ಇತಿಹಾಸ ಸೃಷ್ಟಿಸಿದ ಬೆಂಗಳೂರು ಹುಡುಗಿ ಶ್ರೇಯಾಂಕ ಪಾಟೀಲ್: ಮಹಿಳಾ ಸಿಪಿಎಲ್‌ನಲ್ಲಿ ಆಡುವ ಮೊದಲ ಭಾರತೀಯ ಆಟಗಾರ್ತಿ | RCB-W Player Shreyanka Patil Makes History As The First Indian To Join Women’s CPL

Sports

oi-Naveen Kumar N

|

Google Oneindia Kannada News

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಹೊಸ ಇತಿಹಾಸ ಬರೆದಿದ್ದಾರೆ. ವೆಸ್ಟ್‌ ಇಂಡೀಸ್‌ನ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿರುವ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಮುಂಬರುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ (ಡಬ್ಲ್ಯೂಸಿಪಿಎಲ್) ಗಯಾನಾ ಅಮೆಜಾನ್ ವಾರಿಯರ್ಸ್ ತಂಡಕ್ಕೆ ಆಡಲು ಶ್ರೇಯಾಂಕಾ ಪಾಟೀಲ್ ಸಹಿ ಹಾಕಿದ್ದಾರೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 10 ರವರೆಗೆ ಪಂದ್ಯಾವಳಿ ನಡೆಯಲಿದೆ.

 RCB-W Player Shreyanka Patil Makes History As The First Indian To Join Womens CPL

ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಉದಯೋನ್ಮುಖ ಏಷ್ಯಾಕಪ್‌ ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಮಾರ್ಚ್‌ನಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದ ಅವರು, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಹೆಸರು ಗಳಿಸಿದ್ದರು.

ಎರಡು ಪಂದ್ಯಗಳಲ್ಲಿ ಒಂಬತ್ತು ವಿಕೆಟ್

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 10 ಲಕ್ಷ ರೂಪಾಯಿ ಮೂಲ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದ ಅವರು ನಂತರ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಹೆಸರು ಗಳಿಸಿದರು. ಇತ್ತೀಚೆಗೆ ಹಾಂಗ್ ಕಾಂಗ್‌ನಲ್ಲಿ ನಡೆದ ಮಹಿಳಾ ಉದಯೋನ್ಮುಖ ಏಷ್ಯಾ ಕಪ್‌ನಲ್ಲಿ ಪಂದ್ಯಾವಳಿಯ ಆಟಗಾರ್ತಿ ಎಂದು ಹೆಸರಿಸಲ್ಪಟ್ಟರು. ಭಾರತ ಎ ತಂಡಕ್ಕಾಗಿ ಆಡಿದ ಅವರು, ಎರಡು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದರು.

ಬೆಂಗಳೂರು ಹುಡುಗಿ ಶ್ರೇಯಾಂಕ ಪಾಟೀಲ್ ಸೀನಿಯರ್ ಅಂತರಾಷ್ಟ್ರೀಯ ಪದಾರ್ಪಣೆ ಮಾಡುವ ಮುನ್ನವೇ ವಿದೇಶಿ ಲೀಗ್‌ನಲ್ಲಿ ಗುತ್ತಿಗೆ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿದೇಶಿ ಲೀಗ್‌ಗಳಲ್ಲಿ ಭಾರತದ ಆಟಗಾರ್ತಿಯರು

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಅವರಂತಹ ಅಗ್ರ ಆಟಗಾರರು ಆಸ್ಟ್ರೇಲಿಯಾದಲ್ಲಿ ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ ಮತ್ತು ಇಂಗ್ಲೆಂಡ್‌ನ ದಿ ಹಂಡ್ರೆಡ್‌ನಲ್ಲಿ ಆಡಿದ್ದಾರೆ. ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 2023 ರ ಋತುವಿನಲ್ಲಿ 11 ದಿನಗಳಲ್ಲಿ ಏಳು ಪಂದ್ಯಗಳು ನಡೆಯಲಿವೆ.

2023 ರ ಋತುವಿನಲ್ಲಿ ಬಾರ್ಬಡೋಸ್ ರಾಯಲ್ಸ್, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಆಡಲಿವೆ. ವೆಸ್ಟ್ ಇಂಡೀಸ್‌ನ ಪ್ರಮುಖ ಆಟಗಾರರಾ ಡಿಯಾಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್ ಮತ್ತು ಸ್ಟಾಫನಿ ಟೇಲರ್ ಸೇರಿದಂತೆ ಹಲವು ಆಟಗಾರರು ಆಡಲಿದ್ದಾರೆ. ಇವರ ಜೊತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಭಾರತದಿಂದ ಸಾಗರೋತ್ತರ ಆಟಗಾರರು ಸಹ ಆಡಲಿದ್ದಾರೆ.

English summary

Shreyanka Patil Makes History as the First Indian Player to Join Guyana Amazon Warriors in Women’s Caribbean Premier League (WCPL) after Impressive Performance in WPL 2023.

Story first published: Saturday, July 1, 2023, 12:53 [IST]

Source link