ಇಂಡಿಯಾ ಎಂಬ ಹೆಸರನ್ನು ಸ್ವಾರ್ಥ ಸಾಧನೆಗಾಗಿ ಬಳಕೆ: ವಿಪಕ್ಷಗಳ ವಿರುದ್ದ ಬಿ ವೈ ರಾಘವೇಂದ್ರ ಕಿಡಿ | BY Raghavendra Tweeted Against The Opposition Parties India Alliance

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 26: ಮೇಕ್ ಇನ್ ಇಂಡಿಯಾ -ಸ್ಟಾರ್ಟ್ ಅಪ್ ಇಂಡಿಯಾಗಳು ದೇಶಪ್ರೇಮದಲ್ಲಿ ಹುಟ್ಟಿದ ಯೋಜನೆಗಳು. ನಿಮ್ಮದು, ಇಂಡಿಯಾ ಎಂಬ ಹೆಸರನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿರುವ ಕೂಟ ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ವಿಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಭಾರತೀಯರನ್ನು ಭಾರತೀಯರ ವಿರುದ್ಧವೇ ಎತ್ತಿಕಟ್ಟಿ ದೇಶ ಲೂಟಿ ಹೊಡೆದ ಬ್ರಿಟಿಷರಂತೆಯೇ ಇಂಡಿಯನ್ ಮುಜಾಹಿದೀನ್-ಪಿಎಫ್ಐನಂಥ ಮತೀಯವಾದಿಗಳನ್ನು ಮುದ್ದಿಸಿ ಬೆಳೆಸಿ ದೇಶದ ಐಕ್ಯತೆಗೆ ಕೊಳ್ಳಿಯಿಟ್ಟ ಪಕ್ಷ ಇವತ್ತು ಇಂಡಿಯಾದ ಪವಿತ್ರ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲು ಹೊರಟಿದೆ. ಇದು ಈಸ್ಟ್ ಇಂಡಿಯಾ ಕಂಪನಿಯಂಥದ್ದೇ ಹುನ್ನಾರವಲ್ಲದೆ ಇನ್ನೇನು? ಎಂದು ಪ್ರಶ್ನಿಸಿದರು.

by-raghavendra-tweeted

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ,ಇಂಡಿಯಾ ಎಂಬುದು ಪವಿತ್ರ ಹೆಸರಲ್ಲ ಅಂದವರ್ಯಾರು? ಎಂದು ಪ್ರಶ್ನಿಸಿದ ಅವರು, ಪಾಶ್ಚಾತ್ಯರಿಂದ ಪಡೆದುಕೊಂಡ ಇಂಡಿಯಾ ಎಂಬ ಹೆಸರನ್ನೂ ತನ್ನ ಅಂತಃಶಕ್ತಿಯಿಂದ ಪವಿತ್ರ ಮಾಡಿಕೊಂಡಿರುವ ಪುಣ್ಯಭೂಮಿ ಭಾರತ. ಆಧುನಿಕ ಇಂಡಿಯಾದಲ್ಲಿ ಈ ಪಾರಂಪರಿಕ ಶ್ರೀಮಂತಿಕೆಯ ಭಾರತವನ್ನು ಸೇರಿಸಿ ದೇಶಕಟ್ಟುವ ಕೆಲಸ ನಮ್ಮ ಪ್ರಧಾನಿ ಮಾಡುತ್ತಿದ್ದಾರೆ.

English summary

BY Raghavendra Said That They are using the name India for selfish gain

Story first published: Wednesday, July 26, 2023, 20:12 [IST]

Source link