ಎಡಿಆರ್‌ ವರದಿ; ಕೋಟ್ಯಾಧಿಪತಿ ಶಾಸಕರ ಪಟ್ಟಿಯಲ್ಲಿ ಕರ್ನಾಟಕ ಟಾಪ್! | ADR Report On MLAs Asset Karnataka MLAs Top In India

Karnataka

oi-Gururaj S

|

Google Oneindia Kannada News

ನವದೆಹಲಿ, ಜುಲೈ 16; ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಚುನಾವಣೆಗೆ ಮೊದಲು ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರಗಳ ಆಧಾರದ ಮೇಲೆ ಎಡಿಆರ್ ವರದಿಯೊಂದನ್ನು ತಯಾರು ಮಾಡಿದೆ. ದೇಶದ ಶೇ 44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ಅಭ್ಯರ್ಥಿಗಳು ಚುನಾವಣೆಗೆ ಮುನ್ನ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡುವ ಪ್ರಮಾಣ ಪತ್ರಗಳನ್ನು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯು) ಜೊತೆ ಸೇರಿ ವಿಶ್ಲೇಷಣೆ ಮಾಡಿದೆ.

ಪ್ರಾದೇಶಿಕ ರಾಜಕೀಯ ಪಕ್ಷಗಳ ಮೇಲಿದೆ 60.66 ಕೋಟಿ ರು ಸಾಲ: ಎಡಿಆರ್ಪ್ರಾದೇಶಿಕ ರಾಜಕೀಯ ಪಕ್ಷಗಳ ಮೇಲಿದೆ 60.66 ಕೋಟಿ ರು ಸಾಲ: ಎಡಿಆರ್

siddaramaiah

ಈ ವರದಿಯಲ್ಲಿ 28 ವಿಧಾನಸಭೆಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4033 ಶಾಸಕರ ಆಸ್ತಿ ಮೌಲ್ಯ, ಕ್ರಿಮಿನಲ್ ಪ್ರಕರಣಗಳನ್ನು ಮೌಲ್ಯ ಮಾಪನ ಮಾಡಲಾಗಿದೆ ಎಂದು ಎಡಿಆರ್ ಹೇಳಿದೆ. ಶಾಸಕರಲ್ಲಿ 1,136 (ಶೇ 28) ರಷ್ಟು ಮಂದಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.

4 ವರ್ಷಗಳಲ್ಲಿ 170 ಕಾಂಗ್ರೆಸ್, 18 ಬಿಜೆಪಿ ಶಾಸಕರ ನಿಷ್ಠೆ ಬದಲಾಗಿದೆ: ಎಡಿಆರ್ ಸಮೀಕ್ಷೆ 4 ವರ್ಷಗಳಲ್ಲಿ 170 ಕಾಂಗ್ರೆಸ್, 18 ಬಿಜೆಪಿ ಶಾಸಕರ ನಿಷ್ಠೆ ಬದಲಾಗಿದೆ: ಎಡಿಆರ್ ಸಮೀಕ್ಷೆ

ಶಾಸಕರ ಆಸ್ತಿ, ಕ್ರಿಮಿನಲ್ ಪ್ರಕರಣ; ಎಡಿಆರ್ ವರದಿಯ ಪ್ರಕಾರ ದೇಶ 1,136 ಶಾಸಕರ ವಿರುದ್ಧ ಕೊಲೆ, ಕೊಲೆ ಯತ್ನ, ಮಹಿಳೆಯರ ವಿರುದ್ಧ ಎಸಗಲಾದ ಅಪರಾಧ ಕೃತ್ಯ, ಅಪಹರಣ ಸೇರಿದಂತೆ ಗಂಭೀರ ರೂಪದ ಕ್ರಿಮಿನಲ್ ಪ್ರಕರಣಗಳಿವೆ. ಈ ಕುರಿತು ಪ್ರಮಾಣ ಪತ್ರದಲ್ಲಿ ಚುನಾವಣೆ ವೇಳೆ ಅವರೇ ಘೋಷಣೆ ಮಾಡಿಕೊಂಡಿದ್ದಾರೆ.

 ಭಾರತದ 10 ಶ್ರೀಮಂತ ರಾಜ್ಯಗಳಿವು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಅಂಕಿಅಂಶ, ವಿವರ ತಿಳಿಯಿರಿ ಭಾರತದ 10 ಶ್ರೀಮಂತ ರಾಜ್ಯಗಳಿವು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಅಂಕಿಅಂಶ, ವಿವರ ತಿಳಿಯಿರಿ

ದೇಶದ ಶಾಸಕರ ಆಸ್ತಿಯ ಕುರಿತು ಸಹ ಎಡಿಆರ್ ವಿಶ್ಲೇಷಣೆ ಮಾಡಿದೆ. 4001 ಶಾಸಕರ ಪೈಕಿ 88 ಕೋಟ್ಯಾಧಿಪತಿಗಳಿದ್ದಾರೆ. ಇವರ ಆಸ್ತಿ 100 ಕೋಟಿಗೂ ಹೆಚ್ಚಿದೆ ಎಂದು ವಿಶ್ಲೇಷಣೆ ಹೇಳಿದೆ. ಶಾಸಕರ ಸರಾಸರಿ ಆಸ್ತಿ ಮೌಲ್ಯ 13.63 ಕೋಟಿ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರು ಶಾಸಕರು ಸರಾಸರಿ ಆಸ್ತಿ 16.36 ಕೋಟಿಗೂ ಹೆಚ್ಚಾಗಿದೆ.

ಕರ್ನಾಟಕ ಟಾಪ್; ಕರ್ನಾಟಕದಲ್ಲಿ 223 ಶಾಸಕರು ಇದ್ದಾರೆ. 2023ರಲ್ಲಿ ಚುನಾವಣೆ ನಡೆದು ಹೊಸ ಶಾಸಕರು ಆಯ್ಕೆಯಾಗಿದ್ದಾರೆ. ಎಡಿಆರ್ ರಾಜ್ಯದ ಶಾಸಕರು ಕ್ರಿಮಿನಲ್ ಪ್ರಕರಣ, ಆಸ್ತಿಯ ಬಗ್ಗೆಯೂ ವಿಶ್ಲೇಷಣೆ ಮಾಡಿದೆ. ರಾಜ್ಯದ 223 ಶಾಸಕರ ಸರಾಸರಿ ಆಸ್ತಿ ಮೌಲ್ಯ 64.39 ಕೋಟಿಯಾಗಿದೆ. ಇವರಲ್ಲಿ 32 ಮಂದಿ ಕೋಟ್ಯಾಧಿಪತಿಗಳು ಮತ್ತು ಕೋಟ್ಯಾಧಿಪತಿ ಶಾಸಕರ ಪಟ್ಟಿಯಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದರು. ಆಗ ಎಡಿಆರ್ ವರದಿಯೊಂದನ್ನು ಬಿಡುಗಡೆ ಮಾಡಿತ್ತು. 32 ಸಚಿವರ ಪೈಕಿ 7 ಸಚಿವರು ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ಹೇಳಿತ್ತು. ಶೇ 75ರಷ್ಟು ಸಚಿವರು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ. 6 ಸಚಿವರು 8ನೇ ಮತ್ತು ದ್ವಿತೀಯ ಪಿಯುಸಿ ಪಾಸಾಗಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಶೇ 56ರಷ್ಟು ಸಚಿವರ ವಯಸ್ಸು 41 ರಿಂದ 60 ವರ್ಷಗಳು. 61 ರಿಂದ 80 ವರ್ಷದ ಶೇ 44ರಷ್ಟು ಸಚಿವರು ಇದ್ದಾರೆ. ಅತ್ಯಂತ ಹಿರಿಯ ಸಚಿವರು ಈ ಹಿಂದೆ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದ ದೇವನಹಳ್ಳಿಯ ಶಾಸಕ ಕೆ. ಎಚ್. ಮುನಿಯಪ್ಪ. ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಚಿತ್ತಾಪುರದ ಶಾಸಕರು.

ರಾಜ್ಯದ ಶೇ 97ರಷ್ಟು ಶಾಸಕರು ಕೋಟ್ಯಾಧಿಪತಿಗಳು. ಪ್ರತಿ ಶಾಸಕರ ಸರಾಸರಿ ಆಸ್ತಿ ಮೌಲ್ಯ ಸುಮಾರು 119.6 ಕೋಟಿ. ಶಾಸಕರ ಅತಿ ಕಡಿಮೆ ಆಸ್ತಿ ಎಂದರೆ 58.56 ಲಕ್ಷವಾಗಿದೆ. ರಾಜ್ಯದ ಶ್ರೀಮಂತ ಶಾಸಕ ಡಿ. ಕೆ. ಶಿವಕುಮಾರ್, ಅವರ ಆಸ್ತಿ ಮೌಲ್ಯ 1413.8 ಕೋಟಿ ರೂಪಾಯಿ ಎಂದು ಎಡಿಆರ್ ವರದಿ ವಿಶ್ಲೇಷಣೆ ಮಾಡಿತ್ತು.

English summary

A report prepared by the Association for Democratic Reforms (ADR) said that Karnataka Mlas average asset 64.39 crore and state top in India in Mla’s asset.

Source link