Tamil
oi-Srinivasa A
ಈ
ವರ್ಷ
ಅತಿಹೆಚ್ಚು
ಟ್ರೋಲ್‌ಗೆ
ಒಳಗಾದ
ಚಿತ್ರ
ಯಾವುದೆಂಬ
ಪ್ರಶ್ನೆಯನ್ನು
ಕೇಳಿದರೆ
ಭಾರತದ
ಪ್ರತಿಯೊಬ್ಬ
ಸಿನಿ
ರಸಿಕನೂ
ಸಹ
ಹೇಳುವ
ಏಕೈಕ
ಉತ್ತರ
ಆದಿಪುರುಷ್
ಎಂದು.
ಹೌದು,
ಬಾಲಿವುಡ್‌ನ
ನಿರ್ದೇಶಕ
ಓಂ
ರಾವತ್
ನಿರ್ದೇಶನದ
ಆದಿಪುರುಷ್
ಚಿತ್ರ
ಕೆಟ್ಟ
ವಿಎಫ್ಎಕ್ಸ್,
ತಪ್ಪಾದ
ತಾರಾಗಣದ
ಆಯ್ಕೆ,
ರಾಮಾಯಣ
ಪಾತ್ರಗಳನ್ನು
ತಪ್ಪಾಗಿ
ತೋರಿಸಿದ್ದ
ಕಾರಣಗಳಿಂದಾಗಿ
ಟೀಕೆಗೆ
ಗುರಿಯಾಗಿದೆ.
ಹೌದು,
ಜೂನ್
16ರಂದು
ಬಿಡುಗಡೆಗೊಂಡಿದ್ದ
ಆದಿಪುರುಷ್
ಚಿತ್ರವನ್ನು
ಭಾರತದ
ಬಹುತೇಕ
ಎಲ್ಲಾ
ಟ್ರೋಲಿಗರು
ಟ್ರೋಲ್
ಮಾಡಿದ್ದಾರೆ.
ರಾಮಾಯಣ
ಕಥೆ
ಆಧಾರಿತ
ಸಿನಿಮಾವೆಂದು
ಬಂದಿದ್ದ
ಆದಿಪುರುಷ್
ಚಿತ್ರವನ್ನು
ಜನರು
ಒಪ್ಪಿಕೊಳ್ಳಲೇ
ಇಲ್ಲ.
ಚಿತ್ರದ
ಕುರಿತಾದ
ವಿಮರ್ಶೆಗಳನ್ನು
ಓದಲು
ಶುರು
ಮಾಡಿದರೆ
ಹತ್ತರ
ಮಧ್ಯದಲ್ಲಿ
ಒಂದು
ಕಾಮೆಂಟ್
ಮಾತ್ರ
ಚಿತ್ರ
ಚೆನ್ನಾಗಿದೆ
ಎಂದು
ಕಂಡುಬರುವಷ್ಟು
ಹೀನಾಯ
ವಿಮರ್ಶೆಗಳನ್ನು
ಆದಿಪುರುಷ್
ಪಡೆದುಕೊಂಡಿತು.
ಇನ್ನು
ಬಿಡುಗಡೆಗೂ
ಮುಂಚೆಯಿಂದಲೂ
ತೀವ್ರ
ನೆಗೆಟಿವ್
ವಿಮರ್ಶೆಗಳನ್ನು
ಟೀಸರ್
ಮೂಲಕ
ಪಡೆದುಕೊಂಡಿದ್ದ
ಆದಿಪುರುಷ್
ಚಿತ್ರದಲ್ಲಿ
ರಾಮನ
ಪಾತ್ರದಲ್ಲಿ
ಪ್ರಭಾಸ್
ನಟಿಸಿದ್ದರೆ,
ಕೃತಿ
ಸೆನನ್
ಸೀತೆಯ
ಪಾತ್ರದಲ್ಲಿ
ಅಭಿನಯಿಸಿದ್ದಾರೆ
ಹಾಗೂ
ರಾವಣನ
ಪಾತ್ರದಲ್ಲಿ
ಸೈಫ್
ಅಲಿ
ಖಾನ್
ಕಾಣಿಸಿಕೊಂಡಿದ್ದಾರೆ.
ಚಿತ್ರ
ನೋಡಿ
ಹೊರಬಂದ
ಸಿನಿ
ರಸಿಕರು
ಇದು
ರಾಮಾಯಣ
ಅಲ್ಲ,
ಮಾಡರ್ನ್
ಅಪ್‌ಡೇಟೆಡ್
ರಾಮಾಯಣ
ಎಂದು
ಅಸಮಾಧಾನ
ಹೊರಹಾಕಿದ್ದರು.
ಚಿತ್ರದ
ಮೊದಲ
ಪ್ರದರ್ಶನ
ಮುಗಿಯುತ್ತಿದ್ದಂತೆಯೇ
ಚಿತ್ರದ
ವಿರುದ್ಧ
ದೊಡ್ಡ
ಮಟ್ಟದಲ್ಲಿ
ನೆಗೆಟಿವ್
ವಿಮರ್ಶೆಗಳು
ಕೇಳಿಬಂದವು.
ಹೀಗೆ
ದೊಡ್ಡ
ಮಟ್ಟದಲ್ಲಿ
ನೆಗೆಟಿವ್
ವಿಮರ್ಶೆಯನ್ನು
ಪಡೆದುಕೊಂಡ
ಆದಿಪುರುಷ್
ಚಿತ್ರತಂಡ
ಜನರನ್ನು
ಚಿತ್ರಮಂದಿರದತ್ತ
ಸೆಳೆಯಲು
ಟಿಕೆಟ್
ದರವನ್ನು
ಇಳಿಸಿತ್ತು.
ಹೀಗೆ
ಚಿತ್ರತಂಡ
ಇಷ್ಟೆಲ್ಲಾ
ಕಸರತ್ತನ್ನು
ಮಾಡುತ್ತಿರುವಾಗಲೇ
ಟಾರೆಂಟ್ಸ್
ವೆಬ್
ತಾಣ
ಸಂಪೂರ್ಣ
ಹೆಚ್‌ಡಿ
ಚಿತ್ರವನ್ನು
ಲೀಕ್
ಮಾಡುವ
ಮೂಲಕ
ಶಾಕ್
ಕೊಟ್ಟಿದೆ.
ಹೌದು,
ಹೊಸ
ಚಿತ್ರಗಳ
ಪೈರಸಿ
ಪ್ರಿಂಟ್‌ಗಳನ್ನು
ಹರಿಬಿಡುವಲ್ಲಿ
ಪ್ರಸಿದ್ಧಿಯನ್ನು
ಪಡೆದಿರುವ
ತಮಿಳ್
ಎಂವಿ
ಎಂಬ
ವೆಬ್
ತಾಣದಲ್ಲಿ
ಆದಿಪುರುಷ್
ಸಂಪೂರ್ಣ
ಹೆಚ್‌ಡಿ
ಪ್ರಿಂಟ್
ಇಂದು
(
ಜೂನ್
30
)
ಬಿಡುಗಡೆಗೊಂಡಿದೆ.
ಸದ್ಯಕ್ಕೆ
ತಮಿಳು
ವರ್ಷನ್‌ನ
ಚಿತ್ರ
ಮಾತ್ರ
ಈ
ವೆಬ್
ತಾಣದಲ್ಲಿ
ಲೀಕ್
ಆಗಿದ್ದು,
ಚಿತ್ರ
ಮಾಡುತ್ತಿದ್ದ
ಅಲ್ಪ
ಸ್ವಲ್ಪ
ಕಲೆಕ್ಷನ್
ಮೇಲೂ
ಇದು
ಪ್ರಭಾವ
ಬೀರುವ
ಸಾಧ್ಯತೆಗಳಿವೆ.
ಇನ್ನು
ಆದಿಪುರುಷ್
ಬಿಡುಗಡೆಗೊಂಡು
ಇಂದಿಗೆ
ಸರಿಯಾಗಿ
15
ದಿನಗಳು
ಕಳೆದಿದ್ದು,
ಎರಡು
ವಾರಗಳಲ್ಲಿ
ಮೊಬೈಲ್
ಪರದೆಯನ್ನು
ತಲುಪಿಬಿಟ್ಟಿದೆ.
ಸದ್ಯ
ಹೆಚ್‌ಡಿ
ವರ್ಷನ್
ಲೀಕ್
ಆಗಿದ್ದು,
ಪರಿಣಾಮವಾಗಿ
ಓಟಿಟಿಯಲ್ಲಿ
ತುಸು
ಬೇಗನೆ
ಚಿತ್ರ
ಬಿಡುಗಡೆಗೊಳ್ಳುವುದರಲ್ಲಿ
ಯಾವುದೇ
ಸಂಶಯವಿಲ್ಲ.
English summary
Adipurush full tamil HD movie leaked on tamil mv torrents website. Read on
Friday, June 30, 2023, 14:08
Story first published: Friday, June 30, 2023, 14:08 [IST]