ಉಪಕುಲಪತಿ, ರಿಜಿಸ್ಟರ್‌ ಕೊನೆಗೆ ಪೊಲೀಸರ ಮೇಲೂ ಎಬಿವಿಪಿ ಸದಸ್ಯರಿಂದ ಅಮಾನುಷ ಹಲ್ಲೆ | Brutal attack by ABVP members on vice chancellor, register, police

India

oi-Punith BU

|

Google Oneindia Kannada News

ಗೋರಖ್‌ಪುರ, ಜುಲೈ 22: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಗೋರಖ್‌ಪುರದ ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಮಧ್ಯಪ್ರವೇಶಿಸಿದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆಯಿಂದ ವಿಶ್ವವಿದ್ಯಾನಿಲಯದ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಡಳಿತಾರೂಢ ಬಿಜೆಪಿಯೊಂದಿಗೆ ನಂಟು ಹೊಂದಿರುವ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಪ್ರತಿಭಟನಾ ನಿರತ ಸದಸ್ಯರನ್ನು ಭೇಟಿ ಮಾಡಲು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ ನಿರಾಕರಿಸಿದ ನಂತರ, ಮಧ್ಯಾಹ್ನದ ವೇಳೆಗೆ ಅವರ ಕೋಪೋದ್ರಿಕ್ತವಾಗಿತ್ತು.

Brutal attack by ABVP members on vice chancellor, register, police

ಆಗ ಆಕ್ರೋಶಗೊಂಡ ಸದಸ್ಯರು ಉಪಕುಲಪತಿಗಳ ಕಚೇರಿಗೆ ನುಗ್ಗಿ ಕಚೇರಿಯನ್ನು ಧ್ವಂಸಗೊಳಿಸಿ ಬಾಗಿಲು ಒಡೆದು ಹಾಕಿದರು. ಈ ವೇಳೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಕೆಲವು ಪ್ರಾಧ್ಯಾಪಕರ ಜೊತೆಗೆ ವಿದ್ಯಾರ್ಥಿ ಕಲ್ಯಾಣ ವಿಭಾಗದ ಉಪ ಡೀನ್ ಅವರನ್ನೂ ಎಬಿವಿಪಿ ಸದಸ್ಯರು ಅಮಾನುಷವಾಗಿ ಥಳಿಸಿದ್ದಾರೆ. ಹಿಂಸಾಚಾರದ ಪರಿಣಾಮವಾಗಿ ಆಡಳಿತ ಮಂಡಳಿಯ ಅನೇಕ ಸದಸ್ಯರು ಗಾಯಗೊಂಡರು.

ಘಟನೆ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದಾಗ್ಯೂ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದರೂ ಮತ್ತಷ್ಟು ಹಿಂಸಾಚಾರ ಆಗುತ್ತಲೇ ಇತ್ತು. ಕೊನೆಗೆ ಎಬಿವಿಪಿ ಸದಸ್ಯರೂ ಪೊಲೀಸರ ಮೇಲೂ ಹಲ್ಲೆ ನಡೆಸಿದರು. ತರುವಾಯ, ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು. ಬಳಿಕ ಕೆಲವು ಎಬಿವಿಪಿ ಸದಸ್ಯರನ್ನು ಬಂಧಿಸಿದರು.

ವಿಶ್ವವಿದ್ಯಾನಿಲಯದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರ ಸರಣಿ ಪ್ರತಿಭಟನೆ ನಡೆಸುತ್ತಿದ್ದರು. ವಾರದ ಹಿಂದೆ ಎಬಿವಿಪಿ ಕಾರ್ಯಕರ್ತರು ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದಲ್ಲಿ ಉಪಕುಲಪತಿಗಳ ಪ್ರತಿಕೃತಿ ದಹಿಸಿದ್ದರು. ಜೂನ್ 26 ರಂದು ಎಬಿವಿಪಿ ಆಡಳಿತ ಕಟ್ಟಡದ ಮೂರು ಗೇಟ್‌ಗಳ ಬೀಗಗಳನ್ನು ಮುರಿದು ಜಖಂ ಮಾಡಿದೆ.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವುದಾಗಿ ಉಪಕುಲಪತಿಗಳು ಭರವಸೆ ನೀಡಿದ್ದರು, ಆದರೆ ಎಬಿವಿಪಿ ಸದಸ್ಯರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಬಿವಿಪಿ ಆರೋಪಿಸಿದ್ದು, ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ವಿಶ್ವವಿದ್ಯಾನಿಲಯದ ಆಡಳಿತ ನಿರಾಕರಿಸಿದೆ ಮತ್ತು ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿರುವ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

English summary

At Gorakhpur’s Deen Dayal Upadhyay University, Akhil Bharatiya Vidyarthi Parishad (ABVP) members assaulted the vice-chancellor, registrar and even the police who intervened.

Story first published: Saturday, July 22, 2023, 8:43 [IST]

Source link