ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 24 ಪದಕ ಗೆದ್ದ ಕರ್ನಾಟಕದ ಕರಾಟೆ ಪಟುಗಳು-bengaluru news karnataka players win 24 medals in korea open international karate championship jra

ಹಿರಿಯ ಮಹಿಳಾ ವಿಭಾಗದಲ್ಲಿ ಫ್ರಾಂಕ್‌ ಅಂಟೋನಿ ಪಬ್ಲಿಕ್‌ ಶಾಲೆಯ ದಿವ್ಯ ಅರ್ಜುನ್‌ ಗುಪ್ತಾ ಎರಡು ಚಿನ್ನ ಮತ್ತು ತಂಡ ವಿಭಾಗದಲ್ಲಿ ಒಂದು ಬೆಳ್ಳಿ, ಕಿರಿಯರ ವಿಭಾಗದಲ್ಲಿ ಇದೇ ಶಾಲೆಯ ರೊನ್ಶಿ ಅರ್ಜುನ್‌ ಗುಪ್ತಾ ಬೆಳ್ಳಿ, ಬೆಥನಿ ಪ್ರೌಢ ಶಾಲೆಯ ನಿವೇದಿತ ಕೋದಂಡರಾಮ್‌ ಎರಡು ಬೆಳ್ಳಿ ಮತ್ತು ಒಂದು ಕಂಚು, ಮಹಿಳಾ ವಿಭಾಗದಲ್ಲಿ ದೊಡ್ಡ ನೆಕ್ಕುಂದಿಯ ವಿಬ್ಗಯಾರ್‌ ಶಾಲೆಯ ಗರ್ಗಿ ಸಂಗ್ಲಿಕರ್‌ ಎರಡು ಬೆಳ್ಳಿ, ಜಯನಗರದ ಜೈನ್‌ ಕಾಲೇಜಿನ ಅರ್ಜುನ್‌ ಪ್ರವೀನ್‌ ಮೆನನ್‌ ಪುರುಷರ ವಿಭಾಗದಲ್ಲಿ ಎರಡು ಕಂಚು, ಸೆಂಟ್‌ ಜೋಸೆಫ್‌ ಶಾಲೆಯ ರಯನ್‌ ಮನ್ಸೂರ್‌ ಅತಿ ಕಿರಿಯ ವಿಭಾಗದಲ್ಲಿ ಎರಡು ಕಂಚು, ನ್ಯೂ ಹಾರಿಜನ್‌ ಪಬ್ಲಿಕ್‌ ಶಾಲೆಯ ನಿಶಿತ್‌ ಎ ಜೈನ್‌ ಅತಿ ಕಿರಿಯರ ವಿಭಾಗದಲ್ಲಿ ಎರಡು ಕಂಚು, ಕ್ರೈಸ್ಟ್‌ ಕಾಲೇಜಿನ ಸಮೀಕ್ಷಾ ಪಿಎನ್‌ ಅವರು ಮಹಿಳೆಯರ ವಿಭಾಗದಲ್ಲಿ ತಲಾ ಒಂದೊಂದು ಬೆಳ್ಳಿ, ಕಂಚು, ವೈಟ್‌ ಫೀಲ್ಡ್‌ ಗ್ಲೋಬಲ್‌ ಶಾಲೆಯ ಅಮಿಝತೀನಿ ಗೋಪಣ್ಣ ಅವರು ಅತಿ ಕಿರಿಯ ವಿಭಾಗದಲ್ಲಿ ಕಂಚು, ಗೋಕುಲ್ಲ್‌ನ ನ್ಯೂ ಹಾರಿಜೋನ್‌ ಶಾಲೆಯ ಪ್ರಿಯಾನ್ಶಿ ಶರ್ಮಾ ಅವರು ಎರಡು ಬೆಳ್ಳಿ, ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

Source link