Karnataka
oi-Reshma P
ಹುಬ್ಬಳ್ಳಿ, ಜೂನ್19: ನಾವು ಘೋಷಣೆ ಮಾಡಿದ ಐದು ಗ್ಯಾರಂಟಿಗಳು ಯಶಸ್ವಿಯಾಗಬಾರದು ಎನ್ನುವ ಕಾರಣಕ್ಕಾಗಿ ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ಕೊಡುವುದನ್ನ ಹಿಂದಕ್ಕೆ ಪಡೆದಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಗಂಭೀರ ಸ್ವರೂಪದ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಜನತೆಗೆ 10 ಕೀಲೋ ಅಕ್ಕಿ ವಿತರಣೆಗೆ ನಾವು ವಾಗ್ದಾನ ಮಾಡಿದ್ದುವು ಇದಕ್ಕೆ ಕೇಂದ್ರ ಸರ್ಕಾರ ಕೂಡ 5 ಕೆಜಿ ಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮಾತು ಕೊಟ್ಟಿತ್ತು. ಆದರೆ ಈಗ ಇಲ್ಲ ಅಂತಾ ಇದೆ. ಆದ್ದರಿಂದ ಈ ನಮ್ಮ ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಬಾರದು ಅಂತ ಈಗ ಹಿಂದೆ ಪಡೆದಿದ್ದಾರೆ ಎಂದು ಹೇಳಿದರು.
ಇನ್ನೂ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಾ ನವರು ಈಗಾಗಲೇ ಬೇರೆ ರಾಜ್ಯಗಳಿಂದ ಖರೀದಿ ಮಾಡೋಕೆ ಮುಂದಾಗಿದ್ದಾರೆ. ಬಹುತೇಕ ನಾವು ನೀಡಿದ ಸಮಯದಲ್ಲೆ ಕೊಡ್ತೀವಿ ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ಯಾವ ಯಾವ ರಾಜ್ಯಗಳಿಂದ ಪಡೆಯಬೇಕು ಎಷ್ಟು ಪಡೆಯಬೇಕು ಯಾವ ರೀತಿ ಪಡೆಯಬೇಕು ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಾಹಿತಿ ಕೊಡುತ್ತಾರೆ ಎಂದರು.
ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಟವಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರೆಂಟಿ ಘೋಷಣೆ ಮಾಡಿದ್ರಾ ಎಂದು ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಅವರು, ಪತ್ರದ ಮೂಲಕ ಅವರು ತಾನೇ ಕೊಟ್ಟಿದ್ದು. ಕಳೆದ ಬಾರಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಕೇಂದ್ರಕ್ಕೆ ಕೇಳಿ ಕೊಟ್ಟಿದ್ರಾ? ಎಂದು ಮರು ಪ್ರಶ್ನೆ ಮಾಡಿದ ಅವರು, ಚುನಾವಣಾ ಸಮಯದಲ್ಲಿ ಪ್ರಣಾಳಿಕೆ ಕೊಡುವಂತದ್ದು ರಾಜ್ಯಕ್ಕೆ ಸಂಬಂಧ ಪಟ್ಟಿದ್ದು ಆದರೆ ಈಗ ಕೇಂದ್ರದವರು ಮಾತು ಕೊಟ್ಟು ವಾಪಸ್ ಪಡೆದ ಉದ್ದೇಶ ಏನು? ಎಂದು ಪ್ರಶ್ನಿಸಿದರು.
ನಾವು ನೀಡಿದ ಕಾರ್ಯಕ್ರಮ ಆಗಬಾರದು ಎಂಬ ಉದ್ದೇಶ ಅವರದ್ದಿದೆ ಈಗ ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ನೋಡ್ತಾ ಇದೆ.ಇನ್ನು ನಮ್ಮ ಸರ್ಕಾರ ಐದು ಗ್ಯಾರಂಟಿಗಳಲ್ಲಿನ ಮೊದಲ ಹಂತದಲ್ಲಿ ಜಾರಿಗೆ ಮಾಡಿದ ಶಕ್ತಿ ಯೋಜನೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದ ಅವರು, ಸುಮಾರು 60 ಸಾವಿರ ಕೋಟಿ ವೆಚ್ಚದಲ್ಲಿ ಆಗುತ್ತಿರುವ ಕಾರ್ಯಕ್ರಮ ಇದೊಂದು ದಾಖಲೆ. ಇದನ್ನು ಅನುಷ್ಠಾನಕ್ಕೆ ತರೋಕೆ ನಾವು ಸಮಯ ನಿಗದಿ ಪಡಿಸಿದ್ದೇವೆ ಎಂದರು.
ಇನ್ನು ಅಕ್ಕಿಗಾಗಿ ಮುಖಂಡರು, ಕಾರ್ಯಕರ್ತರೊಂದಿಗೆ ನಾಳೆ ನಾವು ಪ್ರತಿಭಟನೆ ಮಾಡ್ತೇವೆ ಹಾಗೂ ವಿದ್ಯುತ್ ಬಿಲ್ ಹೆಚ್ಚಳವಾಗಿದ್ದರ ಕುರಿತು ಕೈಗಾರಿಕೋದ್ಯಮ ವಿದ್ಯುತ್ ಬಿಲ್ ಹೆಚ್ಚಾಳಕ್ಕೆ ಬಂದ್ ಕರೆ ವಿಚಾರ ಕುರಿತು ಸಹ ಮಾತನಾಡಿದ ಅವರು, ಮುಂದಿನ ದಿನಗಲ್ಲಿ ಸರ್ಕಾರ ಇದರ ಬಗ್ಗೆ ಚರ್ಚೆ ಮಾಡುತ್ತೆ ಎಂದರು.
English summary
Minister Santosh Lad No Confusion In Shakti Scheme