ಅಸ್ಸಾಂನ 10 ಜಿಲ್ಲೆಗಳಲ್ಲಿ ಪ್ರವಾಹ: 31,000 ಜನರು ಸಂತ್ರಸ್ತ | Floods in 10 districts of Assam: 31,000 people affected

India

oi-Punith BU

|

Google Oneindia Kannada News

ಗುವಾಹಟಿ, ಜೂನ್‌ 20: ಅಸ್ಸಾಂನಲ್ಲಿ ಮಂಗಳವಾರ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಾಜ್ಯದ 10 ಜಿಲ್ಲೆಗಳಲ್ಲಿ ಸುಮಾರು 31,000 ಜನರು ಪ್ರವಾಹ ಪೀಡಿತರಾಗಿ ತತ್ತರಿಸುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಅನ್ನು ಹೊರಡಿಸಿದ್ದು, ಮುಂದಿನ ಐದು ದಿನಗಳಲ್ಲಿ ಅಸ್ಸಾಂನ ಹಲವಾರು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಗುವಾಹಟಿಯಲ್ಲಿರುವ IMD ಯ ಪ್ರಾದೇಶಿಕ ಹವಾಮಾನ ಕೇಂದ್ರ (RMC) ವಿಶೇಷ ಹವಾಮಾನ ಬುಲೆಟಿನ್‌ನಲ್ಲಿ 24 ಗಂಟೆಗಳ ಕಾಲ ರೆಡ್ ಅಲರ್ಟ್ ಅನ್ನು ಹೊರಡಿಸಿದೆ. ನಂತರದ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್‌ ಮತ್ತು ಗುರುವಾರ ಯಲ್ಲೋ ಅಲರ್ಟ್‌ ನೀಡಲಾಗಿದೆ.

Floods in 10 districts of Assam

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ದೈನಂದಿನ ಪ್ರವಾಹ ವರದಿಯ ಪ್ರಕಾರ, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ಕೊಕ್ರಜಾರ್, ಲಖಿಂಪುರ, ನಲ್ಬರಿ, ಸೋನಿತ್‌ಪುರ ಮತ್ತು ಉದಲ್‌ಗುರಿ ಜಿಲ್ಲೆಗಳಲ್ಲಿ 30,700 ಕ್ಕೂ ಹೆಚ್ಚು ಜನರು ಪ್ರವಾಹ ಪೀಡಿತರಾಗಿದ್ದಾರೆ ಎನ್ನಲಾಗಿದೆ.

ಲಖಿಂಪುರ ಜಿಲ್ಲೆಯಲ್ಲಿ 22,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ದಿಬ್ರುಗಢದಲ್ಲಿ 3,800 ಕ್ಕೂ ಹೆಚ್ಚು ಜನರು ಮತ್ತು ಕೊಕ್ರಜಾರ್ ಸುಮಾರು 1,800 ಜನರು ಸಂತ್ರಸ್ತರಾಗಿದ್ದಾರೆ ಎಂದು ತಿಳಿದು ಬಂದಿದೆ. ಆಡಳಿತವು ಏಳು ಜಿಲ್ಲೆಗಳಲ್ಲಿ 25 ಪರಿಹಾರ ವಿತರಣಾ ಕೇಂದ್ರಗಳನ್ನು ನಡೆಸುತ್ತಿದೆ, ಆದರೆ ಈಗ ಯಾವುದೇ ಪರಿಹಾರ ಶಿಬಿರ ಕಾರ್ಯನಿರ್ವಹಿಸುತ್ತಿಲ್ಲ.

 Bengaluru Rain Alert: ಗುಡುಗು ಸಹಿತ ಮಳೆ, ಬಿರುಗಾಳಿ ಸಾಧ್ಯತೆ- 198 ಪ್ರವಾಹ ಪೀಡಿತ ಏರಿಯಾಗಳ ಮೇಲೆ ಗಮನ Bengaluru Rain Alert: ಗುಡುಗು ಸಹಿತ ಮಳೆ, ಬಿರುಗಾಳಿ ಸಾಧ್ಯತೆ- 198 ಪ್ರವಾಹ ಪೀಡಿತ ಏರಿಯಾಗಳ ಮೇಲೆ ಗಮನ

ಪ್ರಸ್ತುತ 444 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 4,741.23 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ASDMA ತಿಳಿಸಿದೆ. ಬಿಸ್ವನಾಥ್, ಧುಬ್ರಿ, ದಿಬ್ರುಗಢ್, ಗೋಲಾಘಾಟ್, ಕಮ್ರೂಪ್, ಕರೀಮ್‌ಗಂಜ್, ಕೊಕ್ರಜಾರ್, ಲಖಿಂಪುರ, ಮಜುಲಿ, ಮೊರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್‌ಪುರ, ದಕ್ಷಿಣ ಸಲ್ಮಾರಾ, ತಮುಲ್‌ಪುರ್ ಮತ್ತು ಉಡಲ್‌ಗುರಿಯಲ್ಲಿ ಮಣ್ಣಿನ ಸವಕಳಿಯಾಗಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ.

Floods in 10 districts of Assam

ದಿಮಾ ಹಸಾವೊ, ಕಮ್ರೂಪ್ ಮೆಟ್ರೋಪಾಲಿಟನ್ ಮತ್ತು ಕರೀಮ್‌ಗಂಜ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದ ಘಟನೆಗಳು ವರದಿಯಾಗಿವೆ. ಸೋನಿತ್‌ಪುರ್, ನಾಗಾಂವ್, ನಲ್ಬರಿ, ಬಕ್ಸಾ, ಚಿರಾಂಗ್, ದರ್ರಾಂಗ್, ಧೇಮಾಜಿ, ಗೋಲ್‌ಪಾರಾ, ಗೋಲಾಘಾಟ್, ಕಾಮ್ರೂಪ್, ಕೊಕ್ರಜಾರ್, ಲಖಿಮ್‌ಪುರ್, ದಿಬ್ರುಗಢ್, ಕರೀಮ್‌ಗಂಜ್ ಮತ್ತು ಉದಲ್ಗುರಿಗಳಲ್ಲಿ ಪ್ರವಾಹ ನೀರಿನಿಂದ ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.

ಕ್ಯಾಚಾರ್, ದರ್ರಾಂಗ್, ಜೋರ್ಹತ್, ಕಾಮ್ರೂಪ್ ಮೆಟ್ರೋಪಾಲಿಟನ್, ಕೊಕ್ರಜಾರ್ ಮತ್ತು ನಲ್ಬರಿ ಜಿಲ್ಲೆಗಳಾದ್ಯಂತ ನಗರ ಪ್ರವಾಹವು ಅನೇಕ ಸ್ಥಳಗಳು ಮುಳುಗಡೆಯಾಗಿದೆ. ಬ್ರಹ್ಮಪುತ್ರದ ಉಪನದಿ ಕೊಪಿಲಿ ಕಂಪುರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ವರದಿ ತಿಳಿಸಿದೆ.

English summary

The flood situation in Assam is serious on Tuesday and around 31,000 people in 10 districts of the state are reeling as flood victims, according to local officials.

Story first published: Tuesday, June 20, 2023, 11:04 [IST]

Source link