ಇಸ್ರೋದ ಚಂದ್ರಯಾನ-3 ಮಿಷನ್ ಹಿಂದಿರುವ ಮಹಿಳೆ ರಿತು ಕರಿದಾಲ್ ಯಾರು? | Who is Ritu Karidhal, the woman behind ISRO’s Chandrayaan-3 mission?

India

oi-Punith BU

|

Google Oneindia Kannada News

ಬೆಂಗಳೂರು, ಜುಲೈ 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಮಧ್ಯಾಹ್ನ 2.35 ಕ್ಕೆ ಚಂದ್ರಯಾನ-3 ಅನ್ನು ತನ್ನ ಮೂರನೇ ಚಂದ್ರ ಅನ್ವೇಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವುದು ಮಿಷನ್‌ನ ಉದ್ದೇಶವಾಗಿದೆ. ಈ ಮಿಷನ್ ಅನ್ನು ISRO ದ GSLV ಮಾರ್ಕ್ 3 (LVM 3) ಹೆವಿ-ಲಿಫ್ಟ್ ಲಾಂಚ್ ವೆಹಿಕಲ್‌ನಲ್ಲಿ ಪ್ರಾರಂಭಿಸಲಾಗಿದೆ. LVM-3 ಪ್ರೊಪಲ್ಷನ್, ಲ್ಯಾಂಡರ್ ಮತ್ತು ರೋವರ್‌ಗಳ ಸಂಯೋಜನೆಯಾಗಿದೆ. ಲ್ಯಾಂಡರ್ ಚಂದ್ರನ ನಿರ್ದಿಷ್ಟ ಸ್ಥಳದಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.

Who is Ritu Karidhal, the woman behind ISROs Chandrayaan-3 mission?

ಇದಲ್ಲದೆ ಅದರ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ಕೈಗೊಳ್ಳುವ ರೋವರ್ ಅನ್ನು ನಿಯೋಜಿಸುತ್ತದೆ. ಈ ಕಾರ್ಯ ಯಶಸ್ವಿಯಾದರೆ, ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ನಂತರ ಭಾರತವು ಇದನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಲಿದೆ.

Breaking: Chrandrayaan-3: ನಭಕ್ಕೆ ಯಶಸ್ವಿಯಾಗಿ ಚಿಮ್ಮಿದ ಚಂದ್ರಯಾನ 3 ನೌಕೆBreaking: Chrandrayaan-3: ನಭಕ್ಕೆ ಯಶಸ್ವಿಯಾಗಿ ಚಿಮ್ಮಿದ ಚಂದ್ರಯಾನ 3 ನೌಕೆ

ಇದೆಲ್ಲದಕ್ಕೂ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಹಿರಿಯ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ ರಿತು ಕರಿದಾಲ್ ಶ್ರೀವಾಸ್ತವ್ ಅವರು ಕಠಿಣ ಪರಿಶ್ರಮ ಅಡಗಿದ್ದು, ಅವರು ಈ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ.

ರಿತು ಕರಿದಾಲ್ ಯಾರು?

ರಿತು ಕರಿದಾಲ್ ಅವರು ಈ ಮೊದಲು ಚಂದ್ರಯಾನ-2 ರ ಮಿಷನ್ ನಿರ್ದೇಶಕರಾಗಿದ್ದರು. ಇವರು ಮಂಗಳಯಾನ, ಭಾರತದ ಮಾರ್ಸ್ ಆರ್ಬಿಟರ್ ಮಿಷನ್ (MOM) ನ ಉಪ ಕಾರ್ಯಾಚರಣೆ ನಿರ್ದೇಶಕರಾಗಿದ್ದರು. ರಿತು ಅವರು ಭಾರತದ ರಾಕೆಟ್ ಮಹಿಳೆ ಎಂದೇ ಜನಪ್ರಿಯರಾಗಿದ್ದಾರೆ.

ರಿತು ಕರಿದಾಲ್ ಅವರು ಲಕ್ನೋದಲ್ಲಿ ಹುಟ್ಟಿ ಬೆಳೆದವರು. ಅವರು ಲಕ್ನೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪಡೆದಿದ್ದಾರೆ. ನಂತರ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ME ಪದವಿಯನ್ನು ಪಡೆದಿದ್ದಾರೆ. ಬಳಿಕ ಅವರು 1997 ರಲ್ಲಿ ಇಸ್ರೋ ಸೇರಿದ್ದರು.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿಯನ್ನು ಡಾ. ರೀತು ಕರಿದಾಲ್‌ ಸ್ವೀಕರಿಸಿದ್ದಾರೆ. ಅವರು ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜೀಸ್ & ಇಂಡಸ್ಟ್ರೀಸ್ (SIATI) ನಿಂದ 2015 ರಲ್ಲಿ ಮಾಮ್‌ಗಾಗಿ ಇಸ್ರೋ ತಂಡ ಪ್ರಶಸ್ತಿ, ‘ASI ತಂಡ ಪ್ರಶಸ್ತಿ’, ‘ಏರೋಸ್ಪೇಸ್‌ನಲ್ಲಿ ಮಹಿಳಾ ಸಾಧಕರು, 2017’ ಅನ್ನು ಸಹ ಪಡೆದಿದ್ದಾರೆ.

ವರ್ಲ್ಡ್ ಎಕನಾಮಿಕ್ ಫೋರಮ್ ಪ್ರಕಾರ, ಕರಿದಾಲ್ ಯಾವಾಗಲೂ ಬಾಹ್ಯಾಕಾಶದಿಂದ ಆಕರ್ಷಿತರಾಗಿದ್ದಾರೆ ಮತ್ತು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸುತ್ತಾರೆ. ಅವರು ಇಸ್ರೋ ಮತ್ತು ನಾಸಾ ಸುದ್ದಿ ವರದಿಗಳ ಪೇಪರ್ ಕಟಿಂಗ್‌ಗಳನ್ನು ಸಂಗ್ರಹಿಸುತ್ತಿದ್ದರು. ಕರಿದಾಳ್ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ 20 ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

English summary

The Indian Space Research Organization (ISRO) launched Chandrayaan-3, its third lunar exploration mission, at 2.35 pm on Friday from the Satish Dhawan Space Center in Sriharikota, Andhra Pradesh.

Story first published: Friday, July 14, 2023, 15:30 [IST]

Source link