India
oi-Sunitha B
ಬೆಂಗಳೂರು ಜುಲೈ 29: ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಕತ್ತೆಗೆ ಹೋಲಿಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಿಪಕ್ಷಗಳ ಮೈತ್ರಿಕೂಟ ‘ಐ.ಎನ್.ಡಿ.ಐ.ಎ’ (I.N.D.I.A)ವನ್ನು ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಗೆ ಹೋಲಿಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಬಗ್ಗೆ ಮಾತನಾಡಿದ ಅವರು, ‘ಮೋದಿ ಪ್ರಕಾರ ನಾಯಿಗಳು ಮತ್ತು ಕತ್ತೆಗಳು ಎರಡೂ ಒಂದೇ. ಯಾಕೆಂದರೆ ಎರಡಕ್ಕೂ ನಾಲ್ಕು ಕಾಲುಗಳು ಇವೆ. ಹಾಗೇ ಪ್ರಧಾನಿ ಮೋದಿಯವರ ತರ್ಕದ ಪ್ರಕಾರ ಕತ್ತೆಗೆ ಎರಡು ಕಣ್ಣುಗಳು ಮತ್ತು ಪ್ರಧಾನಿ ಮೋದಿಯವರಿಗೂ ಎರಡು ಕಣ್ಣುಗಳು ಇವೆ’ ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಯುವ ಸಮಾವೇಶದಲ್ಲಿ ಕನ್ಹಯ್ಯಾ ಕುಮಾರ್ ಈ ಹೇಳಿಕೆಯನ್ನು ನೀಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ನಿಂದನೆಯ ರಾಜಕೀಯವನ್ನು ಟೀಕಿಸಿದ್ದಾರೆ. “ಕನ್ಹಯ್ಯ ಕುಮಾರ್ ಮಾತನಾಡುವಾಗ ಕನ್ನಡಿಯಲ್ಲಿ ನೋಡುತ್ತಿರಬೇಕು ಎಂದು ನಾನು ಭಾವಿಸುತ್ತೇನೆ. ಅವರು ಭಾರತ್ ತೇರೆ ತುಕ್ಡೆ ಹೊಂಗೆಯನ್ನು ನಂಬಿದ್ದರಿಂದ ಅವರು ಭಾರತದ ಅತಿದೊಡ್ಡ ಕಳಂಕ. ಹಾಗಾಗಿ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಬಿಜೆಪಿಯ ಅಜಯ್ ಅಲೋಕ್ ದೂರದರ್ಶನ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಇತ್ತೀಚೆಗೆ ಪ್ರತಿಪಕ್ಷಗಳ ಮೈತ್ರಿಕೂಟ ‘ಐ.ಎನ್.ಡಿ.ಐ.ಎ’ (I.N.D.I.A) ವಿರುದ್ಧ ಮತ್ತೆ ಹರಿತ ಪದಗಳಲ್ಲಿ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ”ವಂಚಕ ಕಂಪನಿಗಳು ಹಾಗೂ ನಿಷೇಧಕ್ಕೊಳಗಾದ ಭಯೋತ್ಪಾದಕ ಸಂಘಟನೆಗಳು ಹೆಸರು ಬದಲಿಸಿದಂತೆ ಪ್ರತಿಪಕ್ಷಗಳು ತಮ್ಮ ಹೆಸರನ್ನು ಬದಲಿಸಿಕೊಂಡಿವೆ. ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿರುವುದು ದೇಶಭಕ್ತಿಯಿಂದಲ್ಲ ಬದಲಿಗೆ ‘ಈಸ್ಟ್ ಇಂಡಿಯಾ ಕಂಪನಿ’ ದೇಶದ ಸಂಪತ್ತು ಕೊಳ್ಳೆ ಹೊಡೆದಂತೆ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ದುರುದ್ದೇಶ ಹೊಂದಿವೆ,” ಎಂದು ಆಪಾದಿಸಿದ್ದರು.
‘ಈಸ್ಟ್ ಇಂಡಿಯಾ ಕಂಪನಿ’ ತನ್ನ ಹೆಸರಿನಲ್ಲಿ ಭಾರತವನ್ನೂ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಇದು ಎಲ್ಲಾ ಕತ್ತೆಗಳನ್ನೂ ನಾಯಿಗಳು ಎಂದು ಹೇಳುವಂತಿದೆ. ಏಕೆಂದರೆ ಅವೆರಡಕ್ಕೂ ನಾಲ್ಕು ಕಾಲುಗಳಿವೆ ಎಂದು ಕನ್ಹಯ್ಯ ಹೇಳಿದರು.
ಎನ್‌ಎಸ್‌ಯುಐ ಉಸ್ತುವಾರಿ ಕನ್ಹಯ್ಯಾ ಕುಮಾರ್ ತಮ್ಮ ಭಾಷಣದಲ್ಲಿ,”ಪ್ರಧಾನಿ ಮೋದಿ ಅವರು ಏನು ಮಾಡುತ್ತಿದ್ದಾರೆಂದು ನಿಮಗೆಲ್ಲರಿಗೂ ತಿಳಿದಿದೆ. ನಿಮ್ಮ ಜವಾಬ್ದಾರಿಯನ್ನು ನೀವು ಅರ್ಥಮಾಡಿಕೊಂಡಿದ್ದೀರಿ. ಕಾರ್ಗಿಲ್ ವಿಜಯ್ ದಿವಸ್‌ಗೆ ಕೆಲವೇ ದಿನಗಳ ಮೊದಲು ಮಣಿಪುರದಲ್ಲಿ ಕಾರ್ಗಿಲ್ ಯೋಧರ ಕುಟುಂಬಕ್ಕೆ ಏನಾಯಿತು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ” ಎಂದು ಕನ್ಹಯ್ಯ ಹೇಳಿದರು.
English summary
A video of Congress leader Kanhaiya Kumar comparing Prime Minister Modi to a donkey has gone viral on social media.
Story first published: Saturday, July 29, 2023, 10:44 [IST]