ಅಶ್ಲೀಲ ವೆಬ್‌ಸೈಟ್‌ ಭೇದಿಸುವುದನ್ನು ನಿಲ್ಲಿಸಬೇಕು ಅಂತಿದೆ ಈ ಸಂಸ್ಥೆ! | Porn website new owner request to Government for support

International

oi-Malathesha M

By ಒನ್ ಇಂಡಿಯಾ ಡೆಸ್ಕ್

|

Google Oneindia Kannada News

ಸರ್ಕಾರಗಳು ಅಶ್ಲೀಲ ವೆಬ್‌ಸೈಟ್‌ ಭೇದಿಸುವುದನ್ನು ನಿಲ್ಲಿಸಬೇಕು. ಅದರ ಬದಲಾಗಿ ಲೈಂಗಿಕ ಅಭಿವ್ಯಕ್ತಿಯಲ್ಲಿ ಹೆಮ್ಮೆ ಪಡಬೇಕು ಎಂದು ಪೋರ್ನ್‌ಹಬ್‌ನ ಹೊಸ ಮಾಲೀಕರು ಹೇಳಿಕೆ ನೀಡಿದ್ದಾರೆ. ಅಲ್ಲದೆ ಇದನ್ನು ‘ಸಾಮಾನ್ಯ’ವಾಗಿಸಿ ಎಂಬ ಒತ್ತಾಯ ಕೂಡ ಕೇಳಿಬಂದಿದೆ. ಈ ಬಗ್ಗೆ ಪೋರ್ನ್‌ಹಬ್‌ನ ಹೊಸ ಮಾಲೀಕರು AFP ಜೊತೆ ಮಾತನಾಡಿದ್ದು, ಸಂದರ್ಶನ ಇದೀಗ ಹಲ್‌ಚಲ್ ಎಬ್ಬಿಸಿದೆ.

ಅಂದಹಾಗೆ ಕೆನಡಾದ ಖಾಸಗಿ ಈಕ್ವಿಟಿ ಸಂಸ್ಥೆಯಾದ ಎಥಿಕಲ್ ಕ್ಯಾಪಿಟಲ್ ಪಾರ್ಟ್‌ನರ್ಸ್, 3 ತಿಂಗಳ ಹಿಂದೆ ಪೋರ್ನ್‌ಹಬ್‌ನ ಪೋಷಕ ಸಂಸ್ಥೆಯಾಗಿದ್ದ ಮೈಂಡ್‌ಗೀಕ್ ಅನ್ನು ಖರೀದಿಸಿತು. ಅಲ್ಲದೆ ಯುಪೋರ್ನ್ ಸೇರಿ ಇತರ ಸೈಟ್‌ಗಳ ಸ್ಥಿರತೆಯನ್ನೂ ತನ್ನ ನಿಯಂತ್ರಣಕ್ಕೆ ತಂದಿದೆ. ಆದರೆ ಈ ಖರೀದಿ ಪ್ರಕ್ರಿಯೆ ಹಲವು ಸಮಸ್ಯೆಗಳನ್ನೂ ಜೊತೆಗೇ ಹೊತ್ತು ತಂದಿದೆ. ಕಳೆದ ತಿಂಗಳು ಅಮೆರಿಕ ರಾಜ್ಯ ಉತಾಹ್‌ ಕಠಿಣ ಕ್ರಮ ಕೈಗೊಂಡಿತ್ತು, ಅಶ್ಲೀಲ ವೆಬ್‌ಸೈಟ್‌ನ ಬಳಕೆದಾರರ ವಯಸ್ಸನ್ನು ಪರಿಶೀಲಿಸಲು ಆದೇಶಿಸಿದ ನಂತರ ಈ ವೆಬ್‌ಸೈಟ್‌ಗಳನ್ನು ತಮ್ಮ ರಾಜ್ಯದಲ್ಲಿ ಮುಚ್ಚಲು ಆದೇಶಿಸಲಾಗಿತ್ತು. ಹಾಗೇ ಬೇರೆ ಬೇರೆ ದೇಶದಲ್ಲೂ ಹೀಗೆ ಹಲವು ಸಮಸ್ಯೆ ಎದುರಾಗಿವೆ.

Porn website new owner request to Government for support

ಏನ್ ಇದು ‘ಅಶ್ಲೀಲ’ ವಿವಾದ?

ಅಮೆರಿಕದ ಉತಾಹ್ ರಾಜ್ಯದಲ್ಲಿ ಮಾತ್ರವಲ್ಲ ಯುರೋಪ್ ದೇಶ ಫ್ರಾನ್ಸ್‌ನಲ್ಲೂ ಇಂತಹ ಸಮಸ್ಯೆ ತಲೆದೋರಿತ್ತು. ವೆಬ್‌ಸೈಟ್ ಮಾಲೀಕರು ಮತ್ತು ನಿಯಂತ್ರಕರು ಅಲ್ಲಿನ ಹೊಸ ಕಾನೂನ ಅಡಿಯಲ್ಲಿ ಕೆಲಸ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ಜಾರಿ ಮಾಡಿರುವ 2020ರ ಹೊಸ ಕಾನೂನು, ಅಶ್ಲಿಲ ವೆಬ್‌ಸೈಟ್ ಬಳಸುವವರು ವಯಸ್ಸನ್ನು ದೃಢಪಡಿಸುವುದನ್ನೇ ತಲೆನೋವಾಗಿಸಿದೆ. ಹೀಗಾಗಿ ಅಲ್ಲೂ ಕೂಡ ಸಂಸ್ಥೆ ಪರದಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ 2 ಸೈಟ್‌ಗಳು ಯಾವುದೇ ವಯಸ್ಸಿನ ಪರಿಶೀಲನೆಯನ್ನು ಮಾಡಿಲ್ಲ ಎಂಬ ಕಾರಣಕ್ಕೆ ನಿಷೇಧದ ಭೀತಿ ಎದುರಿಸುತ್ತಿವೆ. ಈ ತಲೆನೋವಿನ ಜೊತೆಗೆ ಅಶ್ಲಿಲ ವೆಬ್‌ಸೈಟ್ ಹಾದಿ ಸುಗಮ ಮಾಡುವಂತೆ ಮಾಲೀಕರು ಮನವಿ ಮಾಡಿದ್ದಾರೆ.

‘ನಮಗೆ ಅಪ್ರಾಪ್ತ ವಯಸ್ಸಿನವರು ಬೇಡ’

ಹೀಗೆ ಈ ಎಲ್ಲಾ ವಿವಾದಗಳ ಕುರಿತು ಸಂಸ್ಥೆಯ ಅಧಿಕಾರಿಗಳು ಮಾತನಾಡಿದ್ದು, ‘ನಮ್ಮ ವೆಬ್‌ಸೈಟ್‌ಗಳಲ್ಲಿ ಯಾವುದೇ ಅಪ್ರಾಪ್ತ ವಯಸ್ಸಿನ ಬಳಕೆದಾರರನ್ನು ನಾವು ಬಯಸುವುದಿಲ್ಲ’ ಎಂದು ಸಂಸ್ಥೆಯ ಸೊಲೊಮನ್ ಫ್ರೀಡ್‌ಮನ್ AFPಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ ಜವಾಬ್ದಾರಿಯು ವೆಬ್‌ಸೈಟ್‌ಗಳ ಮೇಲೆ ಬೀಳಬೇಕು ಎಂಬ ಕಲ್ಪನೆ ಬಗ್ಗೆಯೂ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಪರೇಟಿಂಗ್ ಸಿಸ್ಟಮ್‌ಗಳಿಗೆ ಪರಿಹಾರ ಹುಡುಕಲು ಕರೆ ನೀಡಿದೆ. ಇನ್ನು 2020ರಿಂದಲೂ ಮೈಂಡ್‌ಗೀಕ್ ಸಮಸ್ಯೆ ಎದುರಿಸುತ್ತಿದೆ. ಈ ಸಂಸ್ಥೆಯ ವೆಬ್‌ಸೈಟ್ ಕುರಿತು ಹಲವು ಆರೋಪಗಳು ಕೇಳಿಬಂದಿದ್ದವು.

ಸಾಲು ಸಾಲು ಸಮಸ್ಯೆ ಸುಳಿಯಲ್ಲಿ!

ಅಷ್ಟಕ್ಕೂ ಮೈಂಡ್‌ಗೀಕ್ ವಿರುದ್ಧ 2020ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಒಂದು ವರದಿ ಪ್ರಕಟಿಸಿತ್ತು. ಆ ವರದಿ ಪ್ರಕಾರ, ತನ್ನ ಸೈಟ್‌ಗಳಲ್ಲಿ ಅತ್ಯಾಚಾರ ಮತ್ತು ಅಪ್ರಾಪ್ತರನ್ನು ಒಳಗೊಂಡ ಲೈಂಗಿಕತೆ ಬಿಂಬಿಸುವ ವಸ್ತುಗಳನ್ನು ಇದ್ದವು ಎಂಬ ಆರೋಪವಿತ್ತು. ಇದಾದ ಬಳಿಕ ಸಾಲು ಸಾಲು ಸಮಸ್ಯೆ ಎದುರಾಗಿತ್ತು. ಅಲ್ಲದೆ ಮಾಲೀಕರು ಸಂಸ್ಥೆಯನ್ನು ಮಾರಾಟ ಮಾಡಲು ಎರಡು ವರ್ಷಗಳ ಕಾಲ ಪ್ರಯತ್ನಿಸಿದರು ಎಂಬ ವರದಿಗಳು ಓಡಾದ್ದವು. ಆದರೆ ಇದೀಗ ಹೊಸ ಮಾಲೀಕರು ಬಂದ ನಂತರವೂ ಚರ್ಚೆಗಳು ಜೋರಾಗಿವೆ. ಇದೇ ಕಾರಣಕ್ಕೆ ವೆಬ್‌ಸೈಟ್‌ನ ಹೊಸ ಮಾಲೀಕರು ಕೂಡ ಪರದಾಡುತ್ತಿದ್ದು, ಖಾಸಗಿ ಸಂದರ್ಶನದಲ್ಲಿ ಈಗ ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟಿದ್ದಾರೆ.

English summary

Porn website new owner request to Government for support.

Story first published: Sunday, June 25, 2023, 17:53 [IST]

Source link