೇರಳದ ಜನರಿಗೆ ಕರೆ ನೀಡಿದ್ದರು.

ರಾಣಿ ಅವರು ಕೇರಳ ಪ್ರವೇಶಿಸುವ ಮುನ್ನ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಈ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ ಮತ್ತು ಕೇರಳದ ಜನರು ಮಿಲ್ಮಾ ಹಾಲನ್ನು ಸೇವಿಸುವಂತೆ ನಾನು ವಿನಂತಿಸುತ್ತೇನೆ, ಏಕೆಂದರೆ ಹಾಲು ನಮ್ಮ ಮನೆಗಳಲ್ಲಿ ಹೆಚ್ಚಾಗಿ ಮಕ್ಕಳು ಸೇವಿಸುತ್ತಾರೆ ಎಂದು ಹೇಳಿದ್ದರು.

English summary

Amid controversy over Karnataka Cooperative Milk Producers’ Federation (KMF) opening Nandini outlets in Kerala, Kerala Cooperative Milk Marketing Federation (KCMMF) is planning to open outlets in Karnataka to sell its Milma brand of milk products.

Story first published: Saturday, June 24, 2023, 14:10 [IST]

Source link