Karnataka
oi-Reshma P
ಕೊಪ್ಪಳ, ಜೂನ್ 22: ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಘೋಷಣೆಗಳನ್ನ ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಫ್ರೀ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಮನೆ ವಿದ್ಯುತ್ ಬಿಲ್ ಲಕ್ಷ ಲಕ್ಷ ಬರುತ್ತಿರುವುದು ವರದಿಯಾಗುತ್ತಿವೆ.
ಇತ್ತೀಚೆಗಷ್ಟೇ ವಿದ್ಯುತ್ ಬಿಲ್ ಹೆಚ್ಚಳ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧಗಳು ಕೇಳಿ ಬಂದಿದ್ದು, ಸಾರ್ವಜನಿಕರು ಸರ್ಕಾರ ವಿರುದ್ದ ಆಕ್ರೋಶ ಹೊರಹಾಕಿದ್ದು. ಇದೀಗ ಕೊಪ್ಪಳದ 90 ರ ವೃದ್ದೆಯ ಮನೆಗೆ ಬರೋಬ್ಬರಿ ಒಂದು ಲಕ್ಷ ಬಿಲ್ ಬಂದಿದೆ. ಒಂದು ತಗಡಿನ ಶೆಡ್ ನಲ್ಲಿ ವಾಸಿಸುತ್ತಿರುವ ಗೀರಿಜಮ್ಮ ಎನ್ನುವ ವೃದ್ಧೆ ಮನೆಯಲ್ಲಿ ಎರಡೇ ಎರಡು ಲೈಟ್ ಹೊಂದಿರುವ ಮನೆಗೆ ಜೆಸ್ಕಾಂ, ಲಕ್ಷಗಟ್ಟಲೆ ವಿದ್ಯುತ್ ಬಿಲ್ ನೀಡಿದೆ.
ಕೊಪ್ಪಳ ತಾಲೂಕಿನ ಭಾಗ್ಯ ನಗರದಲ್ಲಿರುವ ಕೇವಲ ಎರಡು ಬಲ್ಪ್ ಇರುವ ವೃದ್ದೆಯೊಬ್ಬರ ಮನೆಗೆ ಬರೊಬ್ಬರಿ 1 ಲಕ್ಷದ ಮೇಲೆ ವಿದ್ಯುತ್ ಬಿಲ್ ಬಂದಿದೆ. ಇವರ ಮನೆಗೆ ಬಂದಿರುವ ಕರೆಂಟ್ ಬಿಲ್ ಮೊತ್ತ ಕೇಳಿ ಶಾಖ್ ಗೆ ವೃದ್ದೆ ಒಳಗಾಗಿದ್ದು, ಕಣ್ಣೀರಿಟ್ಟಿದ್ದಾರೆ.
ಈ ಅಜ್ಜಿ ಇರೋದು ಒಂದು ತಗಡಿನ ಶೆಡ್ ನಲ್ಲಿ ಈ ಶೆಡ್ ಮನೆಯಲ್ಲಿ ಇರುವುದು ಎರಡೇ ಎರಡು ಬಲ್ಬ್. ಆದರೆ, ಈ ಅಜ್ಜಿಯ ಮನೆಗೆ ಬಂದಿರೋ ಬಿಲ್ ಮಾತ್ರ ಬರೋಬ್ಬರಿ ಒಂದು ಲಕ್ಷದ ಮೂರು ಸಾವಿರದ ಮೂರು ನೂರಾ ಹದಿನೈದು ರೂಪಾಯಿ. ತಿಂಗಳಿಗೆ 70 ರಿಂದ 80 ರೂ. ಬರುವ ವಿದ್ಯುತ್ ಬಿಲ್ ಏಕಾಏಕಿ ಲಕ್ಷ ದಾಟಿದರೇ ಯಾರಿಗೆ ಶಾಕ್ ಹೊಡೆಯಲ್ಲ ಹೇಳಿ, ಹೀಗಾಗಿ ಈ ಅಜ್ಜಿಗೆ ಬಿಲ್ ಕೇಳಿ ದಿಗ್ಬ್ರಾಂತ ಳಾಗಿದ್ದಾಳೆ.
ಈ ವೃದ್ಧೆಗೆ ಓದು ಬರಲ್ಲ, ಬರಿಯೋಕು ಬರಲ್ಲ, ಬಿಲ್ ಬಂದಿದ್ದು ಗೊತ್ತಾಗಿಲ್ಲ. ಕಳೆದ ಆರು ತಿಂಗಳಿಂದ ಜೆಸ್ಕಾಂ ಸಿಬ್ಬಂದಿ ಬಿಲ್ ನೀಡಿ ಹೋಗುತ್ತಿದ್ದಾರೆ. ಇದನ್ನೆಲ್ಲ ಹೆಂಗಪ್ಪ ಕಟ್ಟುವುದು ಅಂತ ಈ ವೃದ್ದೆ ಗಿರಿಜಮ್ಮ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅಲ್ಲದೆ, ಈ ವೃದ್ದೆಯ ಮನೆಗೆ ಸರಕಾರ ಭಾಗ್ಯಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ನೀಡಿತ್ತು. ಪ್ರತಿ ತಿಂಗಳು 70 ರಿಂದ 80 ರೂ ಬಿಲ್ ಬರ್ತಾಯಿತ್ತು. ಈ ಮನೆಯಲ್ಲಿ ಇರೋದು ಈ ಅಜ್ಜಿ ಮತ್ತು ಆಕೆಯ ಮಗ ಇಬ್ಬರೆ. ಇವರು ಮನೆಯಲ್ಲಿ ಬಳಸೋದು ಕೂಡಾ ಕೇವಲ ಎರಡು ಬಲ್ಬ್ ಮಾತ್ರ.
ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ. ಮೀಟರ್ ಹಾಕಿದಾಗಿಂದ ಈ ಮನೆಗೆ ಬರುತ್ತಿರುವ ಬಿಲ್ ಹತ್ತರಿಂದ ಇಪ್ಪತ್ತು ಸಾವಿರ ದಾಟಿ ಲಕ್ಷದವರೆಗೆ ಬಂದು ನಿಂತಿದೆ. ಈ ಮನೆಗೆ ಬಿಲ್ ಕೊಟ್ಟು ಹೋಗುವ ಜೆಸ್ಕಾಂ ಸಿಬ್ಬಂದಿ ಹಣ ಕೇಳೊಕೆ ವಾಪಸ್ ಬರುತ್ತಿಲ್ಲ. ಸದ್ಯ ಈ ಬಡ ಕುಟುಂಬಕ್ಕೆ 1 ಲಕ್ಷಕ್ಕೂ ಹೆಚ್ಚು ಬಿಲ್ ನೀಡಲಾಗಿದೆ.
ಇನ್ನೂ ಒಂದು ತಗಡಿನ ಶೆಡ್ ಮನೆಯಲ್ಲಿ ಎರಡೇ ಎರಡು ಬಲ್ಬ್ಗೆ ಲಕ್ಷಗಟ್ಟಲೇ ವಿದ್ಯುತ್ ಬಿಲ್ ಬರುತ್ತಾ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಮೀಟರ್ ರೀಡರ್ ಎಡವಟ್ಟಿನಿಂದ ರೀತಿ ಆಗಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಗಮನಹರಿಸಿ ಏಕೆ ಇಷ್ಟೊಂದು ಬಿಲ್ ಬಂದಿದೆ ಎಂದು ಪರಿಶೀಲಿಸಬೇಕಿದೆ.
English summary
gescom Gives lakh rupees electricity bill for 90 Year Old Woman house in Koppal,
Story first published: Thursday, June 22, 2023, 12:35 [IST]