ಎಫ್‌ಎಂರೈನ್ ಬೋ ವಿಲೀನಕ್ಕೆ ಆಕ್ಷೇಪ: ಕಲಾವಿದರಿಗೆ ಸಿಗುತ್ತಿದ್ದ ವೇದಿಕೆಗೆ ಕುತ್ತು | Objection to FM rain Bow merger: A blow to the platform the artists were getting

Karnataka

oi-Sunitha B

|

Google Oneindia Kannada News

ಹೆಚ್ಚಿನ ಕೇಳುಗರಿಲ್ಲ ಎನ್ನುವ ನೆಪವನ್ನೊಡ್ಡಿ ಎಫ್‌ಎಂ ರೈನ್‌ ಬೋ ಅನ್ನು ಮೀಡಿಯಂ ವೇವ್ ಜೊತೆ ವಿಲೀನಗೊಳಿಸಲು ಮುಂದಾಗಿದೆ. ಎರಡು ಪ್ರತ್ಯೇಕ ಚಾನೆಲ್‌ಗಳ ಕಾರ್ಯಕ್ರಮಗಳಿಗೆ ಕತ್ತರಿ ಹಾಕಲಾಗುತ್ತಿದೆ. ಈವರೆಗೆ ನಿತ್ಯ 18 ಗಂಟೆಯಿದ್ದ ಕಾರ್ಯಕ್ರಮಗಳ ಅವಧಿಯನ್ನು ಐದು ಗಂಟೆಗೆ ಇಳಿಕೆ ಮಾಡಲಾಗುತ್ತಿದೆ.

ಇದರಿಂದಾಗಿ ಸಾಕಷ್ಟು ಉದ್ಘೋಷಕರು ಉದ್ಯೋಗ ಕಳೆದುಕೊಳ್ಳುವುದು ಮಾತ್ರವಲ್ಲದೆ ಕನ್ನಡದ ಪ್ರಾದೇಶಿಕ ಕಾರ್ಯಕ್ರಮಗಳನ್ನು ಕೇಳುವ ವರ್ಗಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಜತೆಗೆ ಪ್ರಾದೇಶಿಕ ಸಾಧಕರಿಗೆ, ಕಲಾವಿದರಿಗೆ ಸಿಗುತ್ತಿದ್ದ ವೇದಿಕೆಗೆ ಕುತ್ತು ಬರಲಿದೆ.

Objection to FM rain Bow merger

ಮನ್ ಕಿ ಬಾತ್ ಮೂಲಕ ಕೇಂದ್ರ ಸರಕಾರ ಆಕಾಶವಾಣಿಗೆ ಮನ್ನಣೆ ನಿಡುತ್ತಿರುವ ಹೊತ್ತಲ್ಲಿಯೇ ರಾಜ್ಯದಲ್ಲಿ ಮಾತ್ರ ಒಂದರ ಹಿಂದೆ ಒಂದರಂತೆ ಕನ್ನಡ ವಾಹಿನಿಗಳು ವಿಲೀನ ನೆಪದಲ್ಲಿ ಮುಚ್ಚುತ್ತಿವೆ. ಶಾಸ್ತ್ರೀಯ ಸಂಗೀತಕ್ಕೆಂದೇ ರಾಜ್ಯದಲ್ಲಿ ಪ್ರತ್ಯೇಕ ವೇದಿಕೆ ಕಲ್ಇಸಿದ್ದ ‘ಅಮೃತವರ್ಷಿಣಿ’ಯನ್ನು ಸ್ಥಗಿತಗೊಳಿಸಿರುವ ಪ್ರಸಾರ ಭಾರತಿ, ಈಗ ದೇಶದಲ್ಲೇ ಎರಡನೇ ಹೆಚ್ಚು ಕೇಳುಗರನ್ನು ಹೊಂದಿರುವ ಎಫ್‌ಎಂರೈನ್‌ ಬೋ (101.3) ಕನ್ನಡ ಕಾಮನಬಿಲ್ಲು ಚಾನೆಲ್ ಮಿಲೀನ ಪ್ರಕ್ರಿಯೆಗೆ ಅಧಿಕೃತವಾಗಿ ಕೈಹಾಕಿದೆ.

ದೇಶದ ಎಲ್ಲಾ ರಾಜ್ಯಗಳ ಆಕಾಶವಾಣಿ ಸ್ಟೇಷನ್‌ಗಳ ಪೈಕಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಚಾನೆಲ್‌ಗಳ ಪೈಕಿ ರೇನ್‌ಬೋ 101.3 ಕನ್ನಡ ಕಾಮನಬಿಲ್ಲು ಟಾಪ್‌-2 ಸ್ಥಾನದಲ್ಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು ಸೇರಿದಂತೆ ನ್ಯೂಸ್‌ ಆನ್‌ ಏರ್‌ ಮೂಲಕ ಆನ್‌ಲೈನ್‌ನಲ್ಲಿಆಸ್ಪ್ರೇಲಿಯಾ, ಲಂಡನ್‌, ಒಮನ್‌, ಕುವೈತ್‌ ಸೇರಿದಂತೆ ಹತ್ತಾರು ದೇಶಗಳಲ್ಲಿ ಕೇಳುಗರನ್ನು ಹೊಂದಿದೆ. ಸಮೀಕ್ಷೆಯೊಂದರ ಪ್ರಕಾರ ರೇನ್‌ಬೋ ಸರಾಸರಿ ನಿತ್ಯ 29 ಲಕ್ಷ ಕೇಳುಗರನ್ನು ಹೊಂದಿದೆ.

ಈ ಬಗ್ಗೆ ಕೇಂದ್ರ ಸರಕಾರ ಸಹ ಶ್ಲಾಘನೆ ವ್ಯಕ್ತಪಡಿಸಿತ್ತು. ಆದರೆ, ದಿಲ್ಲಿ ಕೇಂದ್ರಿತ ಕಾರ್ಯಕ್ರಮಗಳನ್ನು ಸದೃಢಗೊಳಿಸಿಕೊಳ್ಳವುದರ ನಡುವೆ ಪ್ರಾದೇಶಿಕ ಚಾನೆಲ್‌ಗಳನ್ನು ಕುಗ್ಗಿಸುವ ಪ್ರಯತ್ನಗಳಾಗುತ್ತಿರುವ ಬಗ್ಗೆ ಪ್ರಸಾರಭಾರತಿಯಲ್ಲೇ ಕೆಲವು ಸಿಬ್ಬಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಫಿಕ್ಸ್ ಆಯ್ತು ಮುಹೂರ್ತ: ನಾಳೆಯಿಂದಲೇ ಎಚ್‌ಡಿಎಫ್‌ಸಿ ವಿಲೀನ ಪಕ್ಕಾ! ಫಿಕ್ಸ್ ಆಯ್ತು ಮುಹೂರ್ತ: ನಾಳೆಯಿಂದಲೇ ಎಚ್‌ಡಿಎಫ್‌ಸಿ ವಿಲೀನ ಪಕ್ಕಾ!

ಪ್ರತಿಭಟನೆ ಎಚ್ಚರಿಕೆ: ರಾಜ್ಯದ ಕಲೆ, ಸಂಸ್ಕೃತಿ, ಭಾಷಾ ವೈವಿದ್ಯತೆಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಆಕಾಶವಾಣಿಯ ಒಂದೊಂದು ಚಾನೆಲ್‌ಗಳನ್ನು ವಿಲೀನ ನೆಪದಲ್ಲಿ ಮುಚ್ಚುತ್ತಿರುವ ಪ್ರಸಾರ ಭಾರತಿಯ ನಡೆ ಖಂಡನೀಯ. ಶಾಶ್ತ್ರೀಯ ಸಂಗೀತ, ಕಲೆ, ನಾಟಕ, ಸಿನಿಮಾ ರಂಗ ಸೇರಿದಂತೆ ನಾನಾ ಕ್ಷೇತ್ರಗಳ ಲಕ್ಷಾಂತರ ಕಲಾವಿದರಿಗೆ ರೇಡಿಯೋ ಪ್ರಮುಖ ವೇದಿಕೆಯಾಗಿದೆ. ಹೀಗಾಗಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಕನ್ನಡ ಆಕಾಶವಾಣಿ ಚಾನೆಲ್‌ಗಳನ್ನು ಸ್ಥಗಿತಗೊಳಿಸದೆ ಸದೃಢಗೊಳಿಸಬೇಕು. ಇಲ್ಲವಾದಲ್ಲಿ ಕಲಾವಿದರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅನಿರುದ್ಧ ಜತ್ಕರ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಕಾಶವಾಣಿ ದಕ್ಷಿಣ ಭಾರತ ಎಡಿಜಿ ಅನಿಲ್ ಕುಮಾರ್ ಮಂಗಲ್ಗಿ ಅವರು, ‘ರಾಜ್ಯದ ಎಲ್ಲ ಚಾನೆಲ್‌ಗಳನ್ನು ಸದೃಢಗೊಳಿಸುವ ಪ್ರಯತ್ನದ ಭಾಗವಾಗಿ ಕೇಂದ್ರದ ಸೂಚನೆಯಂತೆ ಎಫ್‌ಎಂ ರೈನ್‌ ಬೊ ಅನ್ನು ಮೀಡಿಯಂ ವೇವ್ ಜೊತೆಗೆ ವಿಲೀನಗೊಳಿಸಲಾಗುತ್ತಿದೆ. ಹೀಗಾಘಿ, ಒಂದೇ ಚಾನೆಲ್‌ನಲ್ಲಿ ಹೆಚ್ಚು ಕೇಳುಗರನ್ನು ಮುಟ್ಟಲು ಸಾಧ್ಯವಾಗಲಿದೆ’ ಎಂದು ಹೇಳಿದರು.

English summary

On the pretext that there are not many listeners, FM Rainbow has proposed to merge with Medium Wave and there has been strong objection.

Story first published: Thursday, July 20, 2023, 17:38 [IST]

Source link