Bollywood
oi-Srinivasa A
ಕಳೆದ
ಶುಕ್ರವಾರ
(
ಜೂನ್
16
)
ಬಹು
ನಿರೀಕ್ಷಿತ
ಚಿತ್ರ
ಆದಿಪುರುಷ್
ಬಿಡುಗಡೆಗೊಂಡಿತು.
ಪ್ರಭಾಸ್
ನಟನೆಯ
ಈ
ಮೊದಲ
ಹಿಂದಿ
ಚಿತ್ರ
ಬಿಡುಗಡೆಗೂ
ಮುನ್ನ
ಕುತೂಹಲ
ಸೃಷ್ಟಿಸಿತ್ತು
ಹಾಗೂ
ಟೀಸರ್ನಲ್ಲಿದ್ದ
ಕಳಪೆ
ವಿಎಫ್ಎಕ್ಸ್
ಕಾರಣದಿಂದಾಗಿ
ಹೀನಾಯವಾಗಿ
ಟ್ರೋಲ್
ಆಗಿತ್ತು.
ಹೀಗೆ
ಬಿಡುಗಡೆಗೂ
ಮುನ್ನವೇ
ಮಿಶ್ರ
ಪ್ರತಿಕ್ರಿಯೆಯನ್ನು
ಪಡೆದುಕೊಂಡಿದ್ದ
ಆದಿಪುರುಷ್
ಬಿಡುಗಡೆಯಾದ
ನಂತರವೂ
ಸಹ
ಅದೇ
ರೀತಿಯ
ವಿಮರ್ಶೆಗಳನ್ನು
ಪಡೆದುಕೊಂಡಿದೆ.
ಹೌದು,
ಆದಿಪುರುಷ್
ತನ್ನ
ಕಳಪೆ
ವಿಎಫ್ಎಕ್ಸ್
ಕಾರಣಕ್ಕೆ
ಕೆಟ್ಟ
ಟೀಕೆಗಳನ್ನು
ಪಡೆದುಕೊಳ್ತಿದೆ.
ಚಿತ್ರ
ನೋಡಿ
ಹೊರಬಂದ
ಸಿನಿ
ರಸಿಕರು
ಇದು
ರಾಮಾಯಣ
ಅಲ್ಲ,
ಮಾಡರ್ನ್
ಅಪ್ಡೇಟೆಡ್
ರಾಮಾಯಣ
ಎಂದು
ಅಸಮಾಧಾನ
ಹೊರಹಾಕಿದ್ದರು.
ಚಿತ್ರದ
ಮೊದಲ
ಪ್ರದರ್ಶನ
ಮುಗಿಯುತ್ತಿದ್ದಂತೆಯೇ
ಚಿತ್ರದ
ವಿರುದ್ಧ
ದೊಡ್ಡ
ಮಟ್ಟದಲ್ಲಿ
ನೆಗೆಟಿವ್
ವಿಮರ್ಶೆಗಳು
ಕೇಳಿಬಂದವು.
ಚಿತ್ರದಲ್ಲಿ
ಎಲ್ಲಾ
ಪಾತ್ರಗಳ
ವಸ್ತ್ರದ
ವಿಧಾನ
ರಾಮಾಯಣಕ್ಕೆ
ಹೋಲಿಕೆಯಾಗ್ತಿಲ್ಲ,
ಪಾತ್ರಗಳ
ಲುಕ್
ಅನ್ನೂ
ಸಹ
ದೊಡ್ಡ
ಮಟ್ಟದಲ್ಲಿ
ಬದಲಿಸಿದ್ದಾರೆ
ಎಂಬ
ಆರೋಪ
ಕೇಳಿಬಂದಿತ್ತು.
ಅಲ್ಲದೇ
ಹನುಮಂತನ
ಪಾತ್ರದಲ್ಲೂ
ಸಹ
ಬದಲಾವಣೆ
ಇದೆ
ಎಂದು
ಆರೋಪಿಸಿದ್ದ
ಸಿನಿ
ರಸಿಕರು
ಹನುಮಂತ
ಹೇಳುವ
ಬಹುತೇಕ
ಡೈಲಾಗ್ಗಳು
ಈಗಿನ
ಕಾಲದಲ್ಲಿ
ಮಾತನಾಡುವ
ಹಾಗೆ
ಇದೆ,
ಈ
ಸಂಭಾಷಣೆಗಳನ್ನು
ಕೇಳಿದಾಗ
ಇದೊಂದು
ಪೌರಾಣಿಕ
ಚಿತ್ರ
ಎನಿಸುವುದೇ
ಇಲ್ಲ
ಎಂದು
ಕಿಡಿಕಾರಿದ್ದರು.
ಹೀಗೆ
ಸಾಲು
ಸಾಲು
ವಿವಾದ
ಹಾಗೂ
ವಿರೋಧಕ್ಕೆ
ಕಾರಣವಾದ
ಆದಿಪುರುಷ್
ಚಿತ್ರ
ಬಿಡುಗಡೆ
ದಿನ
ಬೃಹತ್
ಮಟ್ಟದ
ಗಳಿಕೆಯನ್ನು
ಮಾಡುವಲ್ಲಿ
ಸಂಪೂರ್ಣ
ಯಶಸ್ವಿಯಾಗದಿದ್ದರೂ
ಸಹ
ಸಮಾಧಾನಕರ
ಕಲೆಕ್ಷನ್
ಮಾಡಿತ್ತು.
ಹೌದು,
ಮೊದಲ
ದಿನ
ವಿಶ್ವ
ಬಾಕ್ಸ್
ಆಫೀಸ್ನಲ್ಲಿ
140
ಕೋಟಿ
ಗಳಿಕೆ
ಮಾಡಿದ್ದ
ಆದಿಪುರುಷ್
ಎರಡನೇ
ದಿನ
100
ಕೋಟಿ
ಗಳಿಸಿತು
ಹಾಗೂ
ಮೂರನೇ
ದಿನವೂ
100
ಕೋಟಿ
ಗಳಿಕೆ
ಮಾಡಿತು.
ಇನ್ನು
ನಾಲ್ಕನೇ
ದಿನ
ಮೊದಲ
ಸೋಮವಾರ
35
ಕೋಟಿ
ವಿಶ್ವ
ಬಾಕ್ಸ್
ಆಫೀಸ್
ಗ್ರಾಸ್
ಕಲೆಕ್ಷನ್
ಮಾಡಿದ
ಆದಿಪುರುಷ್
ಐದನೇ
ದಿನ
ವಿಶ್ವ
ಬಾಕ್ಸ್
ಆಫೀಸ್ನಲ್ಲಿ
ಕೇವಲ
20
ಕೋಟಿ
ಗಳಿಕೆ
ಮಾಡಿದೆ.
ಈ
ಮೂಲಕ
ಆದಿಪುರುಷ್
ಐದು
ದಿನಗಳಲ್ಲಿ
ವಿಶ್ವದಾದ್ಯಂತ
395
ಕೋಟಿ
ಗಳಿಕೆಯನ್ನು
ಮಾಡಿದೆ.
ಮೊದಲ
3
ದಿನಗಳಲ್ಲಿ
340
ಕೋಟಿಯನ್ನು
ಗಳಿಸಿದ್ದ
ಆದಿಪುರುಷ್
ನಂತರದ
ಎರಡು
ದಿನಗಳಲ್ಲಿ
55
ಕೋಟಿಯನ್ನು
ಗಳಿಸುವಲ್ಲಿ
ಮಾತ್ರ
ಯಶಸ್ವಿಯಾಗಿದ್ದು,
ಗಳಿಕೆಯಲ್ಲಿ
ತೀವ್ರ
ಕುಸಿತ
ಕಂಡಿದೆ.
ಒಟ್ಟಿನಲ್ಲಿ
ಆದಿಪುರುಷ್
ಕಲೆಕ್ಷನ್
ಮೂರು
ದಿನಗಳ
ಅಬ್ಬರದ
ಬಳಿಕ
ಹರೋಹರ
ಎಂಬಂತಾಗಿದೆ.
ಇನ್ನು
ಆದಿಪುರುಷ್
ಚಿತ್ರ
500
ಕೋಟಿ
ರೂಪಾಯಿ
ಬಜೆಟ್ನೊಂದಿಗೆ
ತಯಾರಾಗಿದ್ದು,
5
ದಿನಗಳಲ್ಲಿ
395
ಕೋಟಿ
ಗ್ರಾಸ್
ಕಲೆಕ್ಷನ್
ಮಾಡಿದ್ದು,
ಇದರಲ್ಲಿ
180
ಕೋಟಿ
ಶೇರ್
ಕಲೆಕ್ಷನ್
ಇದೆ.
ಚಿತ್ರ
ಬ್ರೇಕ್
ಈವನ್
ಸಾಧಿಸಿ
ಲಾಭ
ಗಳಿಸಲಾರಂಭಿಸಲು
242
ಗಳಿಸಬೇಕಿದ್ದು,
ಇನ್ನೂ
62
ಕೋಟಿ
ಶೇರ್
ಕಲೆಕ್ಷನ್
ಮಾಡಬೇಕಿದೆ.
5
ಮತ್ತು
ನಾಲ್ಕನೇ
ದಿನದ
ಕಲೆಕ್ಷನ್
ಮೊದಲ
ಮೂರು
ದಿನಗಳ
ಕಲೆಕ್ಷನ್ಗಿಂತ
ತೀರ
ಕೆಳಮಟ್ಟದಲ್ಲಿದ್ದು
ಆದಿಪುರುಷ್
ಬ್ರೇಕ್
ಈವನ್
ತಲುಪುವುದರಲ್ಲಿ
ಸಣ್ಣ
ಪ್ರಮಾಣದ
ಅನುಮಾನ
ಮೂಡಿದೆ.
English summary
Adipurush collects 395 crores from 5 days in worldwide box office. Read on
Wednesday, June 21, 2023, 13:22
Story first published: Wednesday, June 21, 2023, 13:22 [IST]