ಅರ್ಹತಾ ಗುಂಪಿನಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಿತ ತಂಡವಾದ ಬಾಂಗ್ಲಾದೇಶ, ಫಲಿತಾಂಶವನ್ನು ಗೆಲುವಿನಂತೆ ಆಚರಿಸಿತು. ಪಂದ್ಯ ಡ್ರಾಗೊಂಡ ಹಿನ್ನೆಲೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ಇದೇ ಮೈದಾನದಲ್ಲಿ ಕಳೆದ ಬುಧವಾರ ನಡೆದಿದ್ದ ಸೌಹಾರ್ಧ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ 3-0 ಗೋಲುಗಳ ಅಂತರದಿಂದ ಗೆದ್ದಿದ್ದ ಭಾರತ, ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ಎದುರು ಡ್ರಾ ಸಾಧಿಸಿದೆ. 2027ರ ಎಎಫ್‌ಸಿ ಏಷ್ಯನ್ ಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಗೆಲುವು ಮಹತ್ವದ್ದಾಗಿತ್ತು.