ಆಸ್ಟ್ರೇಲಿಯಾದ ಮಹಿಳೆಯರ ಈಜು ರಿಲೇ ತಂಡವು ತಮ್ಮ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದು ಪೂಲ್ ಡೆಕ್‌ನಿಂದ ಬರುತ್ತಿರುವಾಗ, ಬಲ್ಲಾರ್ಡ್ ಯುರೋಸ್ಪೋರ್ಟ್‌ನಲ್ಲಿ ಕಾಮೆಂಟರಿ ಮಾಡಿದ್ದಾರೆ. “ಮಹಿಳೆಯರು ಈಗಷ್ಟೇ ಮುಗಿಸುತ್ತಿದ್ದಾರೆ. ಹೆಂಗಸರು ಹೇಗಿರುತ್ತಾರೆಂದು ನಿಮಗೆ ತಿಳಿದಿದೆ… ಸುತ್ತಾಡುವುದು, ಮೇಕಪ್ ಮಾಡುವುದು…” ಹೀಗೆ ವೀಕ್ಷಕ ವಿವರಣೆ ಮುಂದುವರೆಸುತ್ತಾರೆ. ಈ ವೇಳೆ ಬಲ್ಲಾರ್ಡ್ ಜೊತೆಗೆ ವೀಕ್ಷಕ ವಿವರಣೆ ಮಾಡುತ್ತಿದ್ದ ಬ್ರಿಟಿಷ್ ಈಜು ಚಾಂಪಿಯನ್ ಲಿಜ್ಜೀ ಸಿಮಂಡ್ಸ್, ಬಲ್ಲಾರ್ಡ್ ಹೇಳಿಕೆಯನ್ನು ‘ಅತಿರೇಕದ ಮಾತು’ ಎಂದಿದ್ದಾರೆ.