ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ, ಬೆನ್ನುನೋವಿನಿಂದ ಚೇತರಿಸಿಕೊಂಡು ಮೈದಾನಕ್ಕೆ ಇಳಿದಿದ್ದಾರೆ. ಆರಂಭಿಕ ಸೆಟ್‌ನಲ್ಲಿ ಗೆದ್ದ ಅವರು, ಬಳಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಅಂತಿಮವಾಗಿ 21-19, 16-21 ಹಾಗೂ 19-21ರಿಂದ ಸೋತು ಹೊರಬಿದ್ದರು. ಬರೋಬ್ಬರಿ 73 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಂತಿಮವಾಗಿ ವಿಶ್ವದ 12ನೇ ಶ್ರೇಯಾಂಕದ ಚೆನ್ ಮೇಲುಗೈ ಸಾಧಿಸಿದರು.