‘ಇಫ್ಕೋ ಕಿಸಾನ್ ಡ್ರೋನ್’ ಸಂಗ್ರಹಿಸಲು ಬೃಹತ್ ರಾಷ್ಟ್ರವ್ಯಾಪಿ ಅಭಿಯಾನ | IFFCO – IFFCO to procure 2,500 agri-drones; launches campaign to train 5k rural entrepreneurs

Karnataka

oi-Oneindia Staff

By ಒನ್ ಇಂಡಿಯಾ ಡೆಸ್ಕ್

|

Google Oneindia Kannada News

ಬೆಂಗಳೂರು, ಜುಲೈ 4, 2023: ಇಫ್ಕೋ ತನ್ನ ಕ್ರಾಂತಿಕಾರಿ ಉತ್ಪನ್ನಗಳಾದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯನ್ನು ಸ್ಪ್ರೇ ರೂಪದಲ್ಲಿ ಸಿಂಪಡಿಸಲು 2,500 “ಇಫ್ಕೋ ಕಿಸಾನ್ ಡ್ರೋನ್ ಗಳನ್ನು” ಸಂಗ್ರಹಿಸಲು ಬೃಹತ್ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಪ್ರಧಾನಮಂತ್ರಿಗಳ ‘ಸಹ್ಕಾರ್ ಸೆ ಸಮೃದ್ಧಿ’ತತ್ವದಿಂದ ಪ್ರೇರೇಪಣೆಗೊಂಡಿದ್ದಾಗಿದೆ.

ಇದು 5,000 ಗ್ರಾಮೀಣ ಉದ್ಯಮಿಗಳ ಅಭಿವೃದ್ಧಿಗೆ ಕಾರಣವಾಗಲಿದೆ. ಇವರಿಗೆ ಇಫ್ಕೋ ಗುರುತಿಸಿರುವ ಡ್ರೋನ್ ಗಳನ್ನು ಬಳಸುವ ತರಬೇತಿ ನೀಡಲಾಗುತ್ತದೆ. ಇದು ಗ್ರಾಮೀಣ ಆರ್ಥಿಕತೆಯ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರ ನಾಯಕತ್ವದಲ್ಲಿ ಸುಸ್ಥಿರ ಕೃಷಿ ಮತ್ತು ಸಮಗ್ರ ಸಹಕಾರಿ ಅಭಿವೃದ್ಧಿಯತ್ತ ಒಂದು ಹೆಜ್ಜೆಯಾಗಿದೆ.

IFFCO - IFFCO to procure 2,500 agri-drones

ನ್ಯಾನೋ ರಸಗೊಬ್ಬರಗಳು, ಡ್ರೋನ್ ಹಾಗೂ ಸಂಬಂಧಿತ ಉತ್ಪನ್ನಗಳನ್ನು ರೈತರ ಹೊಲಗಳಿಗೆ ಸಾಗಿಸಲು ಇಫ್ಕೋ L-5 ವರ್ಗದ ಎಲೆಕ್ಟ್ರಿಕ್ ವೆಹಿಕಲ್ ತ್ರಿ ವೀಲರುಗಳ ಅಡಿಯಲ್ಲಿ 2,500 ಎಲೆಕ್ಟ್ರಿಕ್ ತ್ರಿ ವೀಲರ್ ಗಳನ್ನು (ಲೋಡರ್ ವಿಧದ) ಖರೀದಿಸುತ್ತದೆ. ಈ EV ತ್ರಿ ವೀಲರ್ ಪರಿಸರ ಸ್ನೇಹಿಯಾಗಿದೆ.

ಇದು ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಈ ಯೋಜನೆಯ ಅಡಿಯಲ್ಲಿ ಹೆಚ್ಚಿನ ಸಹಾಯಕ್ಕಾಗಿ ರಾಜ್ಯಗಳನ್ನು ಸಕ್ರಿಯಗೊಳಿಸಲು ಪ್ರಧಾನಮಂತ್ರಿ ಪ್ರಣಾಮ್ ಯೋಜನೆಯನ್ನು ಸಹ ಬೆಂಬಲಿಸುತ್ತದೆ.

ರಾಸಾಯನಿಕ ಮತ್ತು ರಸಗೊಬ್ಬರಗಳ ಗೌರವಾನ್ವಿತ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಮಾರ್ಗದರ್ಶನದಲ್ಲಿ, ಇಫ್ಕೋ ಈ ಸ್ಮಾರ್ಟ್ ಹೈಟೆಕ್ ಪರಿಹಾರಗಳ ಮೂಲಕ ರೈತರ ಕ್ಷೇತ್ರಕ್ಕೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಒದಗಿಸಲು ಮುಂದಾಗಿದೆ.

ಗುಜರಾತ್‌ನಲ್ಲಿ ಜಾಗತಿಕ ಫಿನ್‌ಟೆಕ್ ಹಬ್ ತೆರೆಯಲು ನಿರ್ಧರಿಸಿದ ಗೂಗಲ್ - ಪ್ರಧಾನಿ ಭೇಟಿ ನಂತರ ಸುಂದರ್ ಪಿಚೈ ಘೋಷಣೆಗುಜರಾತ್‌ನಲ್ಲಿ ಜಾಗತಿಕ ಫಿನ್‌ಟೆಕ್ ಹಬ್ ತೆರೆಯಲು ನಿರ್ಧರಿಸಿದ ಗೂಗಲ್ – ಪ್ರಧಾನಿ ಭೇಟಿ ನಂತರ ಸುಂದರ್ ಪಿಚೈ ಘೋಷಣೆ

ನ್ಯಾನೋ ತಂತ್ರಜ್ಞಾನ ಆಧಾರಿತ ರಸಗೊಬ್ಬರಗಳು, ಕೃಷಿ-ಡ್ರೋನ್ಗಳ ಉತ್ತೇಜನ, ಗ್ರಾಮೀಣ ಇ-ಕಾಮರ್ಸ್, ಡಿಜಿಟಲ್ ಆಗಿ ರೈತರು ಮತ್ತು ಫಾರ್ಮ್ ಗಳನ್ನು ಸಕ್ರಿಯಗೊಳಿಸುವುದು, IoT ಇತ್ಯಾದಿಗಳನ್ನು ಒಳಗೊಂಡಂತೆ ಇಫ್ಕೋ ವಿವಿಧ ಕೃಷಿ-ತಂತ್ರಜ್ಞಾನಗಳನ್ನು ಪರಿಚಯಿಸಿದೆ ಮತ್ತು ಹೂಡಿಕೆ ಮಾಡಿದೆ.

ಇಫ್ಕೋ ಆಧುನಿಕ ಭಾರತೀಯ ಕೃಷಿಯ ಮುಂದಾಳಾಗುವ ಗುರಿ ಹೊಂದಿದೆ, ಸುಸ್ಥಿರ ಕೃಷಿಯ ಗುರಿಯನ್ನು ಹೊಂದಿರುವ ನವೋದ್ಯಮಿಗಳು ಮತ್ತು ಪ್ರಗತಿಪರ ಗ್ರಾಮೀಣ-ಉದ್ಯಮಿಗಳೊಂದಿಗೆ ಬ್ರ್ಯಾಂಡ್ ಆಗಿರಲಿದೆ.

English summary

IFFCO – IFFCO to procure 2,500 agri-drones; launches campaign to train 5k rural entrepreneurs. Know More

Story first published: Tuesday, July 4, 2023, 19:52 [IST]

Source link