ಒಂದು ತಿಂಗಳು ಪೂರೈಸಿದ ‘ಶಕ್ತಿ’ ಯೋಜನೆ; ಪ್ರಯಾಣಿಸಿದವರೆಷ್ಟು? | One Month For Shakti Scheme Numbers Of Women Passengers Traveled

Karnataka

oi-Gururaj S

|

Google Oneindia Kannada News

ಬೆಂಗಳೂರು, ಜುಲೈ 11; ಕರ್ನಾಟಕ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಗೆ ಬಂದಿದ್ದು ‘ಶಕ್ತಿ’. ಸಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಇದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 11ರಂದು ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆ ಒಂದು ತಿಂಗಳು ಪೂರೈಸಿದ್ದು, ಹಲವು ಟೀಕೆಗಳ ನಡುವೆಯೂ ಯೋಜನೆ ಯಶಸ್ವಿಯಾಗಿದೆ. ಸಾರಿಗೆ ಸಂಸ್ಥೆಗಳ ಆದಾಯವೂ ಹೆಚ್ಚುತ್ತಿದೆ.

Mandya: ಅವಾಸ್ತವಿಕ 'ಶಕ್ತಿ' ಯೋಜನೆ: ವರ್ಗಾವಣೆ ಶಿಕ್ಷೆಗೆ KSRTC ಚಾಲಕ ಆತ್ಮಹತ್ಯೆಗೆ ಯತ್ನMandya: ಅವಾಸ್ತವಿಕ ‘ಶಕ್ತಿ’ ಯೋಜನೆ: ವರ್ಗಾವಣೆ ಶಿಕ್ಷೆಗೆ KSRTC ಚಾಲಕ ಆತ್ಮಹತ್ಯೆಗೆ ಯತ್ನ

One Month For Shakti Scheme

ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ‘ಶಕ್ತಿ’ ಸ್ಮಾರ್ಟ್‌ಕಾರ್ಡ್ ವಿತರಣೆ ಮಾಡಲು ಇನ್ನೂ ಸರ್ಕಾರ ಆರಂಭಿಸಿಲ್ಲ. 3 ತಿಂಗಳ ಕಾಲ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಹುಬ್ಬಳ್ಳಿ-ಧಾರವಾಡ; ಚಿಗರಿ ಬಸ್‌ನಲ್ಲಿ ಮಹಿಳೆಯರಿಗೆ 'ಶಕ್ತಿ' ಏಕಿಲ್ಲ? ಹುಬ್ಬಳ್ಳಿ-ಧಾರವಾಡ; ಚಿಗರಿ ಬಸ್‌ನಲ್ಲಿ ಮಹಿಳೆಯರಿಗೆ ‘ಶಕ್ತಿ’ ಏಕಿಲ್ಲ?

ಎಷ್ಟು ಜನರ ಪ್ರಯಾಣ?; ಜೂನ್ 11 ರಿಂದ ಜುಲೈ 10ರ ತನಕ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಇವರಲ್ಲಿ 16.73 ಕೋಟಿ ಮಹಿಳೆಯರು. ಶೇ 50.86ರಷ್ಟು ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

 ಶಕ್ತಿ ಯೋಜನೆ ಪರಿಣಾಮ: ಚಾಲಕರು, ಕಂಡಕ್ಟರ್‌ಗಳು, ತಂತ್ರಜ್ಞರು ಸೇರಿ 8944 ಉದ್ಯೋಗಿಗಳ ನೇಮಕಕ್ಕೆ ಶಿಫಾರಸು- ಮಾಹಿತಿ, ವಿವರ ಶಕ್ತಿ ಯೋಜನೆ ಪರಿಣಾಮ: ಚಾಲಕರು, ಕಂಡಕ್ಟರ್‌ಗಳು, ತಂತ್ರಜ್ಞರು ಸೇರಿ 8944 ಉದ್ಯೋಗಿಗಳ ನೇಮಕಕ್ಕೆ ಶಿಫಾರಸು- ಮಾಹಿತಿ, ವಿವರ

ಈ ಅವಧಿಯಲ್ಲಿ ಕೆಎಸ್ಆರ್‌ಟಿಸಿಯಲ್ಲಿ 5.09 (ಶೇ52.52), ಬಿಎಂಟಿಸಿಯಲ್ಲಿ 5.38 ಕೋಟಿ (ಶೇ 48.16), NWKRTCಯಲ್ಲಿ 4.02 (ಶೇ 55.52) ಮತ್ತು ಕೆಕೆಆರ್‌ಟಿಸಿಯಲ್ಲಿ 2.23 (ಶೇ 46.75) ರಷ್ಟು ಮಹಿಳೆಯರು ಸಂಚಾರ ನಡೆಸಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಟಿಕೆಟ್ ಮೌಲ್ಯದ ವಿವರ; ಜೂನ್ 11 ರಿಂದ ಜುಲೈ 10ರ ತನಕ ಸಂಚಾರ ನಡೆಸಿದ ಅವಧಿಯಲ್ಲಿನ ಟಿಕೆಟ್ ಮೌಲ್ಯ ಹೀಗಿದೆ. ಕೆಎಸ್ಆರ್‌ಟಿಸಿ 151.25 ಕೋಟಿ. ಬಿಎಂಟಿಸಿ 69.56 ಕೋಟಿ. NWKRTC 103.51 ಕೋಟಿ ಮತ್ತು ಕೆಕೆಆರ್‌ಟಿಸಿ 77.62 ಕೋಟಿ. ಒಟ್ಟಾರೆ ಮೌಲ್ಯ 401.94 ಕೋಟಿಯಾಗಿದೆ.

‘ಶಕ್ತಿ’ ಯೋಜನೆ ಯಶಸ್ವಿಯಾಗಿ ಪ್ರಯಾಣಿಕರ ದಟ್ಟಣೆ ಉಂಟಾದ ಹಿನ್ನಲೆಯಲ್ಲಿ ನಾಲ್ಕು ನಿಗಮಗಳು ಹೆಚ್ಚುವರಿಯಾಗಿ 3147 ಟ್ರಿಪ್‌ಗಳನ್ನು ಓಡಿಸಿವೆ. ಇವುಗಳಲ್ಲಿ ಕೆಎಸ್ಆರ್‌ಟಿಸಿ 423, ಬಿಎಂಟಿಸಿ 238, NWKRTC 986 ಮತ್ತು ಕೆಕೆಆರ್‌ಟಿಸಿ 1,500 ಟ್ರಿಪ್ ಹೆಚ್ಚುವರಿಯಾಗಿ ಓಡಿಸಿದೆ.

ಪ್ರತಿದಿನ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಅಂಕಿ ಅಂಶವನ್ನು ನೀಡಲಾಗಿದೆ. ಇವುಗಳಲ್ಲಿ ಕೆಎಸ್ಆರ್‌ಟಿಸಿಯಲ್ಲಿ 16.97 ಲಕ್ಷ, ಬಿಎಂಟಿಸಿಯಲ್ಲಿ 17.95 ಲಕ್ಷ, NWKRTCಯಲ್ಲಿ 13.42 ಲಕ್ಷ ಮತ್ತು ಕೆಕೆಆರ್‌ಟಿಸಿ 7.43 ಲಕ್ಷ ಸೇರಿ ಒಟ್ಟು 55.77 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಕಟಣೆಯಲ್ಲಿ, ಮಹತ್ವಾಕಾಂಕ್ಷೆಯ ಯೋಜನೆಯಾದ ‘ಶಕ್ತಿ’ ಯೋಜನೆಯು ಇಂದಿಗೆ ಒಂದು ತಿಂಗಳು ಪೂರೈಸಿದ್ದು, ಸಾರಿಗೆ ಸಂಸ್ಥೆಗಳಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗಿ, ಮಹಿಳಾ ಪ್ರಯಾಣಿಕರಿಂದ ಅಭೂತಪೂರ್ವ ಯಶಸ್ಸನ್ನು ಗಳಿಸಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ನಾಲ್ಕು ಸಾರಿಗೆ ಸಂಸ್ಥೆಗಳ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಪ್ರಯಾಣಿಕರು, ಅದರಲ್ಲಿಯೂ ಮಹಿಳಾ ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ ಪ್ರಯಾಣಿಸಿ ಸಾರಿಗೆ ಬಸ್ಸುಗಳು ಜನರ ಜೀವನಾಡಿಯೂ ಹೌದು ಹಾಗೂ ಮಹಿಳೆಯರ ಪಯಣದ ಸಾರಥಿಯೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಯೋಜನೆಯ ಯಶಸ್ಸಿಗೆ ಮಾಧ್ಯಮ ಮಿತ್ರರ ಪಾತ್ರವೂ ಅನನ್ಯ ಸಮಸ್ತ ಮಾಧ್ಯಮದವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

English summary

One month for Karnataka Congress guarantee Shakti scheme. Total 16.73 crore women passengers traveled in Karnataka between June 11 and July 10, 2023.

Source link