ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 50 ರನ್ಗಳಿಂದ ಸೋತ ನಂತರ ದಕ್ಷಿಣ ಆಫ್ರಿಕಾದ ಆಟಗಾರ ಡೇವಿಡ್ ಮಿಲ್ಲರ್ ಅವರು ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲಬೇಕೆಂದು ಪರೋಕ್ಷವಾಗಿ ಪ್ರಾರ್ಥಿಸಿದ್ದಾರೆ. ಟೂರ್ನಿಯ ಸೆಮಿಫೈನಲ್ ವೇಳಾಪಟ್ಟಿಯ ಬಗ್ಗೆ ಐಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮಿಲ್ಲರ್, ಸೆಮಿಫೈನಲ್ಗೂ ಮುನ್ನ ನಾವು ದುಬೈಗೆ ತೆರಳಿ ನಂತರ ಲಾಹೋರ್ಗೆ ಮರಳಿದ್ದರ ಪರಿಣಾಮವೇ ಸೋಲಿಗೆ ಕಾರಣ ಎಂದು ಕಿಡಿಕಾರಿದ್ದಾರೆ. ಮಿಲ್ಲರ್ ಹೇಳಿಕೆಯ ಪರಮಾರ್ಥ ನೋಡಿದರೆ ಐಸಿಸಿ ಮೇಲಿರುವ ಕೋಪವನ್ನು ಭಾರತ ತಂಡದ ಮೇಲೆ ತೋರಿಸುತ್ತಿದ್ದಾರೆ ಎನ್ನುವಂತಿದೆ.