India
oi-Punith BU

ನವದೆಹಲಿ, ಜೂನ್ 21: ಭಾರತದ ಮೊದಲ ಪ್ರಜೆ ದ್ರೌಪದಿ ಮುರ್ಮು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯಾಗಿದ್ದಾರೆ. ಅವರು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಸಾರ್ವಜನಿಕ ಜೀವನದಲ್ಲಿ ಇರುವವರು, ಅವರು ದಿನ ನಿತ್ಯ ತಿನ್ನುವ ಆಹಾರವೇನು ಎಂದು ಸಾಮಾನ್ಯ ಜನರಿಗೆ ತಿಳಿಯುವ ಕುತೂಹಲವಿರುತ್ತದೆ. ಹೀಗಾಗಿ ರಾಷ್ಟ್ರೀಯ ಖಾಸಗಿ ಸುದ್ದಿ ಮಾಧ್ಯಮ ಸಂಸ್ಥೆ ಎನ್‌ಡಿಟಿವಿ ಅವರ ದಿನಚರಿಯೊಂದಿಗೆ ಅವರು ದಿನನಿತ್ಯ ಏನು ಆಹಾರ ಸೇವಿಸುತ್ತಾರೆ ಎಂದು ವರದಿ ಮಾಡಿದೆ.

ದೇಶದ ಅತ್ಯುನ್ನತ ಗೌರವ ಸ್ಥಾನವಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಸ್ಯಹಾರಿಯಾಗಿದ್ದಾರೆ. ಅವರು ತಮ್ಮ ಆಹಾರವನ್ನು ಸರಳವಾಗಿರುವಂತೆ ನೋಡಿಕೊಂಡಿದ್ದಾರೆ, ಸರಳ ಶುದ್ಧ ಸಸ್ಯಹಾರವನ್ನೇ ಅವರು ತಮ್ಮ ನಿತ್ಯದ ಆಹಾರವಾಗಿ ಸ್ವೀಕರಿಸುತ್ತಾರೆ ಎಂದು ರಾಷ್ಟ್ರಪತಿ ಭವನದ ಹಿರಿಯ ಬಾಣಸಿಗ ಸಂಜಯ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹಾರ ತಯಾರಿಸಲೆಂದೇ ನುರಿತ ಬಾಣಸಿಗರ ತಂಡವೇ ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುತ್ತದೆ. ಅವರು ಎಚ್ಚರಿಕೆಯಿಂದ ಸಾಕಷ್ಟು ಶುಚಿತ್ವದೊಂದಿಗೆ ರಾಷ್ಟ್ರಪತಿಗಳಿಗೆ ಆಹಾರವನ್ನು ಸಿದ್ದಪಡಿಸುತ್ತಾರೆ. ಅವರು ಹೇಳುವ ಪ್ರಕಾರ ಮುರ್ಮು ಅವರು ಶುದ್ಧ ಸಸ್ಯಹಾರಿಯಾಗಿದ್ದಾರೆ. ಅವರು ಈರುಳ್ಳಿ, ಬೆಳ್ಳುಳ್ಳಿ ಬಳಸಿದ ಆಹಾರವನ್ನು ಸೇವಿಸುವುದಿಲ್ಲ. ಹಾಗಾಗಿ ನಾವು ಆ ಬಗೆಯ ಆಹಾರವನ್ನು ಸಿದ್ದಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಾಂಸಹಾರವೂ ಕೂಡ ಆಗಿ ಬರುವುದಿಲ್ಲ. ಅವರು ಶುದ್ಧ ಸಸ್ಯಹಾರಿಯಾಗಿದ್ದು, ಮಾಂಸಾಹಾರವನ್ನು ಸೇವಿಸುವುದಿಲ್ಲ. ಅವರು ಸೇವಿಸುವ ಆಹಾರ ಸಾಕಷ್ಟು ಸರಳವಾಗಿರುತ್ತದೆ. ಅದು ಶುದ್ಧ ಸಸ್ಯಹಾರವಾಗಿರುತ್ತದೆ. ಬೆಳಗ್ಗಿನ ಉಪಹಾರಕ್ಕಾಗಿ ಅವರು ಸರಳವಾಗಿ ಹೋಟ್ಸ್, ಪೂರಿ ಮತ್ತು ಆಲುಗೆಡ್ಡೆ ಸಬ್ಜಿಯನ್ನು ಇಷ್ಟಪಡುತ್ತಾರೆ ಎಂದು ತಿಳಿಸಿದರು.
ಇದಲ್ಲದೆ ಸರಳವಾಗಿ ರೈಸ್ ಚಿಲ್ಲಾ (ಸೆಟ್ ದೋಸೆ ಮಾದರಿಯ ಆಹಾರ), ಇದಲ್ಲದೆ ಓಡಿಶಾ ಮೂಲದ ಆಹಾರ ಪದಾರ್ಥಗಳು ಅವರಿಗೆ ಇಷ್ಟವಾಗುವ ಪದಾರ್ಥಗಳು. ಒಮ್ಮೆ ಅವರೇ ನಮಗೆ ಇಂತಹ ಮಾದರಿಯ ಆಹಾರ ತಯಾರಿಸುವಂತೆ ಹೇಳುತ್ತಾರೆ. ಇಲ್ಲದಿದ್ದರೆ ನಾವೇ ಅವರಿಗೆ ಖಾದ್ಯ ತಯಾರಿಸುತ್ತೇವೆ. ದಾಲ್ಮ ಇಲ್ಲವೇ ಸಂತೂಲಾ (ಸಸ್ಯಹಾರಿ ಗೊಜ್ಜು) ಅವರಿಗೆ ಇಷ್ಟವಾಗುವ ಮತ್ತೊಂದು ಪದಾರ್ಥವಾಗಿದೆ ಎಂದು ಅವರು ಬಾಣಸಿಗ ಸಂಜಯ್ ಕುಮಾರ್ ತಿಳಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದಲ್ಲಿ ರಾಯರಂಗಪುರದ ಬೈದಪೋಸಿ ಪ್ರದೇಶದ ಉಪರಬೇಡ ಗ್ರಾಮದಲ್ಲಿ ಜನಿಸಿದರು. ಶಿಕ್ಷಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ರಾಜಕೀಯಕ್ಕೆ ಪ್ರವೇಶಿಸಿದರು. ಅವರು 2000 ರಿಂದ 2004 ರವರೆಗೆ ಒಡಿಶಾ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಮುರ್ಮು ಅವರು 2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ದೇಶದ ಮೊದಲ ಬುಡಕಟ್ಟು ರಾಷ್ಟ್ರಪತಿರಾಗಿದ್ದಾರೆ ಮತ್ತು ಪ್ರತಿಭಾ ಪಾಟೀಲ್ ನಂತರ ಉನ್ನತ ಹುದ್ದೆಗೆ ನೇಮಕಗೊಂಡ ಎರಡನೇ ಮಹಿಳೆಯಾಗಿದ್ದಾರೆ.
ದ್ರೌಪದಿ ಮುರ್ಮು ಅವರು 2000 ರಿಂದ 2009 ರವರೆಗೆ ಒಡಿಶಾ ವಿಧಾನಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇದರ ನಂತರ, ಅವರು 2015 ರಿಂದ 2021 ರವರೆಗೆ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ರಾಜ್ಯದ ಮೊದಲ ಮಹಿಳಾ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಸಲಹೆಗಾರರಾಗಿ ಭಾರತದ ರಾಷ್ಟ್ರಪತಿಯಾಗುವವರೆಗೆ ಬಹಳ ದೂರ ಬಂದಿದ್ದಾರೆ.
English summary
Draupadi Murmu, India’s first citizen, became the first woman from a tribal community to hold the highest position. She is also the second woman President of the country.