ಈ ದಿನದ ಮೂವಿ ಅಪ್‌ಡೇಟ್ಸ್: ‘ಕ್ಷೇತ್ರಪತಿ’ ಬಿಡುಗಡೆ ದಿನಾಂಕ ಪ್ರಕಟ, ‘ತೋತಾಪುರಿ 2’ ಫಸ್ಟ್‌ಲುಕ್ ರಿಲೀಸ್ | Kshetrapathi movie release date announced and Thotapuri 2 firstlook released

bredcrumb

News

oi-Srinivasa A

|

2023ರ
ಮೊದಲ
ಆರು
ತಿಂಗಳು
ಮುಗಿದು
ಹೋಗಿದ್ದು,
ಸದ್ಯ
ವರ್ಷದ
ದ್ವಿತೀಯಾರ್ಧದ
ಮೊದಲ
ತಿಂಗಳು
ಆರಂಭಗೊಂಡಿದೆ.
ವರ್ಷದ
ಮೊದಲಾರ್ಧದಲ್ಲಿ
ಗೆಲುವಿಗಿಂತ
ಸೋಲನ್ನೇ
ಹೆಚ್ಚು
ಕಂಡಿರುವ
ಕನ್ನಡ
ಚಿತ್ರರಂಗದಿಂದ
ನಿರೀಕ್ಷೆ
ಹುಟ್ಟುಹಾಕಿರುವ
ಹಲವಾರು
ಚಿತ್ರಗಳು
ಬಿಡುಗಡೆಗೆ
ಸಿದ್ಧಗೊಂಡಿವೆ.

ಹೀಗೆ
ಬಿಡುಗಡೆಗೆ
ಸಿದ್ಧಗೊಂಡಿರುವ
ಚಿತ್ರಗಳ
ತಂಡಗಳು
ತಮ್ಮ
ತಮ್ಮ
ಚಿತ್ರಗಳ
ಬಗ್ಗೆ
ಅಪ್‌ಡೇಟ್
ನೀಡಲು
ಮುಂದಾಗುತ್ತಿದ್ದು,

ಪೈಕಿ
ಇಂದು
(
ಜುಲೈ
3
)
ಕನ್ನಡದ
ಮುಂಬರುವ
ಎರಡು
ಚಿತ್ರಗಳ
ಅಪ್‌ಡೇಟ್
ಹೊರಬಿದ್ದಿದೆ.
ಹೌದು,
ನವೀನ್
ಶಂಕರ್
ನಟನೆಯ
ಕ್ಷೇತ್ರಪತಿ
ಹಾಗೂ
ನವರಸ
ನಾಯಕ
ಜಗ್ಗೇಶ್ನ
ನಟನೆಯ
ತೋತಾಪುರಿ
2
ಚಿತ್ರಗಳ
ಕುರಿತಾದ
ಅಪ್‌ಡೇಟ್
ಹೊರಬಂದಿವೆ.

kshetrapati release date


ವರ್ಷ
ಹೊಂದಿಸಿ
ಬರೆಯಿರಿ
ಹಾಗೂ
ಗುರುದೇವ್
ಹೊಯ್ಸಳ
ಚಿತ್ರಗಳ
ಮೂಲಕ
ಪ್ರೇಕ್ಷಕರ
ಮನ
ಗೆದ್ದಿರುವ
ಗುಲ್ಟೂ
ನವೀನ್
ಶಂಕರ್
ಸದ್ಯ
ಕ್ಷೇತ್ರಪತಿ
ಎಂಬ
ಚಿತ್ರದಲ್ಲಿ
ನಾಯಕ
ನಟನಾಗಿ
ಕಾಣಿಸಿಕೊಂಡಿದ್ದಾರೆ.
ಚಿತ್ರದ
ಟೀಸರ್
ಕಳೆದ
ಎರಡು
ವಾರಗಳ
ಹಿಂದಷ್ಟೇ
ಬಿಡುಗಡೆಗೊಂಡು
ನವೀನ್
ಶಂಕರ್
ಮತ್ತೊಂದು
ಕಂಟೆಂಟ್
ಓರಿಯೆಂಟಲ್
ಸಿನಿಮಾದ
ಜತೆ
ಬರುತ್ತಿದ್ದಾರೆ
ಎಂಬುದನ್ನು
ತಿಳಿಸಿತ್ತು.

ಇದೀಗ
ಚಿತ್ರತಂಡ
ಬಿಡುಗಡೆ
ದಿನಾಂಕವನ್ನು
ಘೋಷಿಸಿದ್ದು,
ಆಗಸ್ಟ್
18ರಂದು
ಚಿತ್ರ
ತೆರೆಗೆ
ಬರಲಿದೆ
ಎಂಬುದನ್ನು
ರಿವೀಲ್
ಮಾಡಿದೆ.
ಚಿತ್ರದಲ್ಲಿ
ನವೀನ್
ಶಂಕರ್
ರೈತ
ನಾಯಕನಾಗಿ
ಕಾಣಿಸಿಕೊಂಡಿದ್ದು,
ಅರ್ಚನಾ
ಜೋಯಿಸ್
ನಾಯಕಿಯಾಗಿ
ನಟಿಸಿದ್ದಾರೆ.
ರೈತರು
ಹಕ್ಕಿಗಾಗಿ
ಹೋರಾಡುವ
ಕಥೆ
ಇದಾಗಿದ್ದು,
ಕನ್ನಡ
ಸಿನಿ
ರಸಿಕರ
ಮನ
ಮುಟ್ಟುವ
ಎಲ್ಲಾ
ಲಕ್ಷಣಗಳೂ
ಸಹ
ಕಾಣುತ್ತಿವೆ.
ಚಿತ್ರಕ್ಕೆ
ಶ್ರೀಕಾಂತ್
ಕಟಗಿ
ನಿರ್ದೇಶನವಿದ್ದು,
ರವಿ
ಬಸ್ರೂರು
ಸಂಗೀತ
ನೀಡಿದ್ದಾರೆ.

ಇನ್ನು

ದಿನ
ಕ್ಷೇತ್ರಪತಿ
ಜತೆಗೆ
ತೋತಾಪುರಿ
2
ಚಿತ್ರದ
ಅಪ್‌ಡೇಟ್
ಸಹ
ಹೊರಬಿದ್ದಿದೆ.
ಕಳೆದ
ವರ್ಷ
ಬಿಡುಗಡೆಗೊಂಡು
ನಿರೀಕ್ಷಿಸಿದ
ಯಶಸ್ಸನ್ನು
ಸಾಧಿಸುವಲ್ಲಿ
ಎಡವಿದ್ದ
ತೋತಾಪುರಿ
ಚಿತ್ರದ
ಸೀಕ್ವೆಲ್
ಆಗಿರುವ
ತೋತಾಪುರಿ
2
ಚಿತ್ರದ
ಫಸ್ಟ್
ಲುಕ್
ಪೋಸ್ಟರ್
ಬಿಡುಗಡೆಯಾಗಿದೆ.

ಡಾಲಿ
ಧನಂಜಯ್
ಹಾಗೂ
ನವರಸ
ನಾಯಕ
ಜಗ್ಗೇಶ್
ಇರುವ
ಪೋಸ್ಟರ್
ಅನ್ನು
ಹಂಚಿಕೊಂಡಿರುವ
ತೋತಾಪುರಿ
2
ಚಿತ್ರತಂಡ
ಶೀಘ್ರದಲ್ಲಿಯೇ
ಚಿತ್ರಮಂದಿರಗಳಿಗೆ
ಲಗ್ಗೆ
ಇಡಲಿದ್ದೇವೆ
ಎಂಬುದನ್ನು
ತಿಳಿಸಿದೆ.

English summary

Kshetrapathi movie release date announced and Thotapuri 2 firstlook released. Read on

Monday, July 3, 2023, 18:48

Story first published: Monday, July 3, 2023, 18:48 [IST]

Source link