‘ಕನ್ನಡತಿ’ ಮುಗಿಯುತ್ತಿದ್ದಂತೆ ಸಿನಿಮಾ ಕಡೆ ಹೊರಳಿದ ರಂಜನಿ ರಾಘವನ್: ಈ ನಟಿಯ ಜರ್ನಿಯೇ ಅದ್ಭುತ | Kannadathi fame Ranjani Raghavan paired with Aditya in a movie; here is her journey

bredcrumb

Tv

oi-Muralidhar S

By ಅನಿತಾ ಬನಾರಿ

|

ಕಿರುತೆರೆಯ
ಮೂಲಕ
ಬಣ್ಣದ
ಲೋಕದ
ನಂಟು
ಬೆಳೆಸಿಕೊಂಡ
ಅನೇಕರು
ಮುಂದೆ
ಬೆಳ್ಳಿತೆರೆಯಲ್ಲಿ
ಮೋಡಿ
ಮಾಡುವುದು
ಇತ್ತೀಚಿನ
ದಿನಗಳಲ್ಲಿ
ಸರ್ವೇಸಾಮಾನ್ಯವಾದ
ಸಂಗತಿ.‌
ಕಿರುತೆರೆಯ
‘ಪುಟ್ಟಗೌರಿ’

ಸಾಲಿಗೆ
ಹೊಸದಾಗಿ
ಸೇರಿದ್ದಾರೆ.
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಕನ್ನಡತಿ’
ಧಾರಾವಾಹಿಯಲ್ಲಿ
ನಾಯಕಿ
ಭುವನೇಶ್ವರಿ
ಆಲಿಯಾಸ್
ಸೌಪರ್ಣಿಕಾ
ಆಗಿ
ಅಭಿನಯಿಸಿದ್ದ
ರಂಜನಿ
ರಾಘವನ್
ಹೊಸ
ಸಿನಿಮಾವನ್ನು
ಒಪ್ಪಿಕೊಂಡಿದ್ದಾರೆ.

ಕಿಶೋರ್
ಮೇಗಳಮನೆ
ನಿರ್ದೇಶನದ
ಇನ್ನು
ಹೆಸರಿಡಬೇಕಾದ
ಸಿನಿಮಾದಲ್ಲಿ
ಸೈಕಾಲಜಿಸ್ಟ್
ಆಗಿ
ರಂಜನಿ
ರಾಘವನ್‌
ನಟಿಸಲಿದ್ದಾರೆ
.
ಸಸ್ಪೆನ್ಸ್
ಥ್ರಿಲ್ಲರ್
ಕಥೆಯನ್ನು
ಒಳಗೊಂಡಿರುವ

ಸಿನಿಮಾದಲ್ಲಿ
ಡೆಡ್ಲಿಸೋಮ
ಸಿನಿಮಾ
ಖ್ಯಾತಿಯ
ಆದಿತ್ಯ
ನಾಯಕರಾಗಿ
ಬಣ್ಣ
ಹಚ್ಚಲಿದ್ದಾರೆ.
ಸಿನಿಮಾದ
ಶೂಟಿಂಗ್
ಈಗಾಗಲೇ
ಶುರುವಾಗಿದ್ದು,
ಚಿಕ್ಕಮಗಳೂರು
ಹಾಗೂ
ಬೆಂಗಳೂರು
ಸುತ್ತಮುತ್ತ
ಹದಿನೇಳು
ದಿನಗಳ
ಕಾಲ
ಶೂಟಿಂಗ್
ಕೂಡಾ
ನಡೆದಿದೆ.

Kannadathi fame Ranjani Raghavan paired with Aditya in a movie; here is her journey

‘ಕೆಳದಿ
ಚೆನ್ನಮ್ಮ’
ಧಾರಾವಾಹಿ
ಮೂಲಕ
ಎಂಟ್ರಿ

ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
ಪೌರಾಣಿಕ
ಧಾರಾವಾಹಿ
‘ಕೆಳದಿ
ಚೆನ್ನಮ್ಮ’
ಧಾರಾವಾಹಿಯಲ್ಲಿ
ನಾಗವೇಣಿ
ಎನ್ನುವ
ಸಣ್ಣ
ಪಾತ್ರದಲ್ಲಿ
ಕಾಣಿಸಿಕೊಳ್ಳುವ
ಮೂಲಕ
ಕಿರುತೆರೆಗೆ
ಕಾಲಿಟ್ಟ
ರಂಜನಿ
ರಾಘವನ್
ಮತ್ತೆ
ಹಿಂದಿರುಗಿ
ನೋಡಿದ್ದಿಲ್ಲ.
ಮುಂದೆ
ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಆಕಾಶ
ದೀಪ’
ಧಾರಾವಾಹಿಯಲ್ಲಿ
ನಾಯಕಿಯ
ತಂಗಿಯಾಗಿ
ರಂಜನಿ
ಕಾಣಿಸಿಕೊಂಡಿದ್ದರು.

Akshatha Deshpande: ತಮಿಳು ಕಿರುತೆರೆಯಲ್ಲಿ 'ಅನಾಮಿಕ'ಳಾದ ಕನ್ನಡ ನಟಿ.. ಅಕ್ಷತಾ ಹೊಸ ಕಥೆ ಶುರುAkshatha
Deshpande:
ತಮಿಳು
ಕಿರುತೆರೆಯಲ್ಲಿ
‘ಅನಾಮಿಕ’ಳಾದ
ಕನ್ನಡ
ನಟಿ..
ಅಕ್ಷತಾ
ಹೊಸ
ಕಥೆ
ಶುರು

‘ಪುಟ್ಟಗೌರಿ’ಯಾಗಿ
ಕಿರುತೆರೆಯಲ್ಲಿ
ಮೋಡಿ

ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
ಜನಪ್ರಿಯ
ಧಾರಾವಾಹಿ
‘ಪುಟ್ಟ
ಗೌರಿ
ಮದುವೆ’ಯಲ್ಲಿ
ನಾಯಕಿ
ಫುಟ್ಟ
ಗೌರಿಯಾಗಿ
ಕಾಣಿಸಿಕೊಂಡ
ಈಕೆ,

ಪಾತ್ರದ
ಮೂಲಕ
ಕರ್ನಾಟಕದಾದ್ಯಂತ
ಮನೆ
ಮಾತಾಗಿದ್ದು
ಮಾತ್ರವಲ್ಲದೇ
ಕರುನಾಡಿನ
ಮಗಳಾಗಿ
ಬಿಟ್ಟಿದ್ದರು.
ಇದರ
ಜೊತೆಗೆ
ಪರಭಾಷೆಯ
ಕಿರುತೆರೆಗೂ
ಪಾದಾರ್ಪಣೆ
ಮಾಡಿದ
ರಂಜನಿ
ರಾಘವನ್
ಮಲಯಾಳಂನ
‘ಪೌರ್ಣಮಿ
ತಿಂಗಳ್’ನಲ್ಲಿ
ನಾಯಕಿ
ಪೌರ್ಣಮಿಯಾಗಿ
ಅಭಿನಯಿಸಿ
ಸೈ
ಎನಿಸಿಕೊಂಡಿದ್ದರು.

ಕ್ರಿಯೇಟಿವ್
ಡೈರೆಕ್ಟರ್
ಆಗಿ
ಸೈ
ಎಂದ
ರಂಜನಿ

ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಇಷ್ಟದೇವತೆ’
ಧಾರಾವಾಹಿಯ
ಸಂಭಾಷಣೆಗಾರ್ತಿಯಾಗಿದ್ದರು.
ಅಲ್ಲದೆ
ರಂಜನಿ
ರಾಘವನ್

ಧಾರಾವಾಹಿಯ
ಕ್ರಿಯೇಟಿವ್
ಡೈರೆಕ್ಟರ್
ಆಗಿಯೂ
ಕೆಲಸ
ಮಾಡಿದ್ದರು.
ತದ
ನಂತರ
‘ಕನ್ನಡತಿ’ಯ
ಭುವನೇಶ್ವರಿ
ಆಗಿ
ಬದಲಾದ
ರಂಜನಿ
ಮೂರು
ವರ್ಷಗಳ
ಕಾಲ
ವೀಕ್ಷಕರನ್ನು
ರಂಜಿಸುವಲ್ಲಿ
ಯಶಸ್ವಿಯಾದರು.

Kannadathi fame Ranjani Raghavan paired with Aditya in a movie; here is her journey

ಸಿನಿಮಾದಲ್ಲೂ
ನಟಿಸಿದ್ದ
ರಂಜನಿ
ರಾಘವನ್

‘ರಾಜಹಂಸ’
ಸಿನಿಮಾದ
ಮೂಲಕ
ಸಿನಿಮಾಗೆ
ಹಾರಿದ
ರಂಜನಿ
ರಾಘವನ್
ಮುಂದೆ
‘ಟಕ್ಕರ್’,
‘ಕ್ಷಮಿಸಿ
ನಿಮ್ಮ
ಖಾತೆಯಲ್ಲಿ
ಹಣವಿಲ್ಲ’,
‘ಸತ್ಯಂ’,
‘ನೈಟ್
ಕರ್ಫ್ಯೂ’
ಸಿನಿಮಾಗಳಲ್ಲಿ
ರಂಜನಿ
ಬಣ್ಣ
ಹಚ್ಚಿದ್ದಾರೆ.
ಜೊತೆಗೆ
‘ಹಕೂನಾ
ಮಟಾಟ’
ಎನ್ನುವ
ವೆಬ್
ಸಿರೀಸ್
ನಲ್ಲಿಯೂ
ರಂಜನಿ
ರಾಘವನ್
ಅಭಿನಯಿಸಿದ್ದಾರೆ.

English summary

Kannadathi fame Ranjani Raghavan paired with Aditya in a movie; here is her journey, know more.

Friday, June 23, 2023, 20:07

Story first published: Friday, June 23, 2023, 20:07 [IST]

Source link