Bollywood
oi-Srinivasa A
ಮೊನ್ನೆಯಷ್ಟೇ
(
ಜೂನ್
18
)
ಭಾರತದ
ಬಹು
ನಿರೀಕ್ಷಿತ
ಚಿತ್ರ
ಆದಿಪುರುಷ್
ಬಿಡುಗಡೆಯಾಯಿತು.
ಪ್ರಭಾಸ್
ನಟನೆಯ
ಮೊದಲ
ಬಾಲಿವುಡ್
ಚಿತ್ರ
ಇದಾಗಿದ್ದು,
ತಾನ್ಹಾಜಿ
ರೀತಿಯ
ಸೂಪರ್
ಹಿಟ್
ಚಿತ್ರ
ನಿರ್ದೇಶನ
ಮಾಡಿದ್ದ
ಓಂ
ರಾವತ್
ಈ
ಚಿತ್ರಕ್ಕೆ
ಆಕ್ಷನ್
ಕಟ್
ಹೇಳಿದ್ದಾರೆ.
ಇನ್ನು
ಬಿಡುಗಡೆಗೂ
ಮುನ್ನವೇ
ತನ್ನ
ಟೀಸರ್‌ನಲ್ಲಿನ
ಕಳಪೆ
ವಿಎಫ್ಎಕ್ಸ್
ಕಾರಣದಿಂದಾಗಿ
ತೀವ್ರ
ಟ್ರೋಲ್‌ಗೆ
ಒಳಗಾಗಿದ್ದ
ಆದಿಪುರುಷ್
ಚಿತ್ರ
ಬಿಡುಗಡೆಯಾದ
ನಂತರವೂ
ಸಹ
ಅದೇ
ದಾರಿ
ಹಿಡಿದಿದೆ.
ಹೌದು,
ಆದಿಪುರುಷ್
ಬಿಡುಗಡೆಯಾದ
ಬಳಿಕ
ಮಿಶ್ರ
ಪ್ರತಿಕ್ರಿಯೆನ್ನು
ಪಡೆದುಕೊಳ್ಳುವುದು
ಮಾತ್ರವಲ್ಲದೇ
ಹೀನಾಯವಾಗಿ
ಟ್ರೋಲ್
ಆಗ್ತಿದೆ.
ರಾಮಾಯಣ
ಆಧಾರಿತ
ಸಿನಿಮಾದಲ್ಲಿ
ತಪ್ಪಾಗಿ
ರಾಮಾಯಣದ
ಸನ್ನಿವೇಶಗಳನ್ನು
ತೋರಿಸಲಾಗಿದೆ.
ರಾಮನಿಗೆ
ಸರಿ
ಹೊಂದುವಂತಹ
ವಸ್ತ್ರಗಳನ್ನು
ಕೆಲ
ದೃಶ್ಯಗಳಲ್ಲಿ
ಧರಿಸಿಲ್ಲ.
ಸೀತೆ
ಪಾತ್ರಧಾರಿ
ಕೃತಿ
ಸೆನನ್
ಕೆಲ
ದೃಶ್ಯಗಳಲ್ಲಿ
ಮಾಡರ್ನ್
ನಟಿಯರ
ಹಾಗೆ
ಹಾಫ್
ಬ್ಲೌಸ್
ತೊಟ್ಟಿದ್ದಾರೆ,
ತಲೆಗೆ
ಸೆರಗನ್ನೇ
ಧರಿಸಿಲ್ಲ.
ಹನುಮಂತನ
ಲುಕ್
ಸ್ವಲ್ಪವೂ
ಸರಿ
ಇಲ್ಲ.
ವಾನರ
ಸೈನ್ಯವನ್ನು
ಗೊರಿಲ್ಲಾಗಳ
ರೀತಿ
ಮಾಡಲಾಗಿದೆ.
ರಾವಣನ
ತಲೆಗಳ
ಆಕಾರವನ್ನೇ
ಬದಲಾಯಿಸಲಾಗಿದೆ.
ಹೀಗೆ
ಹತ್ತು
ಹಲವಾರು
ಕಾರಣಗಳಿಂದಾಗಿ
ಆದಿಪುರುಷ್
ಟ್ರೋಲಿಗರ
ಕೈಗೆ
ಸಿಕ್ಕು
ಹೀನಾಮಾನವಾಗಿ
ಟೀಕೆಗೆ
ಒಳಗಾಗಿದೆ.
ಇನ್ನು
ಆದಿಪುರುಷ್
ತಂಡದ
ಈ
ಅವಸ್ಥೆಯನ್ನು
ಕಂಡು
ನೆಟ್ಟಿಗರು
ನಗುತ್ತಿದ್ದರೆ,
ಚಿತ್ರವನ್ನು
ವೀಕ್ಷಿಸಿ
ಹೊರಬಂದ
ಸಿನಿ
ರಸಿಕರು
ಚಿತ್ರದಲ್ಲಿ
ತಪ್ಪಾದ
ರಾಮಾಯಣ
ತೋರಿಸಲಾಗಿದೆ,
ಚಿತ್ರದಲ್ಲಿ
ಅನೇಕ
ಸಂಭಾಷಣೆಗಳು
ಚೆನ್ನಾಗಿಲ್ಲ,
ರಾಮಾಯಣದ
ಕಥೆ
ಇರುವ
ಚಿತ್ರದ
ಡೈಲಾಗ್ಸ್
ಸಾಮಾನ್ಯ
ಕಮರ್ಷಿಯಲ್
ಸಿನಿಮಾ
ಡೈಲಾಗ್
ಎಂಬಂತೆ
ಅನಿಸುತ್ತದೆ
ಎಂದು
ಕಿಡಿಕಾರಿದ್ದಾರೆ.
ಇನ್ನು
ಇದು
ಭಾರತದ
ಸಿನಿ
ರಸಿಕರ
ಆರೋಪವಾದರೆ
ನೇಪಾಳದ
ಸಿನಿ
ರಸಿಕರು
ಆದಿಪುರುಷ್
ಚಿತ್ರವನ್ನು
ವೀಕ್ಷಿಸಿದ
ಬಳಿಕ
ಚಿತ್ರತಂಡದ
ವಿರುದ್ಧ
ಕೆಂಡಾಮಂಡಲವಾಗಿದ್ದಾರೆ.
ಚಿತ್ರವನ್ನು
ತಮ್ಮ
ದೇಶದಲ್ಲಿ
ಬ್ಯಾನ್
ಮಾಡಿದ್ದಾರೆ.
ಆದಿಪುರುಷ್
ಸಿನಿಮಾದಲ್ಲಿ
“ಸೀತೆ
ಭಾರತದ
ಮಗಳು”
ಎಂದು
ಹೇಳುವ
ಡೈಲಾಗ್
ಇದೆ.
ಈ
ಡೈಲಾಗ್
ವಿರುದ್ಧ
ಕಠ್ಮಂಡು
ಮೇಯರ್
ತೀವ್ರ
ಆಕ್ಷೇಪ
ವ್ಯಕ್ತಪಡಿಸಿದ್ದರು.
ಮೂರು
ದಿನಗಳ
ಗಡುವು
ನೀಡಿ
ಸಿನಿಮಾದಲ್ಲಿ
ಡೈಲಾಗ್
ಅನ್ನು
ತೆಗೆದು
ಹಾಕುವಂತೆ
ಎಚ್ಚರಿಕೆ
ಕೊಟ್ಟಿದ್ದರು.
ಅದೇ
ರೀತಿ
ಇದೀಗ
ಮೂರು
ದಿನಗಳು
ಕಳೆಯುವ
ಸನಿಹಕ್ಕೆ
ಬಂದಿದ್ದು,
ಚಿತ್ರತಂಡ
ಈ
ಕುರಿತು
ಯಾವುದೇ
ಪ್ರತಿಕ್ರಿಯೆ
ನೀಡದ
ಕಾರಣ
ಕಠ್ಮಂಡು
ಮೇಯರ್
ನಗರದ
ಎಲ್ಲಾ
ಚಿತ್ರಮಂದಿರಗಳ
ಪ್ರದರ್ಶಕರಿಗೂ
ನಾಳೆಯಿಂದ
ಯಾವುದೇ
ಭಾರತದ
ಸಿನಿಮಾವನ್ನೂ
ಸಹ
ಬಿಡುಗಡೆ
ಮಾಡಬೇಡಿ
ಎಂದು
ಕರೆ
ನೀಡಿದ್ದಾರೆ
ಎನ್ನಲಾಗಿದೆ.
ಸದ್ಯ
ಆದಿಪುರುಷ್
ತಂಡದ
ಎಡವಟ್ಟಿನಿಂದ
ಇದೀಗ
ಭಾರತ
ಚಿತ್ರರಂಗಕ್ಕೆ
ಸಣ್ಣ
ಸಂಕಷ್ಟ
ಶುರುವಾಗಿದೆ.
ಭಾರತದ
ಸಿನಿಮಾಗಳನ್ನು
ಮೆಚ್ಚಿಕೊಂಡು
ವೀಕ್ಷಿಸುತ್ತಿದ್ದ
ಪ್ರೇಕ್ಷಕರಿದ್ದ
ಕಠ್ಮಂಡುವಿನಲ್ಲಿ
ಎಲ್ಲಾ
ಭಾರತದ
ಸಿನಿಮಾಗಳನ್ನು
ಬ್ಯಾನ್
ಮಾಡಲು
ತೀರ್ಮಾನಿಸಿರುವುದು
ನಿಜಕ್ಕೂ
ಬೇಸರದ
ಸಂಗತಿಯೇ
ಸರಿ..
ಆದಿಪುರುಷ್
ಕಲೆಕ್ಷನ್
ಇನ್ನು
ಕಲೆಕ್ಷನ್
ವಿಚಾರಕ್ಕೆ
ಬಂದರೆ
ಸಮಾಧಾನಕರ
ಗಳಿಕೆಯನ್ನು
ಚಿತ್ರ
ಮಾಡಿದೆ.
ಚಿತ್ರತಂಡ
ನೀಡಿರುವ
ಅಧಿಕೃತ
ಮಾಹಿತಿಯ
ಪ್ರಕಾರ
ಚಿತ್ರ
ಮೊದಲ
ದಿನ
ವಿಶ್ವದಾದ್ಯಂತ
140
ಕೋಟಿ
ಗಳಿಸಿದ್ದರೆ,
ಎರಡನೇ
ದಿನ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
100
ಕೋಟಿ
ಗಳಿಸಿದೆ.
ಈ
ಮೂಲಕ
ಚಿತ್ರ
ಮೊದಲ
ಎರಡು
ದಿನಗಳಲ್ಲಿ
ವಿಶ್ವದಾದ್ಯಂತ
ಒಟ್ಟು
240
ಕೋಟಿ
ಗಳಿಕೆ
ಮಾಡಿದ್ದು,
2
ದಿನಗಳಲ್ಲಿ
200
ಕೋಟಿ
ಕ್ಲಬ್
ಸೇರಿದೆ.
ಈ
ಮೂಲಕ
ವೇಗವಾಗಿ
200
ಕೋಟಿ
ಕ್ಲಬ್
ಸೇರಿದ
ಭಾರತದ
ಸಿನಿಮಾಗಳ
ಪಟ್ಟಿಯಲ್ಲಿ
ಆದಿಪುರುಷ್
ಐದನೇ
ಸ್ಥಾನಕ್ಕೇರಿದೆ.
English summary
Kathmandu bans all Indian films in the city amid Adipurush Sita dialogue issue
Sunday, June 18, 2023, 21:55
Story first published: Sunday, June 18, 2023, 21:55 [IST]