1000 ರನ್ ಸಿಡಿಸಿದ್ರೂ ಗ್ಯಾರಂಟಿ ಇಲ್ಲ
ನನಗನಿಸಿದ ಪ್ರಕಾರ, ಇಶಾನ್ ಕಿಶನ್ ಒಂದೇ 1000 ರನ್ ಬಾರಿಸಿದರೂ, ಆತನ ಸ್ಥಾನಕ್ಕೆ ಗ್ಯಾರಂಟಿ ಇಲ್ಲ. ಹೀಗೆ ಮಾಡುವುದರಿಂದ ಆಟಗಾರನ ಆತ್ಮವಿಶ್ವಾಸವನ್ನು ಸಂಪೂರ್ಣ ಹಾಳುಮಾಡಿದಂತೆ ಎಂದು ಸಲ್ಮಾನ್ ಬಟ್ ಹಳಿದ್ದಾರೆ. ಡಬಲ್ ಸೆಂಚುರಿ ಸಿಡಿಸಿದ ನಂತರವೂ ರಿಜರ್ವ್ ಬೆಂಚ್ನಲ್ಲಿ ಕೂರು ಪರಿಸ್ಥಿತಿ ಬಂದಿದೆ ಎಂದರೆ, ತಂಡಕ್ಕಾಗಿ ಏನು ಮಾಡಬೇಕು ಎಂಬುದು ಆತನಿಗೆ ಹೇಗೆ ಅರ್ಥವಾಗಲು ಸಾಧ್ಯ ಹೇಳಿ? ಭಾರತ ತಂಡವು ಮಾಡುತ್ತಿರುವ ಪ್ರಯೋಗಗಳು, ತಂಡದ ವಾತಾವರಣದ ವಿನಾಶಕ್ಕೆ ಕಾರಣ ಎಂದು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ಗೆ ಎಚ್ಚರಿಕೆಯ ಸಲಹೆ ನೀಡಿದ್ದಾರೆ.