ಏನಿದು ಮಾಕ್ ಚಿಕನ್? ಸಸ್ಯಾಹಾರಿ ವಿರಾಟ್ ಕೊಹ್ಲಿ ಕೂಡಾ ಇದನ್ನು ಸೇವಿಸ್ತಾರಂತೆ, ಇದನ್ನು ಮಾಡೋದು ಹೇಗೆ ನೋಡಿ

ಮಾಕ್ ಚಿಕನ್ ಎಂದರೇನು?

ಮಾಕ್‌ ಚಿಕನ್‌ ಎಂಬ ಹೆಸರೇ ಹೇಳುವಂತೆ ಇದು ನಕಲಿ ಚಿಕನ್. ಅಂದರೆ, ನಿಜವಾದ ಕೋಳಿ ಅಥವಾ ಚಿಕನ್‌ನಂತೆಯೇ ರುಚಿ ನೀಡುವ ಫೇಕ್‌ ಚಿಕನ್ ಇದು. ಇದಕ್ಕೊಂದು ಹೆಸರು ಇಡುವ ಸಲುವಾಗಿ ಅದನ್ನು ಮಾಕ್ ಚಿಕನ್ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಇದು ಮಾಂಸಾಹಾರ ಸೇವನೆ ಮಾಡದ ಸಸ್ಯಾಹಾರಿಗಳಿಗಾಗಿ ತಯಾರಿಸಲಾಗುವ, ಕೋಳಿಗೆ ಪರ್ಯಾಯ ಆಹಾರವಾಗಿದೆ. ಇದನ್ನು ಸೋಯಾ ಪ್ರೋಟೀನ್, ಸೀಟನ್, ಗೋಧಿ ಪ್ರೋಟೀನ್, ಹಲಸಿನಕಾಯಿ ಸೇರಿದಂತೆ ವಿವಿಧ ಸಸ್ಯಾಹಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ವಿವಿಧ ಮಸಾಲೆಗಳು ಹಾಗೂ ಫ್ಲೇವರ್‌ಗಳನ್ನು ಸೇರಿಸುವ ಮೂಲಕ ನಿಜವಾದ ಕೋಳಿ ಮಾಂಸದಂತೆಯೇ ರುಚಿ ಬರುವಂತೆ ಇದನ್ನು ತಯಾರಿಸುತ್ತಾರೆ. ಹೀಗಾಗಿ ಇದು ನಿಜವಾದ ಚಿಕನ್‌ನ ರೂಪ ಹಾಗೂ ರುಚಿ ನೀಡುತ್ತದೆ. ಕೆಲವು ಸಸ್ಯಾಹಾರಿಗಳು ಇದನ್ನೇ ಸೇವಿಸುತ್ತಾರೆ.

Source link