ಒಬ್ಬ ಮಾಜಿ ಪ್ರಧಾನಿ ವಿರುದ್ಧ ಬರೋಬ್ಬರಿ 150 ಕೇಸ್: ಯಾಕೆ ಗೊತ್ತಾ? | Imran Khan need to face another 6 new cases

International

oi-Malathesha M

|

Google Oneindia Kannada News

ಮಾಜಿ ಪ್ರಧಾನಿ ಅಂದರೆ ಹೇಗಿರುತ್ತಾರೆ, ಒಂದೋ ಸಕ್ರಿಯ ರಾಜಕಾರಣ ಬಿಟ್ಟು ಹಾಯಾಗಿ ತಮ್ಮ ವೃದ್ಧಾಪ್ಯ ಕಳೆಯುತ್ತಿರುತ್ತಾರೆ. ಇಲ್ಲವೇ ಆಡಳಿತ ಪಕ್ಷದ ವಿರುದ್ಧ ಹೋರಾಡುತ್ತಾ, ಮತ್ತೊಮ್ಮೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ನೆರೆಯ ಪಾಕಿಸ್ತಾನದಲ್ಲಿ ಈ ರೀತಿ ಇಲ್ಲವೇ ಇಲ್ಲ, ಮಾಜಿ ಪ್ರಧಾನಿಗಳು ಒಂದೋ ಜೈಲಿಗೆ ಹೋಗಬೇಕು ಅಥವಾ ದೇಶ ಬಿಟ್ಟು ಓಡಿ ಹೋಗಬೇಕು! ಈಗ ಇಮ್ರಾನ್ ಖಾನ್ ಕಥೆಯೂ ಅದೇ ಆಗಿದೆ.

ಇಮ್ರಾನ್ ಖಾನ್‌ಗೆ ಗಂಡಾಂತರ ಎದುರಾದಂತೆ ಕಾಣುತ್ತಿದೆ. ಏಕೆಂದರೆ ಪಾಕ್ ಸೇನೆ & ಕೇಂದ್ರ ಸರ್ಕಾರದ ವಿರುದ್ಧ ಇಮ್ರಾನ್ ತೊಡೆತಟ್ಟಿದ್ದಾರೆ. ಹೀಗಾಗಿಯೇ ಇಮ್ರಾನ್ ಖಾನ್ ವಿರುದ್ಧವೇ ಕೇಸ್‌ಗಳು ದಾಖಲಾಗುತ್ತಿವೆ. ಈವರೆಗೂ ಇಮ್ರಾನ್ ಖಾನ್ ವಿರುದ್ಧ 150 ಕೇಸ್ ದಾಖಲಾಗಿ ಒಮ್ಮೆ ಜೈಲೂಟ ಕೂಡ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ಇಮ್ರಾನ್ ಮೇಲೆ ಗುಂಡನ್ನು ಹಾರಿಸಿ ಕೊಲೆಗೂ ಯತ್ನಿಸಲಾಗಿತ್ತು. ಇದಿಷ್ಟು ಸಾಲದು ಎಂಬಂತೆ ಇಮ್ರಾನ್ ಖಾನ್‌ಗೆ ಮತ್ತೆ ಜೈಲು ತೋರಿಸಬೇಕು ಎಂದು ಪಾಕಿಸ್ತಾನ ಸರ್ಕಾರ ಪಣತೊಟ್ಟಂತೆ ಕಾಣುತ್ತಿದೆ. ಹೀಗಾಗಿ ಇದೀಗ ಮತ್ತೆ ಇಮ್ರಾನ್ ಖಾನ್ ವಿರುದ್ಧ ದಿಢೀರ್ 6 ಹೊಸ ಕೇಸ್‌ಗಳು ದಾಖಲಾಗಿವೆ.

Imran Khan need to face another 6 new cases

ಬರೋಬ್ಬರಿ 150 ಕೇಸ್‌ಗಳ ಸರದಾರ!

ಮೇ 9ರಂದು ಇಮ್ರಾನ್ ಅರೆಸ್ಟ್ ಆದ ಬಳಿಕ ಪಾಕಿಸ್ತಾನ ಸೇನಾ ನೆಲೆಗಳ ಮೇಲೆ ದಾಳಿ ನಡೆದಿತ್ತು. ಆಗ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್ ಮತ್ತು ಡಾಟಾ ಸೇರಿ ಹಲವು ವಸ್ತುಗಳನ್ನು ನಾಶ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ರು. ಗಲಾಟೆ ಮಾಡಿದವರ ವಿರುದ್ಧ ಉಗ್ರರ ಪಟ್ಟ ಕಟ್ಟಲಾಗಿದೆ. ಹೀಗೆ ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು. ಇದು ವರ್ಕೌಟ್ ಆಗದ ಕಾರಣ ಈಗ ಇಮ್ರಾನ್ ಖಾನ್ ವಿರುದ್ಧ ದಿಢೀರ್ 6 ಹೊಸ ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ರಾವಲ್ಪಿಂಡಿ ಸಿಟಿ ಪೊಲೀಸ್ ಸ್ಟೇಷನ್ ಸೇರಿ ಪಾಕಿಸ್ತಾನದ 6 ವಿವಿಧ ಪೊಲೀಸ್ ಠಾಣೆಗಳಲ್ಲೂ ಖಾನ್ ಮೇಲೆ ಕೇಸ್ ದಾಖಲಾಗಿದೆ ಎಂದು ಆರೋಪಿಸಲಾಗಿದೆ.

ಭಾರತದ ಜೊತೆ ಯುದ್ಧದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಭಾರತದ ಜೊತೆ ಯುದ್ಧದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಕೊಲೆ, ಭ್ರಷ್ಟಾಚಾರ, ಧರ್ಮನಿಂದನೆ ಕೇಸ್!

ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ 150 ಕೇಸ್‌ಗಳ ಪೈಕಿ ಕೊಲೆ ಆರೋಪ ಕೂಡ ಸೇರಿವೆ. ಇಮ್ರಾನ್ ವಿರುದ್ಧ ದಾಖಲಾದ ಪ್ರಕರಣ‌ಗಳಲ್ಲಿ ಪಾಕ್‌ನ ಲಾಹೋರ್ ಪ್ರಾಂತ್ಯದಲ್ಲೇ ಅತಿಹೆಚ್ಚು ಕೇಸ್ ರಿಜಿಸ್ಟರ್ ಆಗಿವೆ. ಖಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ ಮತ್ತು ಧರ್ಮನಿಂದನೆ, ಕೊಲೆ ಯತ್ನ ಸೇರಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಇದೀಗ ಖಾನ್ ವಿರುದ್ಧ ಮತ್ತೆ 6 ಪ್ರಕರಣಗಳು ದಾಖಲಾಗಿದ್ದು, ಬರೀ ಕೋರ್ಟಿಗೆ ಹೋಗಿ ಬೇಲ್ ತರೋದೆ ಇಮ್ರಾನ್ ಖಾನ್‌ಗೆ ಕೆಲಸವಾಗಿದೆ. ಹೀಗಾಗಿ ಇಮ್ರಾನ್ ಖಾನ್ ಬೆಂಬಲಿಗರು ಕೂಡ ಗರಂ ಆಗಿದ್ದು, ಪಾಕಿಸ್ತಾನದಲ್ಲಿ ಮತ್ತೊಮ್ಮೆ ಪ್ರತಿಭಟನೆಗಳು ಸ್ಫೋಟಗೊಳ್ಳುವ ಸಾಧ್ಯತೆ ಇದೆ.

Imran Khan need to face another 6 new cases

ಅಲ್-ಖಾದಿರ್ ಟ್ರಸ್ಟ್‌ಗೆ ಭೂಮಿ ನೀಡುವಾಗ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇಮ್ರಾನ್ ಖಾನ್ ವಿರುದ್ಧ ಇದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಖಾನ್ ಜೈಲು ಕೂಡ ಸೇರಿದ್ರು. ಪಾಕಿಸ್ತಾನ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಬಿಡುಗಡೆ ಆಗಿದ್ದಾರೆ. ಇದರ ಜೊತೆಗೆ ₹600 ಕೋಟಿ ಬೆಲೆ ಬಾಳುವ ಭೂಮಿಯನ್ನ ರಾಜಕೀಯ ಪ್ರಭಾವ ಬಳಸಿ ₹13 ಕೋಟಿಗೆ ಖರೀದಿ ಮಾಡಿದ ಆರೋಪ ಕೂಡ ಇಮ್ರಾನ್ ವಿರುದ್ಧ ಇದೆ. ಇಷ್ಟು ಸಾಲದು ಎಂಬಂತೆ ಈಗ ಮತ್ತೆ 6 ಪ್ರಕರಣಗಳು ದಾಖಲಾಗಿವೆ.

English summary

Imran Khan need to face another 6 new cases.

Story first published: Thursday, July 6, 2023, 19:08 [IST]

Source link