ಆಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ಥೆಗೆ ಉದ್ಯೋಗ ನೀಡಿದ ಸಿಎಂ ಸಿದ್ದರಾಮಯ್ಯ! | CM Siddaramaiah Instructed To Officers That Give Job To Acid Attacked Victim

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್ 30 : ಆಸಿಡ್ ದಾಳಿಗೆ ಒಳಗಾಗಿ ಸಂಕಷ್ಟಕ್ಕೆ ತುತ್ತಾಗಿದ್ದ ಸಂತ್ರಸ್ಥೆ ಸ್ನಾತಕೋತ್ತರ ಪದವೀಧರೆಗೆ ತಮ್ಮ ಸಚಿವಾಲಯದಲ್ಲಿ ಉದ್ಯೋಗ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.

ಶುಕ್ರವಾರ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಮುಖ್ಯಮಂತ್ರಿಗಳು ಸಂತ್ರಸ್ಥೆಯ ಅಹವಾಲನ್ನು ಕೇಳಿ ಸ್ಥಳದಲ್ಲೇ ಉದ್ಯೋಗದ ಭರವಸೆ ನೀಡಿದರು.

CM Siddaramaiah Instructed To Officers

2022ರ ಏಪ್ರಿಲ್ 28 ರಂದು ಆಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ಥೆ ಎಂ.ಕಾಂ ಪದವೀಧರೆ ಆಗಿದ್ದ ಆಸಿಡ್‌ ದಾಳಿಯ ಸಂತ್ರಸ್ಥೆ, ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲೂ ಉದ್ಯೋಗದ ಮನವಿ ಮಾಡಿದ್ದೆವು. ಅವರು ಭರವಸೆ ನೀಡಿದ್ದರು.

ಆದರೆ ಉದ್ಯೋಗ ಮಾತ್ರ ಕೊಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಸಂತ್ರಸ್ಥೆಯ ತಂದೆ ಮತ್ತು ತಾಯಿಯ ಜತೆ ಜನತಾ ದರ್ಶನಕ್ಕೆ ಬಂದು ಅಳಲು ತೋಡಿಕೊಂಡರು. ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

CM Siddaramaiah: ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಸಂತಸ; ಮರಳಿ ಪತ್ರ ಬರೆದ ಸಿದ್ದರಾಮಯ್ಯ! ಪತ್ರದಲ್ಲಿ ಏನಿದೆ? CM Siddaramaiah: ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಸಂತಸ; ಮರಳಿ ಪತ್ರ ಬರೆದ ಸಿದ್ದರಾಮಯ್ಯ! ಪತ್ರದಲ್ಲಿ ಏನಿದೆ?

ಆಸಿಡ್ ದಾಳಿ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು, ಆರೋಪಿ ಸ್ವಾಮಿ ವೇಷದಲ್ಲಿ ತಿರುವಣ್ಣಾಮಲೈ ಆಶ್ರಮದಲ್ಲಿ ತಲೆ ಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿದರು. ಬಳಿಕ ಭಕ್ತರ ವೇಷದಲ್ಲಿ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಬೆಂಗಳೂರು ಜೈಲಿನಲ್ಲಿದ್ದಾನೆ. ಸಂತ್ರಸ್ಥೆ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡಲಾಗಿದೆ.

ರಾಷ್ಟ್ರೀಯ ಯುವ ಕಾಂಗ್ರೆಸ್‌ ನಿಂದ “ಬೆಹತರ್‌ ಭಾರತ್‌ ಬುನಿಯಾದಿ” ಸಮಾವೇಶ

ರಾಷ್ಟ್ರೀಯ ಯುವ ಕಾಂಗ್ರೆಸ್‌ ನಿಂದ ಮುಂದಿನ ತಿಂಗಳು ನಡೆಯಲಿರುವ “ಬೆಹತರ್‌ ಭಾರತ್‌ ಬುನಿಯಾದಿ” ರಾಷ್ಟ್ರೀಯ ಕಾರ್ಯಕ್ರಮ ಉದ್ಘಾಟಿಸುವಂತೆ ಯುವ ಕಾಂಗ್ರೆಸ್‌ ನಿಯೋಗ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರಿಗೆ ಆಹ್ವಾನ ನೀಡಿದೆ.

ಏಐಸಿಸಿ ಜಂಟಿ ಕಾರ್ಯದರ್ಶಿ ಯುವ ಕಾಂಗ್ರೆಸನ ಉತ್ಸವಾರಿ ಕೃಷ್ಣ ಅಳವಾರು, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಏಐಸಿಸಿ ಸದಸ್ಯರಾದ ಎಂ.ಎಸ್.‌ ರಕ್ಷಾ ರಾಮಯ್ಯ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

“ಬೆಹತರ್‌ ಭಾರತ್‌ ಬುನಿಯಾದಿ” ಸಮಾವೇಶವನ್ನು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಸುತ್ತಿದ್ದು, ಯುವ ಸಮೂಹದ ಮೂಲಕ ದೇಶದಲ್ಲಿ ಯುವ ಶಕ್ತಿಯನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅತಿ ದೊಡ್ಡ ಯುವ ಸಮಾವೇಶ ಇದಾಗಿದ್ದು, ಮೂರು ದಿನಗಳ ಪಕ್ಷದ ಹಿರಿಯ ಮುಖಂಡರು, ತಜ್ಞರು ವಿವಿಧ ವಿಷಯಗಳ ಬಗ್ಗೆ ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ.

English summary

Congress Government: Chief Minister Siddaramaiah siddaramaiah instructed to officers that give job to acid attacked victim

Source link