ಇದೇ ಮೊದಲಲ್ಲ
ಇತ್ತೀಚೆಗೆ ಕ್ರಿಕೆಟ್ ಆಡುತ್ತಿದ್ದ ಯುವಕೊನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿತ್ತು. ನವೆಂಬರ್ 28ರಂದು ಪುಣೆ ನಗರದ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ 35 ವರ್ಷದ ಕ್ರಿಕೆಟಿಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ನಡೆಸಲು ಮೈದಾನಕ್ಕೆ ಬಂದಿದ್ದ ಇಮ್ರಾನ್ ಪಟೇಲ್, ಪಿಚ್‌ನಲ್ಲಿ ಇರುವಾಗ ದಿಢೀರನೆ ಎದೆನೋವು ಎಂದು ಹೇಳಿದ್ದಾರೆ. ಮೈದಾನದ ಅಂಪೈರ್‌ಗಳಿಗೆ ತಮಗಾಗುತ್ತಿರುವ ಎದೆ ಹಾಗೂ ತೋಳಿನ ಭಾಗದ ನೋವಿನ ವಿಷಯ ತಿಳಿಸಿ, ಮೈದಾನದಿಂದ ಹೊರಹೋಗಲು ಅನುಮತಿ ಪಡೆದರು. ಆದರೆ, ಪೆವಿಲಿಯನ್ ಕಡೆಗೆ ಹಿಂತಿರುಗುವಾಗ ಇಮ್ರಾನ್ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದರು.