Astrology
oi-Sunitha B
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಸೂರ್ಯನನ್ನು ಆತ್ಮದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಸೂರ್ಯ ಪ್ರಭಲವಾಗಿದ್ದರೆ ವ್ಯಕ್ತಿಯು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾನೆ. ತಂದೆ ಮತ್ತು ಮೇಲಧಿಕಾರಿಯೊಂದಿಗಿನ ಸಂಬಂಧವೂ ಉತ್ತಮವಾಗಿರುತ್ತದೆ.
ಪ್ರತಿಯೊಂದು ನವಗ್ರಹಗಳು ವಾರದ ಪ್ರತಿ ದಿನದೊಂದಿಗೆ ಸಂಬಂಧ ಹೊಂದಿವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಆ ಅರ್ಥದಲ್ಲಿ ಭಾನುವಾರಕ್ಕೆ ಸಂಬಂಧಿಸಿದ ಗ್ರಹವು ಸೂರ್ಯ. ಸೂರ್ಯನ ಅನುಗ್ರಹವನ್ನು ಪಡೆಯಲು ಬಯಸಿದರೆ, ಭಾನುವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಸೂರ್ಯನ ಕೋಪಕ್ಕೆ ಗುರಿಯಾಗುತ್ತೀರಿ. ಹಾಗಾದರೆ ಭಾನುವಾರದಂದು ಏನು ಮಾಡಬಾರದು ಎಂದು ನೋಡೋಣ.
ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭಾನುವಾರದಂದು ಕಪ್ಪು, ಕಡು ನೀಲಿ, ಕಂದು, ಬೂದು ಮುಂತಾದ ಗಾಢ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಕಪ್ಪು ಬಟ್ಟೆಗಳನ್ನು ಧರಿಸಬಾರದು. ಏಕೆಂದರೆ ಕಪ್ಪು ಶನಿ ದೇವರ ನೆಚ್ಚಿನ ಬಣ್ಣ. ಸೂರ್ಯ ಮತ್ತು ಶನಿ ಪ್ರತಿಕೂಲ ಗ್ರಹಗಳು. ಆದ್ದರಿಂದ ಭಾನುವಾರದಂದು ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ಸೂರ್ಯನ ಕೋಪಕ್ಕೆ ಗುರಿಯಾಗುತ್ತೀರಿ.
ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬೇಡಿ
ನೀವು ಸೂರ್ಯನ ಕೋಪಕ್ಕೆ ಒಳಗಾಗುವುದನ್ನು ತಪ್ಪಿಸಲು ಬಯಸಿದರೆ, ಭಾನುವಾರದಂದು ನೀವು ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗೆ ಖರೀದಿಸಿದರೆ, ಅದು ಸೂರ್ಯನ ಕೋಪಕ್ಕೆ ಒಳಗಾಗುತ್ತದೆ. ಇದರಿಂದಾಗಿ ಹಣಕಾಸಿನ ಸಮಸ್ಯೆಗಳು ಮತ್ತು ಹಣದ ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸಬೇಡಿ
ಭಾನುವಾರ ರಜಾ ದಿನವಾದ್ದರಿಂದ ಅನೇಕರು ಭಾನುವಾರದಂದು ಹೆಚ್ಚು ಪ್ರಯಾಣ ಮಾಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಬಾರದು. ನೀವು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸಬೇಕಾದ ಪರಿಸ್ಥಿತಿಯಿದ್ದರೆ, ತುಪ್ಪ ಅಥವಾ ವೀಳ್ಯದೆಲೆ ತಿಂದು ಮೊದಲು ಪೂರ್ವ ದಿಕ್ಕಿಗೆ 5 ಅಡಿ ನಡೆದು ನಂತರ ಪ್ರಯಾಣಿಸಿ.
ತಾಮ್ರವನ್ನು ಮಾರಾಟ ಮಾಡಬೇಡಿ
ತಾಮ್ರವು ಸೂರ್ಯನಿಗೆ ಸಂಬಂಧಿಸಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗಾಗಿ ಭಾನುವಾರದಂದು ಯಾರಿಗೂ ತಾಮ್ರದ ವಸ್ತುಗಳನ್ನು ಮಾರಬೇಡಿ ಅಥವಾ ಕೊಡಬೇಡಿ. ಹೀಗೆ ಮಾಡಿದರೆ ಸೂರ್ಯನ ಕೋಪಕ್ಕೆ ಗುರಿಯಾಗಿ ಮನೆಯಲ್ಲಿ ಸುಖ-ಸಮೃದ್ಧಿ ಕಡಿಮೆಯಾಗುತ್ತದೆ.
ನಿರ್ಮಾಣ ಸಾಮಗ್ರಿಗಳು
ಭಾನುವಾರದಂದು ಮನೆ ನಿರ್ಮಾಣ ಸಾಮಗ್ರಿಗಳನ್ನು ಖರೀದಿಸುವುದನ್ನು ತಪ್ಪಿಸಿ. ಹಾಗೆ ಖರೀದಿಸಿದರೆ ಅದು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ ಮತ್ತು ನವಗ್ರಹಗಳ ಅಧಿಪತಿಯಾದ ಸೂರ್ಯನ ಕೋಪಕ್ಕೆ ಗುರಿಯಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
English summary
Warning! Don’t do these things on sunday.. because sun will get angry with you.. so what are the things not to do on sunday know them in kannada.
Story first published: Sunday, June 25, 2023, 16:24 [IST]