Karnataka
oi-Reshma P
ಬೆಂಗಳೂರು, ಜುಲೈ 27: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸೋಲು ಕಂಡ ಬಳಿಕ, ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ-ಜೆಡಿಎಸ್ ಒಂದಾಗಿದ್ದು, ಇದೀಗ ಬಿಜೆಪಿ ಹಾಗೂ ಜೆಡಿಎಸ್ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಹೌದು, ಈ ಕುರಿತು ಗುರುವಾರ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಾತ್ಯತೀತ ಜನತಾ ದಳದವರಿಗೆ ಅಸ್ತಿತ್ವ ಇರುತ್ತೋ ಇಲ್ಲವೋ ಗೊತ್ತಿಲ್ಲ.ಇವತ್ತೋ, ನಾಳೇನೋ ಬಿಜೆಪಿ ಪಕ್ಷದಲ್ಲಿ ಜೆಡಿಎಸ್ ವಿಲೀನ ಆಗುತ್ತೆ ಎಂದು ಜೆಡಿಎಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಬಿಜೆಪಿಯವರಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಪ್ಲೇಯಿಂಗ್ 11ನಲ್ಲೂ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿಯವರು ಸಬ್ಸ್ಟಿಟ್ಯೂಟ್ ಆಯ್ಕೆ ಮಾಡ್ತಿದ್ದಾರೆ. ಬಿಜೆಪಿಯವರಿಗೂಅಸ್ತಿತ್ವ ಇಲ್ಲ, ಜೆಡಿಎಸ್ನವರಿಗೂ ಅಸ್ತಿತ್ವ ಇಲ್ಲ. ಒರಿಜಿನಲ್ ಭಾರತೀಯ ಜನತಾ ಪಕ್ಷ ಇಲ್ಲ, ಜೆಡಿಎಸ್ ಸಹ ಇಲ್ಲ. ಹಾಗಾಗಿ ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಂಚಾರ ಸಮಯದಲ್ಲಿ ಜೀರೋ ಟ್ರಾಫಿಕ್ ಬೇಡ; ಸಚಿವ ಪ್ರಿಯಾಂಕ್ ಖರ್ಗೆ
ಇನ್ನು ಸರ್ಕಾರದ ವಿರುದ್ದ ವರ್ಗಾವಣೆ ದಂಧೆ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನೋ ಪೆನ್ಡ್ರೈವ್ ಇದೆ ಅಂತಾ ಹೇಳಿದ್ದರು. ಎಸ್ಪಿ ರೋಡ್ನಿಂದ ಪೆನ್ ಡ್ರೈವ್ ತಂದಿರೋದು ಅನ್ನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
English summary
Minister Priyank kharge Said That JDS Party Will Merge With BJP Shortly
Story first published: Thursday, July 27, 2023, 23:55 [IST]