ಒಂದು ಕುರಿಗೆ ಒಂದು ಕೋಟಿ ರೂಪಾಯಿ ಆಫರ್: ಆದರೂ ಕೊಡಲ್ಲ ಎಂದ ರೈತ! | Shepherd in Rajasthan Refuses ₹1 Crore Offer for Sacred Urdu-Inscribed Lamb

India

oi-Naveen Kumar N

|

Google Oneindia Kannada News

ಒಂದು ಕುರಿಗೆ ಅಬ್ಬಬ್ಬಾ ಅಂದ್ರೆ ಎಷ್ಟು ಬೆಲೆ ಇರಬಹುದು, ಎಂತಹ ಅತ್ಯುತ್ತಮ ಕುರಿ ಅಂದರೂ ಎರಡು-ಮೂರು ಲಕ್ಷ ರೂಪಾಯಿ ಇರುತ್ತದೆ. ಆದರೆ ಒಂದು ವರ್ಷದ ಕುರಿ ಮರಿಗೆ ಒಂದು ಕೋಟಿ ರೂಪಾಯಿ ಬೆಲೆ ಎಂದು ಎಲ್ಲಾದರೂ ಕೇಳಿದ್ದೀರಾ? ಅಚ್ಚರಿ ಆದರೂ ಇದು ಸತ್ಯ, ರಾಜಸ್ಥಾನದಲ್ಲಿ ಒಂದು ಕುರಿಗೆ ಒಂದು ಕೋಟಿ ರೂಪಾಯಿ ಕೊಡ್ತೀವಿ ಎನ್ನುವ ಆಫರ್ ಕೊಡಲಾಗಿದೆ. ಅಚ್ಚರಿ ಎಂದರೆ ಒಂದು ಕೋಟಿ ಕೊಟ್ರು ನಾನು ಕುರಿ ಕೊಡಲ್ಲ ಎಂದು ಮಾಲೀಕ ಹೇಳಿರೋದು.

ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಈ ಕುರಿಗೆ ಈಗ ಚಿನ್ನದ ಬೆಲೆ ಬಂದಿದೆ. ಒಂದು ಕೋಟಿ ರೂಪಾಯಿ ಆಫರ್ ಬಂದಿರೋದು, ಕುರಿ ವಿಶೇಷ ತಳಿ ಎಂದಲ್ಲ, ಬದಲಾಗಿ ಕುರಿಯ ಮೇಲಿರುವ ಸಂಖ್ಯೆಗಾಗಿ. ಹೌದು, ಕುರಿಯ ಮೇಲೆ ‘786’ ಎನ್ನುವ ಸಂಖ್ಯೆ ಇದೆ, ಉರ್ದು ಭಾಷೆಯಲ್ಲಿ ಈ ಸಂಖ್ಯೆಯ ಗುರುತು ಇರುವುದೇ ಕುರಿಗೆ ಬಂಗಾರದ ಬೆಲೆ ಬರಲು ಕಾರಣವಾಗಿದೆ.

1 Crore for Sheep

ಭಾರತದಲ್ಲಿನ ಮುಸ್ಲಿಮರು ‘786’ ಎನ್ನುವ ಸಂಖ್ಯೆಯನ್ನು ಪವಿತ್ರ ಎಂದು ಭಾವಿಸುತ್ತಾರೆ. ಕುರಿಯ ಮೇಲೆ ಈ ಸಂಖ್ಯೆ ಇರುವುದರಿಂದ ಅದನ್ನು ಪವಿತ್ರವಾದ ಕುರಿ ಎಂದು ಭಾವಿಸಿದ್ದು ಕೋಟಿ ರೂಪಾಯಿ ಆದರೂ ಖರೀದಿಸಲು ಹಲವರು ಮುಂದೆ ಬಂದಿದ್ದಾರೆ.

ಕುರುಬನಾದ ರಾಜು ಸಿಂಗ್‌ಗೆ ಆ ಸಂಖ್ಯೆಯ ಅರ್ಥವೇನೆಂದು ಅರ್ಥವಾಗಲಿಲ್ಲ ಆದರೆ ತನ್ನ ಹಳ್ಳಿಯ ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ಮಾತನಾಡಿದ ನಂತರ ಅದು ‘786’ ಎಂದು ಅರ್ಥ ಬರುವ ಉರ್ದು ಅಂಕಿ ಎಂದು ತಿಳಿಯಿತು. ಈ ಸಂಖ್ಯೆಯನ್ನು ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ದೇವರ ಆಶೀರ್ವಾದವನ್ನು ಆಹ್ವಾನಿಸುವ ಮಾರ್ಗವಾಗಿ ಬಳಸಲಾಗುತ್ತದೆ.

ಬಕ್ರೀದ್; ಕುರಿ, ಮೇಕೆ ವ್ಯಾಪಾರ ಜೋರು, ದರ ದುಪ್ಪಟ್ಟು ಬಕ್ರೀದ್; ಕುರಿ, ಮೇಕೆ ವ್ಯಾಪಾರ ಜೋರು, ದರ ದುಪ್ಪಟ್ಟು

ಒಂದು ವರ್ಷದ ಪವಿತ್ರ ಕುರಿಗೆ ಭಾರಿ ಡಿಮ್ಯಾಂಡ್!

ಈ ಕುರಿಮರಿ ಕಳೆದ ವರ್ಷ ಜನಿಸಿದ್ದು, ಈವರೆಗೂ ಈ ಕುರಿಯನ್ನು ಖರೀದಿ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. 70 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿವರೆಗೆ ಆಫರ್ ನೀಡಿದ್ದಾರೆ. ಆದರೆ ರಾಜು ಸಿಂಗ್‌ ಮಾತ್ರ ಈ ಆಫರ್ ಗಳನ್ನು ನಿರಾಕರಿಸಿದ್ದಾರೆ. ಈ ಕುರಿ ನನಗೆ ಬಹಳ ಪ್ರಿಯವಾದದ್ದಾಗಿದೆ ಅದಕ್ಕೆ ಎಷ್ಟು ದುಡ್ಡು ಕೊಟ್ಟರೂ, ಇದನ್ನು ಮಾರುವುದಿಲ್ಲ ಎಂದು ಹೇಳಿದ್ದಾರೆ.

ಕುರಿಮರಿಯ ಬೆಲೆ ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಿದಾಗಿನಿಂದ, ಈಗ ಅದನ್ನು ಹಿಂಡಿನಲ್ಲಿರುವ ಇತರ ಕುರಿಮರಿಗಳಿಂದ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಮತ್ತು ದಾಳಿಂಬೆ, ಪಪ್ಪಾಯಿ, ರಾಗಿ ಮತ್ತು ಹಸಿರು ತರಕಾರಿಗಳ ವಿಶೇಷ ಆಹಾರವನ್ನು ನೀಡಲಾಗುತ್ತದೆ. ಹೆಚ್ಚಿನ ಮೌಲ್ಯದ ಕಾರಣ, ಕುರಿಮರಿಯನ್ನು ರಕ್ಷಿಸಲು ರಾಜು ಸಿಂಗ್ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಅದನ್ನು ಅವರ ಕುಟುಂಬದೊಂದಿಗೆ ಅವರ ಮನೆಯೊಳಗೆ ಇರಿಸುತ್ತಾರೆ.

English summary

A shepherd in Rajasthan’s Churu district refuses to sell his lamb with a sacred Urdu inscription, despite a ₹1 crore offer.

Story first published: Thursday, June 29, 2023, 7:53 [IST]

Source link