ಅಸಂಬದ್ಧವಾದ ಹೇಳಿಕೆ ಕೊಟ್ಟರೆ ರಾಜ್ಯದ ಮರ್ಯಾದೆ ಹೋಗುತ್ತದೆ: ಪ್ರತಾಪ್‌ ಸಿಂಹ ಹೀಗೆ ಹೇಳಿದ್ಯಾರಿಗೆ?, ಇಲ್ಲಿದೆ ವಿವರ | Pratap Simha’s reaction on Satish Jarkiholi’s server hack statement

Mysuru

oi-Madhusudhan KR

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜೂನ್‌, 21: ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂಥಾ ಸಚಿವರು ಇದ್ದಾರೆ. ರಾಜ್ಯ ಸಚಿವರಿಗೆ ಓರಿಯಂಟೇಶನ್ ಅಗತ್ಯವಿದೆ ಎಂದು ಸಂಸದ ಪ್ರತಾಪಸಿಂಹ ಮೈಸೂರಿನಲ್ಲಿ ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ಕಂಪ್ಯೂಟರ್‌ ಹ್ಯಾಕ್ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂಥಾ ಸಚಿವರು ಇದ್ದಾರೆ. ಅವರಿಗೆ ಯಾವುದರ ಬಗ್ಗೆಯೂ ಅರಿವಿಲ್ಲದೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿ ಕರ್ನಾಟಕಕ್ಕೆ ಅವಮಾನ ಆಗುತ್ತದ ಎಂದರು.

Pratap Simhas reaction on Satish Jarkiholis server hack statement

ಸಾರ್ವಜನಿಕವಾಗಿ ಏನು ಮಾತನಾಡಬೇಕು ಎನ್ನುವ ಬಗ್ಗೆ ಅರಿವಿರಬೇಕು. ಈ ರೀತಿ ಅಸಂಬದ್ಧವಾದ ಹೇಳಿಕೆ ಕೊಟ್ಟರೆ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಕಂಪ್ಯೂಟರ್‌, ಸರ್ವರ್ ಅನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ನಮ್ಮ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಈ ರೀತಿ ಹೇಳಿಕೆ ಕೊಟ್ಟು ಮುಜುಗರಕ್ಕೆ ಒಳಗಾಗುವುದು ಬೇಡ ಎಂದರು‌.

ಕಿಮ್ಸ್‌ ಆಸ್ಪತ್ರೆಗೆ 1,100 ಸಿಬ್ಬಂದಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡ್ತೇನೆ: ಪ್ರಲ್ಹಾದ್ ಜೋಶಿಕಿಮ್ಸ್‌ ಆಸ್ಪತ್ರೆಗೆ 1,100 ಸಿಬ್ಬಂದಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡ್ತೇನೆ: ಪ್ರಲ್ಹಾದ್ ಜೋಶಿ

ಇನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಶಾಸಕ ಪ್ರದೀಪ್ ಈಶ್ವರ್‌ ವಿಚಾರದ ಬಗ್ಗೆ ಪ್ರಿತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಆದಷ್ಟು ಬೇಗ ಮೊದಲ ಬಾರಿಗೆ ಗೆದ್ದ ಶಾಸಕರಿಗೆ, ಹಿರಿಯ ಶಾಸಕರು ಗೊತ್ತಿಲ್ಲದವರಿಗೆ ಒರಿಯಂಟೇಶನ್ ಪ್ರೋಗ್ರಾಂ ಅಗತ್ಯವಿದೆ. ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತನಾಡಬೇಕು, ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಹೇಳಿ ಎಂದು ಸಲಹೆ ನೀಡಿದರು.

ಅಕ್ಕಿ ವಿಚಾರಕ್ಕೆ ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ, ದೇಶದಲ್ಲಿ ಅಕ್ಕಿ ಕೊಡುತ್ತಿಲ್ಲ ಎಂದು ಯಾರಾದರೂ ಬೊಬ್ಬೆ ಹಾಕುವುದನ್ನು ಕೇಳಿದ್ದೀರಾ. ಓಪನ್ ಮಾರ್ಕೆಟ್‌ನಲ್ಲಿ ತೆಗೆದುಕೊಳ್ಳಿ. ಮಂಡಿ ತೆರೆದು ರಾಜ್ಯದಲ್ಲಿ ಬೆಳೆಯುವ ರೈತರ ಬಳಿ ಭತ್ತ ಖರೀದಿ ಮಾಡಿ ಎಂದರು.

Pratap Simhas reaction on Satish Jarkiholis server hack statement

ನಮ್ಮ ರೈತರು ರಾಜ್ಯದ ಜನತೆಗೆ ಕೊಡುವಷ್ಟು ಅಕ್ಕಿಯನ್ನು ಬೆಳೆದಿದ್ದಾರೆ. ಮಂಡಿ ತೆರೆದು ಕನಿಷ್ಟ ಬೆಲೆ ನಿಗದಿ ಮಾಡಿ ಖರೀದಿ ಮಾಡಿ. ವಿನಾಕರಣ ಮೋದಿ ಅವರನ್ನು ಬೈದುಕೊಂಡು ಓಡಾಡಬೇಡಿ. ಉಚಿತ ಅಕ್ಕಿ ಕೊಡುವಾಗ ಮೋದಿ ಅವರನ್ನು ಕೇಳಿಕೊಂಡು ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.

ಕ್ರಿಶ್ಚಿಯನ್ ಅವರು ಕೇಳಿದಾಗ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತೀರಾ. ಮತ್ತೊಂದೆಡೆ ಮುಸ್ಲಿಮರು ಕೇಳಿದ ಕೂಡಲೇ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೀರಾ. ಸಾಮನ್ಯ ಜನ ವಿದ್ಯುತ್ ಬೆಲೆ ಕಡಿಮೆ ಮಾಡಿ ಅಂದ್ರೆ ಆಗಲ್ಲ ಅಂತೀರಾ. ನಿಮ್ಮದು ಜ‌ನ ವಿರೋಧಿ ಧೋರಣೆಯಾಗಿದೆ. ಆದ್ದರಿಂದ ಮೊದಲು ಬಿಜೆಪಿಯನ್ನು ಬೈಯುದನ್ನ ಬಿಟ್ಟು ಉತ್ತಮ ಕೆಲಸಗಳತ್ತ ಗಮನ ಕೊಡಿ ಎಂದರು.

ಎಂ.ಬಿ ಪಾಟೀಲ್ ಅವರು ನನ್ನ ಬಗ್ಗೆ ಮಾತನಾಡಲಿಲ್ಲ ಅಂದರೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಬಗ್ಗೆ ಅಪಾರವಾದ ಗೌರವ ಇದೆ. ನಾನು ಸಹ ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರ ಬಗ್ಗೆ ಜನರು ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ಕೆಲಸಗಳು ಮಾತನಾಡಬೇಕು, ಮಾತನಾಡುವುದು ಸಾಧನೆ ಆಗಬಾರದು ಎಂದರು.

ಸಚಿವ ಎಚ್.ಸಿ ಮಹದೇವಪ್ಪ ಟ್ವೀಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ವೀರೆಂದ್ರ ಪಾಟೀಲ್, ವೀರಪ್ಪ ಮೊಯ್ಲಿ ಹಾಗೂ ಬಂಗರಾಪ್ಪ ಮೂರು ಜನರನ್ನು 5 ವರ್ಷದಲ್ಲಿ ಬದಲಾಯಿಸಿದ್ದು ಯಾರು ಅಂತಾ. ಈ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ, ಇದರ ಬಗ್ಗೆ ತಿಳಿದುಕೊಂಡು ಮಾತನಾಡಿದರೆ ಒಳ್ಳೆಯದು ಎಂದರು.

English summary

MP Pratap Simha’s reaction on ministrt Satish Jarkiholi’s server hack statement, Pratap Simha outrage against Satish Jarkiholi in Mysuru

Story first published: Wednesday, June 21, 2023, 22:04 [IST]

Source link