ವೆಸ್ಟ್ ಇಂಡೀಸ್ ಎರಡನೇ ಅತಿ ಕಡಿಮೆ ಮೊತ್ತ
ಇದಕ್ಕೂ ಮೊದಲು ಬ್ಯಾಟ್ ಬೀಸಿದ ವಿಂಡೀಸ್, ಭಾರತದ ಸ್ಪಿನ್ ದಾಳಿ ವಿರುದ್ಧ 20 ಓವರ್‌ಗಳಿಗಿಂತ ಹೆಚ್ಚು ಕಾಲ ಆಡಿದ್ದೇ ಹೆಚ್ಚು. ಕೇವಲ 7 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ತಂಡವು, ನಂತರ ಸಣ್ಣ ಜೊತೆಯಾಟದ ಬಲ ಪಡೆಯಿತು. ಮೇಯರ್ಸ್ 2 ರನ್ ಗಳಿಸಿ ಔಟಾದ ಬಳಿಕ ಕಿಂಗ್ ಮತ್ತು ಅಥಾನಾಜೆ 38 ರನ್ ಜೊತೆಯಾಟವಾಡಿದರು. ಆ ಬಳಿಕ ಹೋಪ್ ಮತ್ತು ಹೆಟ್ಮೆಯರ್ ನಡುವೆ 43 ರನ್‌ಗಳ ಜೊತೆಯಾಟ ಬಂದಿತು. ಇದರ ಹೊರತಾಗಿ ತಂಡ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.