ಎರಡೂ ಕೈಗಳಿಂದ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದ ಬೌಲರ್; ಐಪಿಎಲ್‌ನಲ್ಲಿ ಆಡಲು ಹನಿಮೂನ್‌ ರದ್ದು ಮಾಡಿದ್ರು

ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಗುರುವಾರ (ಮಾ.3) ನಡೆದ ಐಪಿಎಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (Kolkata Knight Riders vs Sunrisers Hyderabad) ತಂಡ ಸೋಲು ಕಂಡಿತು. ಆದರೆ, ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡ ಹೊಸ ವಿಷಯವೊಂದಕ್ಕೆ ಸುದ್ದಿಯಲ್ಲಿದೆ. ತಂಡವು ಹೊಸ ಬೌಲರ್‌ ಒಬ್ಬರನ್ನು ಪರಿಚಯಿಸಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಡಿದ ಮೊದಲ ಐಪಿಎಲ್‌ ಪಂದ್ಯದಲ್ಲೇ ವಿಕೆಟ್ ಪಡೆದ ಆಟಗಾರ, ಮೊದಲ ಆಂಬಿಡೆಕ್ಸ್ಟ್ರಸ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದರೆ ಟೂರ್ನಿ ಇತಿಹಾಸದಲ್ಲಿ ಎರಡೂ ಕೈಗಳಿಂದ ಬೌಲಿಂಗ್ ಮಾಡಿ ವಿಕೆಟ್ ಪಡೆದ ಮೊದಲ ಆಟಗಾರ. ಅವರೇ ಕಮಿಂದು ಮೆಂಡಿಸ್.

Source link